GOVERNMENT OF SCAMS: ಸಿದ್ದರಾಮಯ್ಯನವರ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು ಅರುಣ್ ಸಿಂಗ್ ಆರೋಪ

ಕಲಬುರಗಿ : ತಮ್ಮ ಸರ್ಕಾರ ಇದ್ದಾಗ ಮಾಡಬಾರದ ಹಗರಣಗಳನ್ನ‌ ಮಾಡಿ ಈಗ ಬಿಜೆಪಿಯತ್ತ ಬೆರಳು‌ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ‘ನೂರು ಇಲಿ ತಿಂದು ಬೆಕ್ಕು ಹಜ್ ಗೆ’ ಹೋಗಿತ್ತಂತೆ ಹಾಗಾಗಿದೆ ಎಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರ ಕಾಲದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಬಡವರ ಆಹಾರ ಧಾನ್ಯ ಹಂಚಿಕೆಯಲ್ಲಿ ಹಗರಣ, ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಹಗರಣ, ಎಸ್ಸಿಎಸ್ಟಿ ಅನುದಾನದಲ್ಲಿ ಹಗರಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು ಈಗ ಬಿಜೆಪಿಯತ್ತ ಬೆರಳು ಮಾಡ್ತಿದ್ದಾರೆಂದು ತಿರುಗೇಟು ನೀಡಿದರು.
ಸಿಎಂ ಬೊಮ್ಮಾಯಿ ಒಬ್ಬ ಕಾಮನ್ ಮ್ಯಾನ್ ಆಗಿದ್ದಾರೆ. ರಾಜ್ಯದ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಗೌರವಕ್ಕೆ ಚ್ಯುತಿ ತರೋದು ಸಾಮಾನ್ಯ ಮನುಷ್ಯನ ಗೌರವಕ್ಕೆ ಚ್ಯುತಿ ತಂದಂತೆ ಅನ್ನೋದು ಕಾಂಗ್ರೆಸ್ ಮರೆತು ಇಲ್ಲಸಲ್ಲದ ಆರೋಪ ಮಾಡುತ್ತಿದೆ. ರಾಜ್ಯದ ಜನತೆಯೇ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಇನ್ನು ಬಿಜೆಪಿಯಲ್ಲಿ ಒಳಜಗಳವಿಲ್ಲ, ಕೆಲವು ಶಾಸಕರಿಗೆ ಏನಾದ್ರೂ ಅಸಮದಾನ ಇರಬಹುದೆ ಹೊರೆತು ಜಗಳಗಳು ಅನ್ನೋದಕ್ಕೆ ಆಗಲ್ಲ, ನಿಜವಾದ ಜಗಳ ಇರೋದು ಕಾಂಗ್ರೆಸ್ ನಲ್ಲಿ, ಈಗ ರಾಜ್ಯಸ್ಥಾನದಲ್ಲಿ ಅಶೋಕ ಗೆಹ್ಲೋಟ್ ಸಚಿವ ಫೈಲೆಟ್ ಮದ್ಯೆ ಜಗಳ‌ ನಡೆದಿದೆ. ಅದೆ ರೀತಿ ಮುಂದೆ ಕರ್ನಾಟಕದಲ್ಲಿ ಇಬ್ಬರು ಲಿಡರ್ ಜಗಳ ಆಡಲಿದ್ದಾರೆಂದು‌ ಡಿಕೆಸಿ, ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡದೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಗರಣಗಳು ನಡೆದಿವೆ. ಅಂದು ಸುಮ್ಮನಿದ್ದ ಬಿಜೆಪಿ ನಾಯಕರು ಅಂದೂ ನಡೆದಿದೆ ಎಂದು ದೂರುವುದು ಎಷ್ಟು ಸರಿ. ಅಲ್ಲದೇ ಅವರದ್ದೇ ಸರ್ಕಾರವಿದೆ, ಅವರ ಹಗರಣಗಳು ಸೇರಿದಂತೆ ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ನಡೆಸಲಿ, ತಪ್ಪು ಯಾರೇ ಮಾಡಿದ್ದರು ಅವರಿಗೆ ಶಿಕ್ಷೆಯಾಗಲಿ ಎನ್ನುವುದು ಜನಸಾಮಾನ್ಯರ ಆಗ್ರಹವಾಗಿದೆ.

More News