ಬೀದರ್: ಬಡ ಜನರ ಅನಾರೋಗ್ಯ ಸಂದರ್ಭದಲ್ಲಿ ಅವರಿಗೆ ಸೇರಬೇಕಾಗಿದ್ದ ಸರ್ಕಾರಿ ಆಸ್ಪತ್ರೆಯ ಔಷಧಿ ಮತ್ತು ಮಾತ್ರೆಗಳು ನದಿಯ ಪಾಲಾಗಿರುವ ಘಟನೆ ಬೀದರ್ ನ ಭಾಲ್ಕಿ ತಾಲ್ಲೂಕಿನ ಇಂಚೂರ್-ಗೋರಚಿಂಚೋಳಿಯ ಮಾಂಜ್ರಾ ಚುಳಕಿ ನಾಲಾ ಜಲಾಶಯದಲ್ಲಿ ಪತ್ತೆಯಾಗಿವೆ.
ಸರ್ಕಾರಿ ಆಸ್ಪತ್ರೆಯಲ್ಲಿ ಇರಬೇಕಾದ ಔಷಧ ಮಾತ್ರೆಗಳು ಜಲಾಶಯದಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಔಷಧಿ ಮಾತ್ರೆಗಳ ಅವಧಿ ಮುಗಿಯುವ ಮುನ್ನವೇ ಜಲಾಶಯದ ಸೇತುವೆ ಬಳಿ ಬಿಸಾಡಿದ್ದಾರೆ ಎಂದು ದೂರಿದ್ದಾರೆ.
ರಾಶಿ ರಾಶಿ ಔಷಧಿ ಮಾತ್ರೆಗಳು, ಟಾನಿಕ್, ಚುಚ್ಚುಮದ್ದು, ಓಆರ್ ಎಸ್ ಪ್ಯಾಕೇಟ್ ಸೇರಿದಂತೆ ಅಪಾರ ಪ್ರಮಾಣದ ಸರ್ಕಾರಿ ಆಸ್ಪತ್ರೆಯ ಔಷಧಿ ಮಾತ್ರೆಗಳು ಬಿಸಾಡಿರುವುದನ್ನು ಕಂಡು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಾಶಯದಲ್ಲಿ ಇಷ್ಚೊಂದು ಪ್ರಮಾಣದಲ್ಲಿ ಔಷಧಿಗಳು ಕಂಡುಬಂದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಸುಳಿದಾಡಲೇ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#medicines #bider #manjra dam #bhalki




