ಬೌಲರ್ ಗಳ ಸಂಘಟಿತ ದಾಳಿ- ಅಮೋಘ ಗೆಲುವು – ಭಾರತ ಕ್ರಿಕೆಟ್ ತಂಡಕ್ಕೆ 2-1ರ ಮುನ್ನಡೆ

ಬೆಂಗಳೂರು : ವೇಗ ಮತ್ತು ಸ್ವಿನ್ ದಾಳಿಯ ಮೂಲಕ ಎದುರಾಳಿ ಇಂಗ್ಲೆಂಡ್ ತಂಡವನ್ನು ಭಾರತ ತಂಡ ಕಂಗೆಡಿಸಿ 157 ರನ್ ಗಳ ಅಮೋಘ ಗೆಲುವನ್ನು ದಾಖಲಿಸಿದೆ. ಈ ಮೂಲಕ ಲಂಡನ್ ನಲ್ಲಿ ನಡೆಯುತ್ತಿರುವ ಐದು  ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದ ಭಾರತ  ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.   

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ, ಇಂಗ್ಲೆಂಡ್ ತಂಡಕ್ಕೆ ಮುನ್ನಡೆಬಿಟ್ಟುಕೊಟ್ಟರೂ, ಎರಡನೇ ಇನ್ನಿಂಗ್ಸ್ ನಲ್ಲಿ ದಿಟ್ಟ ಬ್ಯಾಂಟಿಂಗ್ಮಾಡಿದ ಭಾರತತಂಡ 368ರನ್ ಗಳ ಗೆಲುವಿನ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತ್ತು. ಇದನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ, 210 ರನ್ ಗಳಿಗೆ ಸರ್ವ ಪತನಗೊಂಡಿತ್ತು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 61.3 ಓವರ್ ಗೆ ಕೇವಲ 191 ರನ್ ಹೊಡೆದಿತ್ತು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 84 ಓವರ್ ಗೆ 290 ರನ್ ಹೊಡೆದಿತ್ತು. ಅಲ್ಪ ಮುನ್ನಡೆಯನ್ನ ಇಂಗ್ಲೆಂಡ್ ತಂಡ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 148.2 ಓವರ್ ನಲ್ಲಿ 466 ರನ್ ಗಳ ಹೊಡೆತು, ಒಟ್ಟು 368ರನ್ ಗಳ ಗುರಿಯನ್ನು ನೀಡಿತ್ತು.

ಇದನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೋಡಿಗಳಾದ ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಉಮೇಶ್ ಯಾದವ್ ಮೂರು ವಿಕೆಟ್,  ಜಸ್ ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ಮತ್ತು ಶಾರ್ದುಲ್ ಠಾಕೂರ್ ತಲಾ ಎರಡು ವಿಕೆಟ್ ಪಡೆಯುವುದರ ಮೂಲಕ ಭಾರತ ತಂಡಕ್ಕೆ ಜಯವನ್ನು ತಂದುಕೊಟ್ಟರು. ,  

More News