ಬ್ಯಾಡ್ ಮ್ಯಾನರ್ಸ್ ಟೀಸರ್ ರಿಲೀಸ್: ರಗಡ್ ಲುಕ್ ನಲ್ಲಿಅಭಿಷೇಕ್

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಬ್ಯಾಡ್ ಮ್ಯಾನರ್ಸ್ ಸಿನಿಮಾ ತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿ ಜೂನಿಯರ್ ರೆಬೆಲ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭ ಕೋರಿದೆ.

ಟೀಸರ್ ಎಂದಿನಂತೆ ನಿರ್ದೇಶಕ ಸೂರಿ ಸ್ಟೈಲ್ ನಲ್ಲಿ ಮೂಡಿ ಬಂದಿದ್ದು ಸಖತ್ ಇಂಪ್ರೆಸಿವ್ ಆಗಿದೆ.ಅಭಿಷೇಕ್ ರಗಡ್ ಲುಕ್ ಹಾಗೂ ಖದರ್ ಕೂಡ ಸಾಕಷ್ಟು ಗಮನ ಸೆಳೆಯುತ್ತಿದೆ.ಸುಧೀರ್ ಕೆ ಎಂ ನಿರ್ಮಾಣದ ಈ ಚಿತ್ರಕ್ಕೆ ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನವಿದೆ.

ಅಭಿಮಾನಿಗಳಿಂದ ಯಂಗ್ ರೆಬೆಲ್ ಸ್ಟಾರ್ ಎಂದೇ ಕರೆಸಿಕೊಳ್ಳೋ ಅಭಿಷೇಕ್ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಚಿತ್ರರಂಗದವರೂ ಕೂಡ ಅಭಿಷೇಕ್ ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.2019ರಲ್ಲಿ ಬಿಡುಗಡೆಯಾದ ಅಮರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿರುವ ಅಭಿಷೇಕ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಧ್ಯ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್, ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶನದ ಹೆಸರಿಡದ ನೂತನ ಚಿತ್ರ ಹಾಗೂ ಕಾಳಿ ಸೇರಿದಂತೆ ಮೂರು ಸಿನಿಮಾಗಳು ಅಭಿಷೇಕ್ ಅಂಬರಿಶ್ ಕೈಯಲ್ಲಿವೆ.

More News