Comedian Raju Srivastava passes away: ಹಾಸ್ಯ ನಟ ರಾಜು ಶ್ರೀವಾಸ್ತವ್​ ನಿಧನ: ಫಲಿಸದ ಅಭಿಮಾನಿಗಳ ಪ್ರಾರ್ಥನೆ

ನವದೆಹಲಿ: ಸುಮಾರು 42 ದಿನಗಳಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ರಾಜು ಶ್ರೀವಾಸ್ತವ್ ನಿಧನ ಹೊಂದಿದ್ದಾರೆ. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದ, ಅವರ ಅಭಿಮಾನಿಗಳನ್ನು ದುಖದ ಮಡಲಿನಲ್ಲಿ ಬಿಟ್ಟು ತೆರಳಿದ್ದಾರೆ.
ಭಾರತೀಯ ಚಿತ್ರರಂಗದ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ಅವರು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಕುಟುಂಬದವರು ಖಚಿತಪಡಿಸಿದ್ದಾರೆ.
ಹಲವು ದಿನಗಳಿಂದ ರಾಜು ಶ್ರೀವಾಸ್ತವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಆದರೆ ಯಾರ ಪ್ರಾರ್ಥನೆಯೂ ಫಲಿಸಿಲ್ಲ. ಅವರ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.
ಆಗಸ್ಟ್ 10ರಂದು ದೆಹಲಿಯ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತವಾಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಒಂದು ವಾರದಿಂದ ಅವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜು ಶ್ರೀವಾಸ್ತವ್ ಅವರು ತಮ್ಮ ಸಮಯೋಚಿತ ಹಾಸ್ಯದ ಮೂಲಕ ಖ್ಯಾತಿ ಪಡೆದ ಅವರಿಗೆ ಜಗತ್ತಿನ ಮೂಲೆ ಮೂಲೆಯಿಂದ ಅಭಿಮಾನಿಗಳಿದ್ದಾರೆ. ಕೇವಲ ಸ್ಟ್ಯಾಂಡ್ ಅಪ್ ಹಾಸ್ಯ ಮಾಡುವುದಲ್ಲದೆ, ಮೈನೆ ಪ್ಯಾರ್ ಕಿಯಾ, ಬಾಜಿಗರ್ ಮುಂತಾದ ಚಿತ್ರದಲ್ಲಿ ನಟಿಸಿದ್ದರು.

#raju srivatava #stand up comedian #actor #meine pyar kiya #bhazighar #greatest standup comic #The Great Indian Laughter Challenge

More News