BIGG BOSS: ಬಿಗ್ ಬಾಸ್ ಮನೆಯಲ್ಲಿ ನೀರಿಗಾಗಿ ಗಲಾಟೆ: ನಂಗೆ ಪಾಠ ಹೇಳ್ಕೊಡೋಕೆ ಬರ್ಬೇಡಿ ಎಂದ ಸಂಬರ್ಗಿ

ಬಿಗ್ ಬಾಸ್ 9 ನೇ ಸೀಸನ್ ಶುರುವಾದಾಗಿಂದಲೂ ಕಿತ್ತಾಟ, ಚೀರಾಟಗಳಿಗೆ ಫೇಮಸ್ ಆಗಿದೆ. ಇದೀಗ ಬಿಗ್ ಬಾಸ್ ಪ್ರೊಮೋ ರಿಲೀಸ್ ಆಗಿದ್ದು, ಅದರಲ್ಲಿ ನೀರಿನ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ನಡುವೆ ಕಿತ್ತಾಟ ಶುರುವಾಗಿದೆ.
ದೊಡ್ಮನೆಯಲ್ಲಿ 18 ಜನರಿದ್ದು, ಪ್ರತಿಯೊಬ್ಬರು ತಮ್ಮತಮ್ಮ ಆಟ ಪ್ರಾರಂಭಿಸಿದ್ದಾರೆ. ಆಟದ ಜೊತೆ ಜೊತೆಗೆ ಅಳು, ನಗು, ಕೋಪ, ಕಿತ್ತಾಟ ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ಇನ್ನೂ ಸ್ಪರ್ಧಿಗಳು ಪ್ರೇಕ್ಷಕರನ್ನು ರಂಜಿಸಲು ಹಲವಾರು ತರದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.
ಇದೀಗ ಬಿಸ್ ಬಾಸ್ ನ ಇವತ್ತಿನ ಸಂಚಿಕೆಯ ಪ್ರೋಮೋ ಬಿಡುಗಡೆ ಆಗಿದ್ದು, ಅದರಲ್ಲಿ ರೂಪೇಶ್, ಪ್ರಶಾಂತ್ ಸಂಬರಗಿ ನಡುವೆ ತೀರಾ ವಾಗ್ವಾದಗಳು ನಡಿದಿವೆ.
ಗಲಾಟೆ ಏನು :
ಎಲ್ಲರೂ ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡುತ್ತಿರುತ್ತಾರೆ. ಕೆಲವರು ಪಾತ್ರೆ ತೊಳೆಯುತ್ತಿರುತ್ತಾರೆ. ಈ ವೇಳೆ ನೀರು ಸುರೀತಾ ಇರುತ್ತದೆ. ಅದಕ್ಕೆ ರೂಪೇಶ್ ರಾಜಣ್ಣ ನೀರು ಮಿತವಾಗಿ ಬಳಸಿ ಅಂತ ಸಲಹೆ ಕೊಡ್ತಾರೆ. ಅದಕ್ಕೆ ಅನುಪಮಾ ಯಾರಂತ ನೇರವಾಗಿ ಹೇಳ್ಬಿಡಿ ಅಂತಾರೆ. ಆಗ ರೂಪೇಶ್ ನಾನು ಅವರ ಹೆಸರು ಹೇಳಿ ಅವಮಾನ ಮಾಡಲು ಇಷ್ಟಪಡಲ್ಲ ಅಂತಾರೆ.
ಆ ಕ್ಷಣಕ್ಕೆ ರಿಯಾಕ್ಟ್ ಮಾಡಿದ ಪ್ರಶಾಂತ್ ಸಂಬರಗಿ, ನಮಗೆ ನೀತಿ ಪಾಠ ಹೇಳ್ಕೊಡಬೇಡಿ. ನಾವೆಲ್ಲ ನೀತಿ ಪಾಠ ಕೇಳಿಕೊಂಡೇ ಬಂದಿರೋದಂತ ಟಾಂಗ್ ಕೊಡ್ತಾರೆ. ಇದಕ್ಕೆ ಉತ್ತರಿಸಿದ ರೂಪೇಶ್ ನೀವು ಕಲಿತಿಲ್ಲ ಅನ್ಸುತ್ತೆ ಸರ್ ಅಂತಾರೆ. ಅದಕ್ಕೆ ಯಾಕೇ ತಮಟೆ ಹೊಡ್ಕಂಡು ಹೇಳಬೇಕು ನೀರು ಉಳಿಸಿ, ನೀರು ಉಳಿಸಿ ಅಂತ ಎಂದು ಸಂಬರಗಿ ರೂಪೇಶ್ ತಿರುಗೇಟು ನೀಡಿದರು.

ಅಷ್ಟಕ್ಕೆ ನಿಲ್ಲದ ಈ ಜಗಳ ಮುಂದೆ ಹೋಗಿ ನೀರನ್ನ ಯಾರು ವೇಸ್ಟ್ ಮಾಡ್ತಾರೋ ಅವರಿಗೆ ಹೇಳಿದ್ದು, ನೀವ್ಯಾಕೆ ಮಧ್ಯದಲ್ಲಿ ಬರ್ತಿದೀರಾ ಅಂತ ರೂಪೇಶ್ ಸಂಬರಗಿ ಗೆ ತರಾಟೆಗೆ ತೆಗೆದುಕೊಂಡರು. ಈ ನಡುವೆ ಮಾತಿಗೆ ಮಾತು ಬೆಳೆದು ಜೋರಾಗಿ ಕಿರುಚಾಡಿಕೊಂಡರು.
ಇಷ್ಟಾದರೂ ಸುಮ್ಮನೇ ಇರದೇ ಪ್ರಶಾಂತ್ ಸಂಬರಗಿ ಎಲ್ಲರೂ ಮನುಷ್ಯರೆ ಇರೋದು ಇಲ್ಲಿ, ಯಾರು ರಾಕ್ಷಸರಲ್ಲ ಎಂದು ಜೋರಾಗಿ ಕಿರುಚಿದರು. ಒಳ್ಳೆಯದನ್ನು ಹೇಳಿದ್ರೆ ತೆಗೆದುಕೊಳ್ಳಲ್ಲ ಎಂದು ರೂಪೇಶ್ ಪ್ರತಿಕ್ರಿಯೆ ನೀಡಿದ್ರು. ಆದರೆ ಪ್ರಶಾಂತ್ ಚೇರ್ ಮೇಲೆ ಹತ್ತಿ ನಿಂತು ಸಮಾಜವನ್ನು ತಿದ್ದುವುದಕ್ಕೆ ಬರೋರು ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳಬೇಕು ಎಂದು ರೂಪೇಶ್‌ಗೆ ಹೇಳಿದರು.

More News