Ramya re-entry Fans are excited ‘ಸ್ವಾತಿಮುತ್ತಿನ ಮಳೆ ಹನಿಯೇ’ಎಂದು ಬೆಳ್ಳಿತೆರೆಗೆ ರಮ್ಯಾ ಎಂಟ್ರಿ : ಅಭಿಮಾನಿಗಳು ಪುಲ್ ಖುಷ್

ರಾಜಕೀಯ ದಿಂದ ಕೊಂಚ ಕಾಲ ದೂರವಿದ್ದ ರಮ್ಯ ಮತ್ತೇ ಸಿನಿ ರಂಗಕ್ಕೇ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಸದ್ದು ಸುದ್ದಿ ನಡುವೆಯೇ ರಮ್ಯಾ ಅಭಿಮಾನಿಗಳಿಗೆ ದಿಲ್ ಖುಷ್ ಆಗುವ ಸುದ್ದಿ ನೀಡಿದ್ದಾರೆ. ಮೋಹಕ ತಾರೆ ರಮ್ಯ ನಿರ್ಮಾಣ ಮಾಡಿ, ನಟಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಬಹಿರಂಗವಾಗಿದೆ.

ಇತ್ತೀಚೆಗಷ್ಟೇ ರಮ್ಯಾ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿ, ಸದ್ಯದಲ್ಲೇ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದರು. ರಮ್ಯ ಕೇವಲ ನಿರ್ಮಾಪಕಿಯಾಗಿ ಮಾತ್ರ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿ ಇರ್ತಾರಾ ಎಂದು ಅಭಿಮಾನಿಗಳು ಬೇಸರ ಪಟ್ಟಿದ್ದರು. ಆದರೀಗ ವಿಜಯದಶಮಿ ದಿನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ.

ಚಿತ್ರಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಟೈಟಲ್ ಫಿಕ್ಸ್ ಆಗಿದ್ದು. ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಜೊತೆ ರಮ್ಯಾ ಕೈ ಜೋಡಿಸಿದ್ದಾರೆ. ರಾಜ್ ಬಿ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿ ಲೀಡ್ ರೋಲ್ ನಲ್ಲಿ ನಟಿಸುತ್ತಿರುವ ಸಿನಿಮಾವನ್ನು ರಮ್ಯ ನಿರ್ಮಾಣ ಮಾಡೋದ್ರ ಜೊತೆಗೆ ನಟನೆ ಕೂಡ ಮಾಡುತ್ತಿದ್ದಾರೆ.

ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಇದೀಗ ಆಕರ್ಷಕವಾದ ಟೈಟಲ್ ರಿಲೀಸ್ ಮಾಡುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು,ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚಿತ್ರದ ಇನ್ನುಳಿದ ಮಾಹಿತಿ ಸದ್ಯದಲ್ಲೇ ಚಿತ್ರತಂಡ ಶೇರ್ ಮಾಡಲಿದೆ.

More News