ತುಮಕೂರು : ತುಮಕೂರು ನಗರದ ಜೀವನೋಪಾಯ ಕೇಂದ್ರದಲ್ಲಿ ಕೆಲಸ ಮಾಡುವ ಯುವತಿಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಅವರ ತಮ್ಮನಿಗೆ ಜನರು ಹಲ್ಲೆ ಮಾಡಿದ್ದಾರೆ.
ಯಾರಾದರೂ ಒಬ್ಬ ವ್ಯಕ್ತಿ ಪೇಮಸ್ ಆಗುತ್ತಿದ್ದಂತೆಯೇ ಅವರು ಅಥವಾ ಅವರ ಸಂಬಂಧಿಕರು ಸಾಧನೆ ಮಾಡಿದವರಂತೆ ತೋರಿಸಿಕೊಳ್ಳುತ್ತಾರೆ. ಅದೆ ರೀತಿ ತುಮಕೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಮಂಜು ಪಾವಗಡ ತಮ್ಮ ಪ್ರದೀಪ್ ಜನರಿಂದ ಪೆಟ್ಟು ತಿಂದಿದಾನೆ ಎಂಬ ಆರೋಪ ಕೇಳಿಬಂದಿದೆ.

ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿರುವ ಪ್ರದೀಪ್, ಇತ್ತೀಚಿಗೆ ಸಬ್ಸಿಡಿ ಸಾಲ ಕೋರಿ ಇಲ್ಲಿನ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ಸಂದರ್ಭದಲ್ಲಿ ಲಂಚ ಕೊಡುವ ಹಾಗೇ ನಟಿಸಿ ವಿಡಿಯೋ ಮಾಡಿಕೊಂಡಿದ್ದ. ಅದನ್ನು ತೋರಿಸಿ ಇಲ್ಲಿಯೇ ಸಿ ಆರ್ ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ.

ಪ್ರದೀಪ್ ಯುವತಿ ಕೆಲಸ ಮಾಡುವ ಸ್ಥಳಕ್ಕೆ ಬಂದು ಬೆದರಿಕೆ ಹಾಕುತ್ತಿರುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ. ಆ ವೇಳೆ ಅಲ್ಲಿದ್ದ ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಅಲ್ಲದೇ, ಪಾಲಿಕೆ ಆವರಣದೊಳಗೆ ಪ್ರದೀಪ್ ಜೊತೆಗೆ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದಿದ್ದ ನಕಲಿ ಪತ್ರಕರ್ತರಿಗೂ ಗೂಸ ಬಿದ್ದಿವೆ. ಈ ಸಂಬಂಧ ತುಮಕೂರು ನಗರ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
#bigg boss #manju pawaghada #pradeep #assult #tumakuru