DK SHIVAKUMAR OPPOSED ED NOTICE: ಡಿಕೆಶಿಗೆ ಇಡಿ ಕಂಟಕ: ನಾನೇನು ಮಾಡಿಲ್ಲ.. ನನ್ ಮೇಲೆ ಹಗರಣವೇ ಇಲ್ಲ ಎಂದ ಕೆಪಿಸಿಸಿ ಅಧ್ಯಕ್ಷ..

ಬೆಂಗಳೂರು : ಅಕ್ರಮ ಹಣ ವಹಿವಾಟು, ಬೇನಾಮಿ ಆಸ್ತಿ ಕುರಿತ ಆರೋಪ ಎದುರಿಸ್ತಿರುವ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಗೆ ಮತ್ತೊಮ್ಮೆ ಇಡಿ ಸಂಕಷ್ಟ ಎದುರಾಗಿದೆ. 

ಅಕ್ರಮ ಹಣ ವಹಿವಾಟು ನಡೆಸಿರುವ ಆರೋಪದ ಹಿನ್ನಲೆ  2019ರಲ್ಲಿ ದಾಖಲಿಸಿದ್ದ ಪ್ರಕರಣ ಕುರಿತು ದೆಹಲಿಯ ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಒಡೆತನಕ್ಕೆ ಸೇರಿದ ಪ್ಲಾಟ್ ನಲ್ಲಿ 8.5 ಕೋಟಿ ರೂ. ಬೇನಾಮಿ ಹಣ ಪತ್ತೆಯಾದ ಬಗ್ಗೆ ಐಟಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಇಡಿ ಅಧಿಕಾರಿಗಳು ಪಿಎಂಎಲ್‌ಎ ಕಾಯ್ದೆ ಅಡಿ 2018 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ ಶೀಟ್ ಸಲ್ಲಿಕೆಯಾಗಿದ್ದು, ಡಿಕೆಶಿ ದೆಹಲಿಗೆ ಭೇಟಿ ನೀಡುವ ಸಿದ್ದತೆಯಲ್ಲಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಮೈಸೂರಿನಿಂದ ಬಂದ ಬಳಿಕ ದೆಹಲಿಗೆ ಹೋಗ್ತೇನೆ. ಇಡಿ ವಿಚಾರಣೆಗೆ ಹಾಜರಾಗ್ತೇನೆ. ಆಸ್ತಿ ಗಳಿಕೆ ಪ್ರಕರಣದಲ್ಲಿ ನೋಟೀಸ್ ಕೊಟ್ಟಿದ್ದರು.‌ ನಾನು ಅದರ ವಿರುದ್ದ ಕೋರ್ಟ್ ಗೆ ಹೋಗಿದ್ದೆ ಆದರೆ ಈಗ ಮತ್ತೆ ಯಾಕೆ ಹೊಸ ನೊಟೀಸ್ ಕೊಟ್ರು ಗೊತ್ತಿಲ್ಲ ಎಂದು ಹೇಳುವ ಮೂಲಕ ಇಡಿ ವಿರುದ್ಧ ಮತ್ತೆ  ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಅಧಿವೇಶನದ ಹಿನ್ನೆಲೆಯಲ್ಲಿ ವಿನಾಯಿತಿ ಕೇಳಬಹುದಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ ಅಧಿವೇಶನ ಕಾರಣದಿಂದ ವಿಚಾರಣೆಯಿಂದ ವಿನಾಯಿತಿ ಕೇಳಬಹುದು, ಕೇಳಿದರೆ ನಾನು ಪಲಾಯನ ಮಾಡಿದಂತೆ ಆಗುತ್ತದೆ. ನಾನು ಪಲಾಯನ ಮಾಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ನಾನು ಹೋಗುತ್ತೇನೆ ‘ ಎಂದು ತಿಳಿಸಿದರು.

#ED #D K SHIVAKUMAR #KPCC PRESIDENT #DISAPPOINTMENT #NO ESCAPE # ATTEND ED HEARING #MONEY LAUNDERING CASE

More News