ಬೆಂಗಳೂರು : ಬಿಗ್ ಬಾಸ್ ಸೀಸನ್ ಶುರುವಾದ ನಂತರ ಪ್ರೇಮ ಕತೆಗಳು ಆರಂಭಗೊಳ್ಳುತ್ತವೆ. ದೊಡ್ಮನೆಯ 9 ನೇ ಸೀಸನ್ ನಲ್ಲಿ ಐಶ್ವರ್ಯ ಪಿಸ್ಸೆಗೆ ನವಾಜ್ ಎಲ್ಲರ ಎದುರೇ ಲವ್ ಪ್ರಪೋಸ್ ಮಾಡಿದ್ದಾರೆ.
ಬಿಗ್ ಬಾಸ್ ನಲ್ಲಿ ಎಲ್ಲರ ಮೇಲೆ ರೇಗಾಡುತ್ತಿದ್ದ ನವಾಜ್ಬಿದೀಗ ಕ್ಯೂಟ್ ಆಗಿ ಲವ್ ಪ್ರಪೋಸ್ ಮಾಡಿದ್ದಾರೆ. ದೊಡ್ಮನೆಗೆ ಎಂಟ್ರಿ ಕೊಟ್ಟ ಸಮಯದಲ್ಲಿ ನವಾಜ್ ಅವರು ಐಶ್ವರ್ಯಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ನನಗೆ ಹಾಲಿವುಡ್ ಹೀರೋಯಿನ್‌ಗಳು ಎಂದರೆ ಇಷ್ಟ. ಐಶ್ವರ್ಯಾ ಅವರು ನೋಡೋಕೆ ಹಾಲಿವುಡ್ ಹೀರೋಯಿನ್ ತರ ಇದ್ದಾರೆ. ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದರು ನವಾಜ್. ಇದೀಗ ನವಾಜ್ ಒಂದು ಹೆಜ್ಜೆ ಮುಂದೆ ಹೋಗಿ ಪ್ರಪೋಸ್ ಮಾಡಿದ್ದಾರೆ.
ಬಿಗ್ ಬಾಸ್ ನಲ್ಲಿ ನವಾಜ್ ಅವರು, ನೋಡಿ ಐಶ್ವರ್ಯಾ ಅವರೇ, ನಿಮ್ಮನ್ನು ನೋಡಿದಾಗಲೇ ನಾನು ಫಿದಾ ಆದೆ. ನಿಮ್ಮ ರೀತಿ ಇಂಗ್ಲಿಷ್ ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು, ಆದರೆ ಮನಸ್ಸು ದೊಡ್ಡದು. ಚಿಕ್ಕದಾಗಿ ಸೇರಿಕೊಂಡು, ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡ ಮಟ್ಟದಲ್ಲಿ ಪ್ರೀತಿ ಮಾಡುವ ಮೂಲಕ ಚಿಕ್ಕದಾದ ಖುಷಿಪಡೋಣ. ಮಕ್ಕಳನ್ನು ಹೆರೋಣ, ಅದರಲ್ಲಿ ಖುಷಿ ಪಡೋಣ. ಮತ್ತೆ ಮಕ್ಕಳು ಬೆಳೆಯುವಾಗ ನೋಡಿ ನಾವು ಖುಷಿ ಪಡೋಣ ಅಂತ ಪಬ್ಲಿಕ್ ಆಗಿ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ಉತ್ತರಿಸಿದ ಐಶ್ವರ್ಯ ನಿಮಗೆ ಸೂಪರ್ ಹುಡುಗಿ ಸಿಗ್ತಾಳೆ ಅಂತಾರೆ. ಅದಕ್ಕೆ ನವಾಜ್ ಯಾಕೇ ನೀನು ಸಿಗಲ್ವಾ ಅಂತಾನೆ. ಹೀಗೆ ಪ್ರೇಮ ಪಯಣವು ನಡೆದಿದೆ. ದೊಡ್ಮನೆಯಲ್ಲಿ ರೂಪೇಶ್ ಕಾವ್ಯಶ್ರೀ, ಅಮೂಲ್ಯ ಮತ್ತು ರಾಕೇಶ್ ವಿಚಾರವೇ ಸಖತ್ ಸದ್ದು ಮಾಡುತ್ತಿರಬೇಕಾದರೆ, ಇದೀಗ ಐಶ್ವರ್ಯ ನವಾಜ್ ಜೋಡಿಯ ಪ್ರಪೋಸ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ.
#biggboss #biggboss season9 #nawaz #aishwaraiah #love affair




