ಬೀದರ್ : ವಿದ್ಯೆ ಕಲಿಸಿದ ಗುರುಗಳಿಂದ ಸಾಲದ ರೂಪದಲ್ಲಿ ಪಡೆದುಕೊಂಡ ಹಣವನ್ನು ವಾಪಸ್ಸು ನೀಡದೇ ಮೋಸ ಮಾಡಿದ ಪ್ರಕರಣ ಸಂಬಂಧ ಅವರಿಗೆ ನ್ಯಾಯಾಲಯ ದಂಡ ವಿಧಿಸಿದೆ ಎಂಬ ಆರೋಪ ಕೇಳಿಬಂದಿದೆ.
ಇಂತಹ ಗುರುತರ ಆರೋಪ ಅವರ ಮೇಲಿದ್ದರೂ ಅವರು ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಸನ್ಮಾನ ಮಾಡುತ್ತಿರುವುದು ಎಷ್ಟು ಸಮಂಜಸ ಎಂದು ಏಕತಾ ಫೌಂಡೇಶನ್ ಮುಖ್ಯಸ್ಥ ರವಿ ಸ್ವಾಮಿ ಆರೋಪಿಸಿದ್ದಾರೆ.
ಬೀದರ್ ಜಿಲ್ಲೆಯ ತೇಜೆರಾವ್ ಮಾಣಿಕರಾವ್ ಬಿರಾದಾರ್ ಅವರಿಂದ 1999ರಲ್ಲಿ ಚೆಕ್ ವೊಂದನ್ನು ನೀಡಿ ಹಣ ಪಡೆದು ಮೋಸ ಮಾಡಿದ್ದಾರೆ, ಈ ಘಟನೆ ಸಂಬಂಧ ಮಹಾರಾಷ್ಟ್ರದ ಬಿಲ್ಲೋಳಿ ನ್ಯಾಯಾಲಯ ಜುಲೈ 29, 2004 ರಂದು ತೀಪ್ರು ನೀಡಿ ಪ್ರಭು ಚವ್ಹಾಣ್ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಎಂದು ಏಕತಾ ಫೌಂಡೇಶನ್ ಮುಖ್ಯಸ್ಥ ರವಿಸ್ವಾಮಿ ಆರೋಪಿಸಿದ್ದಾರೆ.
ಸಚಿವ ಪ್ರಭು ಚವ್ಹಾಣ್ ತನ್ನ ಗುರುಗಳಿಗೆ ಮೋಸ ಮಾಡಿರುವ ನ್ಯಾಯಾಲಯದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಶಿಕ್ಷಕರಿಗೆ ಸನ್ಮಾನಿಸುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ತಿಳಿಸಿದ್ದಾರೆ.

ಸಚಿವ ಪ್ರಭು ಚವ್ಹಾಣ್ ಔರಾದ್ ನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡುವುದು ಎಷ್ಟು ಸರಿ, ತಮಗೆ ವಿದ್ಯೆಯನ್ನು ಕಲಿಸಿದ ಗುರುಗಳಿಗೆ ಅನ್ಯಾಯವೆಸಗಿ ಇದೀಗ ಬೇರೆ ಗುರುಗಳಿಗೆ ಸನ್ಮಾನ ಮಾಡಲು ಯಾವುದೇ ಹಕ್ಕು ಇಲ್ಲ ಎಂದು ರವಿ ಸ್ವಾಮಿ ಅವರು ಸಚಿವ ಪ್ರಭು ಚವ್ಹಾಣ್ ವಿರುದ್ಧ ವಾಗ್ದಾಳಿ ನಡೆಸಿದರು..


ಮಹಾರಾಷ್ಟ್ರ ಬಿಲ್ಲೋಳಿ ನಾಯ್ಯಾಲಯದ ವ್ಯಜ್ಯ ಸಂಖ್ಯೆ.scc ಸಂಖ್ಯೆ 120/2000 ..29/07/2004 ರಂದು ತೀರ್ಪು ನೀಡಿದೆ ಎಂದು ಅವರು ವಿವರಿಸಿದ್ದಾರೆ. ತಮಗೆ ಅಕ್ಷರ ಜ್ಞಾನ ನೀಡಿದ ಶಿಕ್ಷಕರಿಗೆ ಮೋಸಾ ಮಾಡಿದ್ದಾರೆ ಎಂದು ರವಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಮಾಡಿದ ದುಡ್ಡಿನಲ್ಲಿ ಇಂದು ಔರಾದ್ ನಲ್ಲಿ ಶಿಕ್ಷಕರ ದಿನಾಚರಣೆ ಮಾಡಲಾಗುತ್ತಿದೆ ಎಂದು ರವಿಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
#prabhu chauhan #minister #cheating case #ourad #teacher




