MIRACLE ESCAPE: ಹಳೇ ಸೇತುವೆ ತೆರವು ವೇಳೆ ನಡೆಯಿತು ಅನಾಹುತ: ನಿಜಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ?

ಉತ್ತರ ಪ್ರದೇಶ: ಆಯಸ್ಸು ಗಟ್ಟಿ ಇದ್ದರೇ ಸಾವಿನ ದವಡೆಯಿಂದ ಕೂದಲೆಳೆಯ ಅಂತರದಿಂದ ಪಾರಾಗುತ್ತಾರೆ ಅನ್ನೋ ಮಾತನ್ನು ಪ್ರತಿಯೊಬ್ಬರು ಕೇಳಿದ್ದಾರೆ. ಅದೇ ರೀತಿ ಇಲ್ಲೊಬ್ಬ ಜೆಸಿಬಿ ಚಾಲಕ ಕೆಲಸ ಮಾಡುವಾಗಲೇ ಜೆಸಿಬಿ ಸಮೇತ ತುಂಬಿ ಹರಿಯೋ ನದಿಯ ಪಾಲಾಗಿದ್ದ. ಅದೃಷ್ಟ ನೆಟ್ಟಗಿತ್ತು ಹೇಗೋ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಅಷ್ಟಕ್ಕೂ ಈ ಘಟನೆ ನಡೆದಿರೋದು ಮುಜಾಫರ್ ನಗರದ ಪಾಣಿಪತ್- ಖತಿಮಾ ಹೆದ್ದಾರಿಯಲ್ಲಿ, ಹೌದು ಇಲ್ಲಿನ 100 ವರ್ಷಕ್ಕೂ ಹಳೆಯದಾದ ಸೇತುವೆಯ ತೆರವು ಕಾರ್ಯ ಮಾಡಲಾಗುತ್ತಿತ್ತು. ಈ ವೇಳೆ ಬ್ರಿಡ್ಜ್ ತೆರವು ಮಾಡುವಾಗಲೇ ಜೆಸಿಬಿಯ ಸಮೇತ ಚಾಲಕ ಗಂಗಾ ನದಿಯ ನೀರು ಪಾಲಾಗಿದ್ದ.

ಜೆಸಿಬಿ ಏನೋ ನೀರು ಪಾಲಾಯ್ತು, ಚಾಲಕನ ಹಣೆಬರಹ ಗಟ್ಟಿ ಇದ್ದಿದ್ದರಿಂದ ಆತ ಬದುಕುಳಿದಿದ್ದಾನೆ. ಜೆಸಿಬಿ ನೀರಲ್ಲಿ ಕೊಚ್ಚಿಹೋಗುವ ದೃಶ್ಯ ಹಾಗೂ ಚಾಲಕ ಪ್ರಾಣ ಉಳಿಸಿಕೊಂಡ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

100 ವರ್ಷ ಹಳೆಯದಾದ ಸೇತುವೆಯು ಶಿಥಿಲಗೊಂಡಿತ್ತು. 2021ರಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿದ್ದು ಅಂದಿನಿಂದ ಈ ಸೇತುವೆಯ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

More News