ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್ಮೆಂಟ್ ಬ್ರೇಕ್ ಆದ ನಂತರ ರಶ್ಮಿಕಾ ಡಿಸ್ಟರ್ಬ್ ನಲ್ಲಿದ್ದಾರೆ. ಅದನ್ನ ಓವರ್ ಕಮ್ ಮಾಡ್ಲಿಕ್ಕೆ ಬೇರೆ ಸಂಗಾತಿಯ ಹುಡುಕಾಟದಲ್ಲಿದ್ದಾರೆ. ಅಷ್ಟೇ ಅಲ್ಲ ನಟ ವಿಜಯ ದೇವರ ಕೊಂಡ ಜೊತೆಗೆ ಬಹಳ ಸಲುಗೆಯಿಂದಿದ್ದಾರೆ ಎಂಬ ಸುದ್ದಿ ಸಿನಿ ಅಭಿಮಾನಿಗಳ ನಡುವೆ ಸಾಕಷ್ಟು ಟಾಕ್ ಕ್ರಿಯೇಟ್ ಮಾಡಿತ್ತು.
ಇಬ್ಬರೂ ಪ್ರೀತಿಸುತ್ತಿದ್ದಾರೆ. ಮದುವೆಯೂ ಆಗೇ ಬಿಡ್ತಾರೆ ಎನ್ನುವಲ್ಲಿಗೆ ಗಾಸಿಪ್ ಹರಿದಾಡಿದವು. ಇದಕ್ಕೆ ಪೂರಕ ಎನ್ನುವಂತೆ ಈ ಜೋಡಿಯೇ ಒಟ್ಟೊಟ್ಟಿಗೆ ಓಡಾಡುತ್ತಿತ್ತು. ತಡರಾತ್ರಿ ಪಾರ್ಟಿಗಳಲ್ಲೂ ಹಾಜರಾಗಿ ಸಾಕಷ್ಟು ಸುದ್ದಿ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಜಯ್ ದೇವರಕೊಂಡ, ನಮ್ಮಿಬ್ಬರ ಮಧ್ಯ ಅಂಥದ್ದೇನೂ ಇಲ್ಲ ಎಂದೇ ವಾದಿಸಿದ್ದರು. ಆಕೆ ಬೆಸ್ಟ್ ಫ್ರೆಂಡ್ ಅನ್ನುವ ಉತ್ತರವನ್ನು ಕೊಟ್ಟಿದ್ದರು. ರಶ್ಮಿಕಾ ಕೂಡ ಅದನ್ನೇ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಇಬ್ಬರೂ ಬೆಳೆಯುತ್ತಿದ್ದೆವು. ಒಟ್ಟೊಟ್ಟಿಗೆ ಸಿನಿಮಾ ಮಾಡಿದೆವು. ಜಾಹೀರಾತಿನಲ್ಲೂ ಕಾಣಿಸಿಕೊಂಡೆವು. ಹಾಗಾಗಿ ಜೊತೆ ಇರಬೇಕಾಗುತ್ತಿತ್ತು. ಅದನ್ನ ರಿಲೇಷನ್ ಶಿಪ್ ಅಂದುಕೊಂಡರಿರುವುದು ತಪ್ಪು ಎಂದು ಸಮಜಾಯಿಷಿ ನೀಡಿದ್ರು.

ನಂತರ ಸ್ವಲ್ಪ ಸಮಯದ ನಂತರ ಒಟ್ಟಿಗೆ ಕಾಣಿಸಿಕೊಳ್ಳುವುದನ್ನ ನಿಲ್ಲಿಸಿದಾಗ ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರಾ ಎಂಬ ಸದ್ದು ಸುದ್ದಿ ಮಾಡಿತ್ತು. ಅದಕ್ಕೂ ಮೊದಲ ಬಾರಿಗೆ ಉತ್ತರ ನೀಡಿರುವ ರಶ್ಮಿಕಾ, ‘ನನ್ನ ಮತ್ತು ವಿಜಯ್ ಜೋಡಿಯನ್ನು ಎಲ್ಲರೂ ಮೆಚ್ಚಿದ್ದಾರೆ. ಮತ್ತೆ ಸಿನಿಮಾ ಮಾಡಬೇಕು ಎಂದು ಹಲವರು ಕೇಳಿದ್ದಾರೆ. ವಿಜಯ್ ಮತ್ತು ನಾನು ಮತ್ತೆ ಸಿನಿಮಾ ಮಾಡುತ್ತೇವೆ. ಇಬ್ಬರಿಗೂ ಒಟ್ಟಿಗೆ ಅಭಿನಯಿಸಬೇಕು ಅನ್ನುವ ಆಸೆ ಇದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ರಶ್ಮಿಕಾ ಹೇಳಿದ್ದು, ವಿಜಯ್ ಜೊತೆಗೆ ಮತ್ತೇ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮಾಹಿತಿ ನೀಡಿದ್ದಾರೆ.
#RESHMIKA MANDANNA #VIJAY DEVERAKONDA #GOSSIP #ACT TOGETHER