‘KANTARA’ FILM HOUSEFULL: “ರಿಷಬ್‌ ಮೈ ಮೇಲೆ ದೈವ ಬಂದಿತ್ತು”..! ಕಾಂತಾರ ಚಿತ್ರ ಭರ್ಜರಿ ಪ್ರದರ್ಶನ

20 ನಿಮಿಷಗಳ ಕಾಲ ರಿಷಬ್‌ ಶೆಟ್ಟಿ ಮೈ ಮೇಲೆ ದೈವ ಬಂದಿತ್ತಂತೆ. ಹೌದಾ.. ಹೀಗೂ ಆಗುತ್ತಾ.. ಸಿನಿಮಾ ಶೂಟಿಂಗ್ ವೇಳೆ..? ಅಥವಾ ಗಾಸಿಪ್ ಹಾ ಅಂತ ನಿಮ್ಗೆ ಅನ್ನಿಸಬಹುದು.. ಆದ್ರೆ ಹೀಗಂತ ನಾವ್ ಹೇಳ್ತಿರೋದಲ್ಲ.. ರಿಷಬ್ ರ ಖಾಸಾ ಸ್ನೇಹಿತ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

‘ಕಾಂತಾರ’ ಸಿನಿಮಾ ತೆರೆ ಕಂಡು ಭರ್ಜರಿ ಪ್ರದರ್ಶನ ಕಂಡಿದ್ದು, ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಸಿನಿಮಾ ಯಶಸ್ಸಿನ ಬಗ್ಗೆ ಮಾತಾಡ್ತಾ ಅವರು, ಕೊನೆ 20 ನಿಮಿಷಗಳಲ್ಲಿ ನನ್ನ ಸ್ನೇಹಿತ ರಿಷಬ್‌ ಮೈ ಮೇಲೆ ದೈವ ಬಂದಿತ್ತು ಎಂದು ಪ್ರಮೋದ್ ಶೆಟ್ಟಿ ಹೇಳಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಮುಂದುವರೆದು ಮಾತನಾಡಿದ ಅವರು, ‘ನಮ್ಮ ಭಾಗದ ಅನೇಕ ಆಚರಣೆಗಳನ್ನು ಅದ್ಭುತವಾಗಿ ತೋರಿಸಿರುವುದಕ್ಕೆ ನನಗೆ ಖುಷಿ ಇದೆ. ನಮ್ಮ ಭಾಗದ ದೈವ ನಂಬುವವರಿಗೆ ಈ ಸಿನಿಮಾ ಒಂದು ರೀತಿ ಆಚರಣೆ, ಸಂಪೂರ್ಣವಾಗಿ ಇದರ ಬಗ್ಗೆ ಗೊತ್ತಿಲ್ಲದವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕೊನೆ 20 ನಿಮಿಷಗಳಲ್ಲಿ ನನ್ನ ಸ್ನೇಹಿತ ರಿಷಬ್‌ ಮೈ ಮೇಲೆ ದೈವ ಬಂದಿತ್ತು ಎಂದು ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.

ಸಿನಿಮಾ ಪ್ರದರ್ಶನ ಬಳಿಕ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಸಾಮಾನ್ಯವಾಗಿ ಸಿನಿಮಾ ಮೇಕಿಂಗ್‌ನಿಂದ ಹಿಡಿದು ಪ್ರತಿಯೊಂದನ್ನು ನಾನು ನೋಡುವೆ, ಆದರೆ ರಿಷಬ್ ನಾನು ನೋಡಬಾರದು ದೊಡ್ಡ ಪರದೆ ಮೇಲೆನೇ ನೋಡಬೇಕು ಅಂದ. ನಿರೀಕ್ಷೆ ಇತ್ತು ಆದರೆ ಕೊನೆ 30 ನಿಮಿಷ ಸಿನಿಮಾ ಅದ್ಭುತವಾಗಿತ್ತು. ಕಾಂತಾರ ಸಿನಿಮಾ ಕ್ಲೈಮ್ಯಾಕ್ಸ್‌ ನಾನ್ಯಾವತ್ತೂ ನೋಡಿಲ್ಲ ಅಷ್ಟು ಚೆನ್ನಾಗಿದೆ. ಈ ಸಿನಿಮಾದ ಕ್ಲೈ ಮ್ಯಾಕ್ಸ್‌ನ ಜನರು ಫಾರ್‌ಎವರ್‌ ನೆನಪಿಟ್ಟುಕೊಳ್ಳುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

More News