ಬೆಂಗಳೂರು : ಸಿಬಿಐ ಅಧಿಕಾರಿಗಳು ನನ್ನನ್ನ ತುಂಬಾ ಪ್ರೀತಿಸುತ್ತಿದ್ದಾರೆ, ಅವರು ಟಾರ್ಗೇಟ್ ಮಾಡುತ್ತಿದ್ದಾರೆ ಎಂದು ಹೇಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಇಂದು ಕನಕಪುರದಲ್ಲಿರುವ ಅವರ ಮನೆಗೆ ಸ್ಥಳೀಯ ತಹಶೀಲ್ದಾರೊಂದಿಗೆ ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ತೆರಳಿ ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಮನೆ, ತೋಟ ಮುಂತಾದ ದಾಖಲೆಗಳನ್ನು ಪರಿಶೀಲನೆ ನಡೆಸಿದ ನಂತರ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮನೆಗೆ ತೆರಳಿ ಅನೇಕ ದಾಖಲೆಗಳನ್ನು ಕೇಳಿದ್ದಾರೆ. ಅವುಗಳೆಲ್ಲವನ್ನೂ ನಾನು ಈಗಾಗಲೇ ಸಿಬಿಐ ಅವರಿಗೆ ಸಲ್ಲಿಸಿದ್ದೇನೆ. ಆದರೂ ಇಂದು ಬಂದಿದ್ದಾರೆ ಎಂದು ತಿಳಿಸಿದ ಅವರು, ಇಷ್ಟೇ ನನ್ನ ಬಳಿ ಮಾಹಿತಿ ಇರುವುದು ಬೇರೆ ಮಾಹಿತಿ ನನ್ನ ಬಳಿ ಇಲ್ಲ ಎಂದರು.

ನಾಡಿದ್ದು ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪ್ರಾರಂಭವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಸಿಬಿಐ ಪರಿಶೀಲನೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ, ಇವೆಲ್ಲಾ ನಮ್ಮ ಹಣೆಬರಹ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯವರದ್ದು ಹಾಗೆಯೇ ಇನ್ನಿತರ ಅನೇಕರದ್ದು ಇದೇ ರೀತಿಯ ಕೇಸುಗಳಿವೆ ಅವರಿಗೆ ಯಾವದೇ ನೋಟಿಸ್ ಇಲ್ಲ. ನನಗೆ ಮಾತ್ರ ಯಾತಕ್ಕೆ ಗೊತ್ತಿಲ್ಲ, ನನ್ನ ಆಸ್ತಿಯ ಬಗ್ಗೆ ನಾನು ಲೋಕಾಯುಕ್ತ ಸೇರಿದಂತೆ ಎಲ್ಲಾದ್ದಕ್ಕೂ ನೀಡಿದ್ದೇನೆ. ಆದರೂ ಕೂಡ ಈ ರೀತಿ ನಡೆಯುತ್ತಿದೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.
ಇನ್ನು ನನಗೆ ಬೇರೆ ಸುದ್ದಿ ಇದೆ. ಅದು ಏನು ಮಾಡುತ್ತಾರೆ ನೋಡೋಣ ಎಂದು ಸೂಚ್ಯವಾಗಿ ಹೇಳಿದ ಡಿಕೆಶಿ, ಮತ್ತೆ ಅವರ ವಿರುದ್ಧ ತಂತ್ರಗಾರಿಕೆ ನಡೆಯುತ್ತಿದೆ ಎಂದು ಹೇಳಿದರು.
#CBI OFFICIALS #KANAKAPURA HOUSE #DOCUMENTS VERIFICATION #D K SHIVAKUMAR #KPCC PRESIDENT #LOVE




