ಬೆಂಗಳೂರು: ಬಿಟ್ ಕಾಯಿನ್ ವಿಷಯದಲ್ಲಿ ಸರಕಾರ ಮುಕ್ತವಾಗಿದ್ದು, ಯಾರನ್ನೂ ರಕ್ಷಿಸುವ ಅಥವಾ ಯಾವುದೇ ಮಾಹಿತಿಯನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲವೆಂದು, ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ
ಸಚಿವರು, ಇಂದು ವಿಧಾನ ಪರಿಷತ್ ನಲ್ಲಿ, ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ, ಜೆಡಿಎಸ್ ಶಾಸಕ ಶರವಣ ಅವರ ಪ್ರಶ್ನೆಗೆ ಉತ್ತರಿಸಿ, ಬಿಟ್ ಕಾಯಿನ್ ಹಗರಣದಲ್ಲಿ, ಹಣ ಕಳೆದು ಕೊಂಡವರಿಂದ ಇದುವರೆಗೆ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ಮಾಹಿತಿ ನೀಡಿದರು.
ಬಿಟ್ ಕಾಯಿನ್ ವಿಷಯದಲ್ಲಿ ಹಲವಾರು ಬಾರಿ ಸದನದಲ್ಲಿ ನಡೆದ ಚರ್ಚೆಗೆ, ಉತ್ತರ ಒದಗಿಸಲಾಗಿದ್ದು, ಸದಸ್ಯರು ಈ ಕುರಿತು ಯಾವುದೇ ಮಾಹಿತಿ ನೀಡಿದರೆ, ತನಿಖೆ ನಡೆಸಲಾಗುವುದು.

ಬಿಟ್ ಕಾಯಿನ್ ವಿವಾದದ ಕುರಿತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿಯೂ ಅಲ್ಲಿನ ಪೊಲೀಸರು ತನಿಖೆ ನಡೆಸಿದ್ದು, ಕರ್ನಾಟಕದ ಅಥವಾ ದೇಶದ ಯಾರ ಬಗ್ಗೆಯೂ, ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿಲ್ಲ, ಎಂದು ಸಚಿವರು ತಿಳಿಸಿದರು.
#aaraga gnanedra #home minister #america #bitcoin




