PM MODI COAT WAS WORTH CORE RUPEES: ಡೋಂಟ್ ಆಸ್ಕ್ ಎನಿ ಸಿಲ್ಲಿ‌ ಕ್ವಶ್ಚನ್: ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ

ಬೆಂಗಳೂರು : ಅಂಗಿ ಹಾಕ್ತಾರೆ, ಚಡ್ಡಿ ಹಾಕ್ತಾರೆ ಅಂತೆಲ್ಲ ಕೇಳ್ತಿರಲ್ಲ… ಇಂಥ ಸಿಲ್ಲಿ ಕ್ವಶ್ಚನ್ಸ್ ಎಲ್ಲ ಅವರು ಹೇಳ್ತಾರೆ ಅಂತ ನೀವೂ ಕೇಳ್ತೀರಲ್ರೀ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲರಾದರು.
ಸಿದ್ದರಾಮಯ್ಯ ಅವರು ದುಬಾರಿ ವಾಚ್ ಕಟ್ತಾರೆಂಬ ಬಿಜೆಪಿ ನಾಯಕರ ಆರೋಪದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವ ಬಟ್ಟೆ ಹಾಕ್ತೀರ, ಏನ್ ಹಾಕ್ತೀರ ಇದಕ್ಕೆ ಹೇಳ್ಬೇಕಾ..? ಮೋದಿ ಕೋಟ್ ಹಾಕಿದ್ರಲ್ಲ ಕೋಟಿ ರೂಪಾಯಿಯದ್ದು ಅದನ್ನು ಕೇಳಿದ್ರಾ?. ಇದನ್ನ ನೀವು ಕೇಳಲೂ ಬಾರದು ನಾನು ಹೇಳುವುದೂ ಇಲ್ಲ. ಥೂ…ಅವರು ಕೇಳ್ತಾರೆ ಅಂತ ನೀವು ಕೇಳ್ತಿರಲ್ರೀ.. ಡೋಂಟ್ ಆಸ್ಕ್ ಎನಿ ಸಿಲ್ಲಿ‌ಕ್ವಶ್ಚನ್ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಗರಂ ಆಗಿಯೇ ಸಿದ್ದರಾಮಯ್ಯ ಉತ್ತರಿಸಿದರು.
ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರು, ಸಿದ್ದರಾಮಯ್ಯ ಬಳಿ 8 ದುಬಾರಿ ವಾಚ್‌ಗಳಿವೆ. ಉದ್ಯಮಿಯೊಬ್ಬರಿಂದ ರೋಲೆಕ್ಸ್‌ ವಾಚ್‌ ಪಡೆದುಕೊಂಡಿದ್ದಾರೆ. ಕಲ್ಲಿದ್ದಲು ಡೀಲ್‌ ವಾಚ್‌ ಪಡೆದುಕೊಂಡಿದ್ದಾರೆ. ಹೈದರಬಾದ್‌ ಉದ್ಯಮಿ ವಿಜಯ್‌ ಮಂದಾನಿ ಕೋಟ್ಯಂತರ ಮೌಲ್ಯದ ವಾಚ್‌ ಗಿಫ್ಟ್‌ ಪಡೆದಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಚಲವಾದಿ ನಾರಾಯಣ ಸ್ವಾಮಿ ಆರೋಪ ಮಾಡಿದ್ದರು.
ಈ ಬಗ್ಗೆ ಮಾತನಾಡಿದ ಬಿಜೆಪಿ ವಿಧಾನಪರಿಷತ್ ಎನ್.ರವಿಕುಮಾರ್, ಯಾರಾದ್ರು ದುಬಾರಿ ವಾಚ್ ಉಡುಗೊರೆ ನೀಡಿದ ಹಿಂದಿನ ನಿಖರವಾದ ಕಾರಣ ನಮಗೆ ಯಾರಿಗೂ ತಿಳಿದಿಲ್ಲ. ಅದನ್ನು ರಾಜ್ಯದ ಖಜಾನೆಗೆ ಹಸ್ತಾಂತರಿಸಲಾಯಿತು. ಆದರೆ ಪ್ರಕರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳಲಾಗಿಲ್ಲ. ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ.
ಯಾರು ವಾಚ್ ಉಡುಗೊರೆ ನೀಡಿದರು ಮತ್ತು ಏಕೆ? ಇದು ಸ್ಪಷ್ಟವಾಗಬೇಕಿದೆ. ಅದರ ಹಿಂದೆ ಏನಾದರೂ ಕಾರಣವಿದೆಯೇ? ಯಾರಾದರೂ ಸಿಎಂಗೆ ದುಬಾರಿ ವಾಚ್ ಕೊಟ್ಟಿದ್ದು ಏಕೆ? ಇಂತಹ ಅನೇಕ ಉತ್ತರವಿಲ್ಲದ ಪ್ರಶ್ನೆಗಳಿವೆ. ನಾವು ಈ ಬಗ್ಗೆ ವಿವರವಾದ ತನಿಖೆ ಬಯಸುತ್ತೇವೆ ಎಂದು ಹೇಳಿದ್ದು, ಮತ್ತೇ ಸಿದ್ದರಾಮಯ್ಯ ವಾಚ್ ಪ್ರಕರಣ ಮುನ್ನೆಲೆಗೆ ಬಂದಿದೆ.

More News