TENNIS LEGEND ANNOUNCES RETIREMENT: ನಿವೃತ್ತಿ ಘೋಷಿಸಿದ ಟೆನಿಸ್ ದಿಗ್ಗಜ: ‘ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ’ ಎಂದ ರೋಜರ್ ಫೆಡರರ್

ಸಾರ್ವಕಾಲಿಕ ಶ್ರೇಷ್ಠ, ಪುರುಷರ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್, ಗ್ರ್ಯಾಂಡ್ ಸ್ಲಾಮ್ ಮತ್ತು ಎಟಿಪಿ ಪ್ರವಾಸಗಳಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಫೆಡರರ್ ಗುರುವಾರ ಸ್ಪರ್ಧಾತ್ಮಕ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದು. ತಮ್ಮ ಟ್ವಿಟರ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ.
ಮುಂದಿನ ವಾರದ ಲೇವರ್ ಕಪ್ ತನ್ನ ವೃತ್ತಿಜೀವನದ ಕೊನೆಯ ಎಟಿಪಿ ಪಂದ್ಯಾವಳಿಯಾಗಿದ್ದು, ಅದರ ನಂತರ ಯಾವುದೇ ಗ್ರ್ಯಾಂಡ್ ಸ್ಲಾಮ್ ಅಥವಾ ಟೂರ್ ಈವೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಫೆಡರರ್ ಹೇಳಿಕೊಂಡಿದ್ದಾರೆ.
20 ಗ್ರ್ಯಾಂಡ್-ಸ್ಲ್ಯಾಮ್‌ಗಳನ್ನು ಗೆದ್ದಿರುವ ಫೆಡರರ್ ತಮ್ಮ ಅಭಿಮಾನಿಗಳು ಮತ್ತು ಪ್ರತಿಸ್ಪರ್ಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಮ್ಮ 41 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

“ನನಗೆ 41 ವರ್ಷ. ನಾನು 24 ವರ್ಷಗಳಲ್ಲಿ 1500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಈಗ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಟೆನಿಸ್ ನಾನು ಕನಸು ಕಂಡಿರುವುದಕ್ಕಿಂತ ಹೆಚ್ಚು ಉದಾರವಾಗಿ ನನ್ನನ್ನು ನಡೆಸಿಕೊಂಡಿದೆ ಮತ್ತು ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸಲು ಸಮಯ ಬಂದಾಗ ಗುರುತಿಸಬೇಕಾಗಿದೆ. ಪ್ರತಿ ನಿಮಿಷವೂ ತನ್ನ ಪರವಾಗಿ ನಿಂತಿದ್ದ ಪತ್ನಿ ಮಿರ್ಕಾಗೆ ಫೆಡರರ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

“ಸೆರೆನಾ ವಿಲಿಯಮ್ಸ್ ನಿವೃತ್ತಿಯ ಶಾಕ್​ನಿಂದ ಇನ್ನೂ ಸಂಪೂರ್ಣವಾಗಿ ಹೊರಬರದ ಟೆನಿಸ್ ಅಭಿಮಾನಿಗಳಿಗೆ ಮತ್ತೊಂದು ಆಘಾತ ಇದಾಗಿದೆ.

#Roger Federer #Switzerland #tennis player #retirement #tennis legend #fans #24 years #41year #1500 matched #end my carrier #mirka

More News