ಬೆಂಗಳೂರು: 40% ಕಮಿಷನ್ ಅಭಿಯಾನವನ್ನು ಮುಂದುವರೆಸಿರುವ ಕಾಂಗ್ರೆಸ್, ಇಂದು 40% ಕಮಿಷನ್ ಸರ್ಕಾರ ಎಂದು ಬರೆದಿರುವ ಮಾಸ್ಕ್ ಅನ್ನು ಮುಖಕ್ಕೆ ಹಾಕಿ ಸದನಕ್ಕೆ ಆಗಮಿಸಿದರು.
ಹಾಗೆಯೇ ಅದೇ ರೀತಿಯಲ್ಲಿ ಪೋಸ್ಟರ್ ಹಾಕಿದ ಕಾಂಗ್ರೆಸ್ ಕಾರ್ಯಕರ್ತರನ್ನು ಈಗಾಗಲೇ ಬಂಧಿಸಲಾಗಿದೆ, ಅದೇ ರೀತಿಯಲ್ಲಿ ಪೋಸ್ಟರ್ ಹಾಕಿದ ಬಿಜೆಪಿಯವರನ್ನು ಬಂಧಿಸಬೇಕೆಂದು ಪರಿಷತ್ ವಿರೋಧ ಪಕ್ಷಧ ನಾಯಕ ಬಿ ಕೆ ಹರಿಪ್ರಸಾದ್ ಆಗ್ರಹಿಸಿದರು.
ಕೇವಲ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರೆ ಆಗದು, ಪೋಸ್ಟರ್ ಹಾಕಿದ್ದ ಬಿಜೆಪಿಯವರನ್ನೂ ಬಂಧಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಬಿಜೆಪಿಗೊಂದು ಕಾನೂನು, ಕಾಂಗ್ರೆಸ್ ಪಕ್ಷಕ್ಕೊಂದು ಕಾನೂನಲ್ಲ ಎಂದು ಹೇಳಿದಾಗ ಸದನದಲ್ಲಿ ಗದ್ದಲ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

ನೋಟಿಸ್ ಕೊಡಿ ನಾನು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಸಭಾಪತಿ ಸದನಕ್ಕೆ ತಿಳಿಸಿದರು. ನಮಗೆ ಹೇಡಿಗಳು ಅಂದಿದ್ದಾರೆ ಎಂದ ಹರಿಪ್ರಸಾದ್, ನಾವು ಹೇಡಿಗಳಲ್ಲ, ನೀವು ರಣ ಹೇಡಿಗಳು ಎಂದರು.

ಇದರಿಂದ ಸದನದಲ್ಲಿ ಗದ್ದಲ ಮುಂದುವರೆದಿದ್ದರಿಂದ, ಸದನವನ್ನು ಸಭಾಪತಿ ಹತ್ತು ನಿಮಿಷಗಳ ಕಾಲ ಮುಂದೂಡಿದರು. ಆದರೂ ಕೂಡ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರಲ್ಲದೆ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
#40% commission mask #congress leaders #home minister #council #adjourned




