ವೆದರ್ ತಂಡಿ ಇದೆ. ಹೀಗಾಗಿ ಶೀತಾ, ಕೆಮ್ಮು ಸಾಮಾನ್ಯ ಅನ್ನವ್ರು ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ, ರಾತ್ರಿ ವೇಳೆ ಕೆಮ್ಮುವುದು, ಉಸಿರಾಟ ಕಾಯಿಲೆಯ ಲಕ್ಷಣ ಆಗಿರಬಹುದು ಎಂದು ಎನ್ ಸಿಬಿಐ( National Center for Biotechnology Information) ತಿಳಿಸಿದೆ.
ನಿದ್ರಿಸುವಾಗ ಸುಖಾಸುಮ್ಮನೆ ಕೆಮ್ಮು ಬರುವುದು, ಅನೇಕ ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಎನ್ ಸಿಬಿಐ ವರದಿ ಪ್ರಕಾರ, ರಾತ್ರಿಯಲ್ಲಿ ಉಂಟಾಗುವ ಕೆಮ್ಮು ಆಸ್ತಮಾ, ಬ್ರಾಂಕೈಟಿಸ್ ಅಥವಾ ಉಸಿರಾಟದ ಸೋಂಕು ಸೇರಿದಂತೆ ಉಸಿರಾಟ ಕಾಯಿಲೆಯ ಲಕ್ಷಣ ಆಗಿರಬಹುದು. ಇದರ ಜೊತೆಗೆ ನೀವು ಅಸಿಡಿಟಿ ಅಥವಾ GERD ನಂತಹ ಯಾವುದೇ ಜೀರ್ಣಕಾರಿ ಸಮಸ್ಯೆ ಹೊಂದಿದ್ದರೆ, ಇದರಿಂದ ನೀವು ರಾತ್ರಿ ಕೆಮ್ಮುವ ತೊಂದರೆ ಹೊಂದಿರಬಹುದು. ಇದರ ಹೊರತಾಗಿ ಪರಿಸರದಲ್ಲಿರುವ ಅಲರ್ಜಿಕ್ ಸಂಯುಕ್ತಗಳಾದ ಧೂಳು, ಅಚ್ಚು, ಹಾಸಿಗೆ, ಹುಳಗಳು ಮುಂತಾದವುಗಳಿಂದಲೂ ಜನರು ಕೆಮ್ಮು ಸಮಸ್ಯೆ ಹೊಂದಿರಬಹುದು ಎಂದು ತಿಳಿಸಿದೆ.
ನೀವು ಕೆಮ್ಮನ್ನು ಕಡಿಮೆ ಮಾಡಲು ಕೆಲವು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು.
- ಎನ್ ಐ ಎಚ್ ಪ್ರಕಾರ, ನೋಯುತ್ತಿರುವ ಗಂಟಲು ಅಥವಾ ಗಂಟಲು ಕಿರಿಕಿರಿ ಕಡಿಮೆ ಮಾಡಲು ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡುವುದು ಪ್ರಯೋಜನಕಾರಿ ಆಗಿದೆ. ಇದು ಗಂಟಲಿನಿಂದ ಅನಗತ್ಯ ಕಣಗಳು ಮತ್ತು ರೋಗಕಾರಕ ಅಂಶಗಳನ್ನು ಹೊರಹಾಕಲು ಮತ್ತು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ಮಲಗುವ ಮುನ್ನ ಜೇನುತುಪ್ಪದ ಜೊತೆ ನಿಂಬೆ ರಸ ಹಾಕಿ ಕುಡಿಯುವುದು ಗಂಟಲು ನೋವು ಮತ್ತು ಕಿರಿಕಿರಿ ಶಮನಗೊಳಿಸಲು ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಯೋಗ ಆಧಾರಿತ ಚಿಕಿತ್ಸೆಯ ಮೊರೆಯೂ ಹೋಗಬಹುದು.
- ಶುಂಠಿ ಒಣ ಅಥವಾ ಆಸ್ತಮಾ ಕೆಮ್ಮನ್ನು ನಿವಾರಿಸುತ್ತದೆ. ಇದನ್ನು ಆಹಾರದ ಜೊತೆ ಬೇಯಿಸಬಹುದು ಅಥವಾ ಚಹಾದಲ್ಲಿ ಹಾಕಿ ಸೇವಿಸಬಹುದು.
- ಕೆಮ್ಮು ರಾತ್ರಿ ನಿರಂತರವಾಗಿದ್ದು, ಅದು ತಾನಾಗಿಯೇ ಹೋಗದೇ ಇದ್ದರೆ ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ.