ACTOR VIKRAM: ಸ್ವಲ್ಪ ವಿಸ್ಕಿ ತಗೊಂಡ್ರೆ ಟ್ವಿಟರ್ ರಿಸ್ಕಿ: ಇದು ನನ್ನ ವೈಯಕ್ತಿಕ ಅನುಭವ ನಟ ವಿಕ್ರಮ್

ಸ್ವಲ್ಪ ವಿಸ್ಕಿ ತಗೊಂಡ ಬಳಿಕ ಟ್ವಿಟರ್ ರಿಸ್ಕಿ ಆಗುತ್ತೆ, ಇದು ನನ್ನ ವೈಯಕ್ತಿಕ ಅನುಭವ ಎಂದು ತಮಿಳು ನಟ ವಿಕ್ರಮ್ ಸಾಮಾಜಿಕ ಜಾಲತಾಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೊನ್ನಿಯನ್ ಸೆಲ್ವನ್ ಸಿನಿಮಾ ಪ್ರಚಾರ ಅಬ್ಬರದಿಂದ ಸಾಗಿದೆ. ಎಲ್ಲೆಡೆ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಕಪಿಲ್ ಶೋನಲ್ಲಿ ಭಾಗವಹಿಸಿತ್ತು.
ಈ ವೇಳೆ ಕಪಿಲ್ ಶರ್ಮಾ ವಿಕ್ರಮ್ ಗೆ, ನೀವು ಇತ್ತೀಚಿಗೆ ಟ್ವಿಟರ್ ಖಾತೆ ಹೊಂದಿದ್ದೀರಾ ಅಲ್ವಾ. ಸೋ ಟ್ವಿಟರ್ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ ನಟ ವಿಕ್ರಮ್, ಸ್ವಲ್ಪ ವಿಸ್ಕಿ ತಗೊಂಡ ಬಳಿಕ ಟ್ವಿಟರ್ ರಿಸ್ಕಿ ಆಗತ್ತೆ, ಇದು ನನ್ನ ವೈಯಕ್ತಿಕ ಅನುಭವ ಎಂದು ಹೇಳಿದ್ದಾರೆ.

ಈ ವೇಳೆ ಎಂದಿನಂತೆ ಹಾಸ್ಯಭರಿತವಾಗಿ ಮಾತನಾಡುತ್ತಾ ಕಪಿಲ್ ಶರ್ಮಾ ವಿಕ್ರಮ್ ಗೆ ‘ಒಂದು ದಿನ ಕಪಿಲ್ ಶರ್ಮಾ ಶೋಗೆ ಬರ್ತೀ‌ನಿ ಅಂತ ಅಂದುಕೊಂಡಿದ್ರಾ?’ ಅಂತ ಕೀಟಲೆ ಪ್ರಶ್ನೆ ಕೇಳಿದ್ರು. ಅದಕ್ಕೆ ಉತ್ತರಿಸಿದ ನಟ ವಿಕ್ರಮ್ ನಾನೆಂದೂ ಹಾಗೇ ಯೋಚಿಸಿರಲಿಲ್ಲ.

1976 ರಲ್ಲಿ ನಾನು 8 ನೇ ಕ್ಲಾಸ್ ಓದ್ತಾ ಇರುವಾಗಲೇ ನಿಮ್ಮ ಶೋಗೆ ಬರ್ತೀನಂತ ಬರೆದುಬಿಟ್ಟಿದ್ರು ಅನ್ಸುತ್ತೆ’. ಹಾಗೇ ಹೇಳುವ ಸಂದರ್ಭಕ್ಕೆ ನೀವು ಹುಟ್ಟೇ ಇರಲಿಲ್ಲವೇನೋ ಎಂದು ಕಾಲು ಎಳೆದ ಪ್ರಸಂಗ ನಡೆಯಿತು.

#actor vikram #kapil sharma show #ponneyan selwm #telugu film #director manirathna

More News