BJP HIT BACK CONGRESS: ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ: ತುಟಿಪಿಟಕ್ ಅನ್ನದ ವಿಪಕ್ಷಕ್ಕೆ ಬಿಜೆಪಿ ತರಾಟೆ

ಬೆಂಗಳೂರು: ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಆದರೆ ಈ ಬಗ್ಗೆ ಇದುವರೆಗೂ ರಾಜ್ಯ ವಿರೋಧ ಪಕ್ಷದ ಯಾವುದೇ ನಾಯಕರು ಕೂಡ ಬಹಿರಂಗ ಹೇಳಿಕೆ ನೀಡಿಲ್ಲಾ.
ಇದೇ ವಿಚಾರವಾಗಿ ಬಿಜೆಪಿ ಟ್ವೀಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಪ್ರಶ್ನೆ ಮಾಡಿದೆ.

ಪಿಎಫ್‌ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲಾ ದೇಶ ವಿರೋಧಿ ಚಟುವಟಿಕೆಗಳಿಗೆ @siddaramaiahಮತ್ತು@INCKarnataka ಪಕ್ಷ ಬೆಂಗಾವಲಾಗಿ ನಿಂತಿತ್ತು. ನಿಷೇಧದ ಕುರಿತು ಕೆಪಿಸಿಸಿ ಅಧ್ಯಕ್ಷ @DKShivakumar, ಸಿದ್ದರಾಮಯ್ಯ ಏಕೆ ಇನ್ನೂ ಬಾಯಿ ತೆರೆದಿಲ್ಲ? ಮತಬ್ಯಾಂಕ್‌ ಕಳೆದುಕೊಳ್ಳುವ ಭಯವೇ? ಎಂದು ಬಿಜೆಪಿ ತನ್ನ ಟ್ವೀಟ್ ನಲ್ಲಿ ಕೈ ನಾಯಕರನ್ನು ಪ್ರಶ್ನಿಸಿದೆ.

More News