BIGG BOSS: GURUJI BLACKMAILED: “ನನ್ನನ್ನು ಬಿಟ್ಬಿಡಿ.. ಇಲ್ಲ ಕೈ ಕುಯ್ದುಕೊಳ್ತೇನೆ” ಎಂದು ಬ್ಲ್ಯಾಕ್ ಮೇಲ್ ಮಾಡಿದ ಗುರೂಜಿ

ಬಿಗ್ ಬಾಸ್ ಮನೆಯು ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಸದಾ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರತಿಸ್ಪರ್ಧಿ ಕಾವ್ಯಶ್ರೀಗೆ ಚಾಕು ತೋರಿಸಿ ಕೈ ಕೊಯ್ದುಕೊಳ್ತೀನಿ ಎಂದು ಬೆದರಿಸಿದ್ದಾರೆ.
ದೊಡ್ಮನೆ ಸೋಶಿಯಲ್ ಮೀಡಿಯಾ ಸೇರಿದಂತೆ ಜನರ ನಡುವೆ ಸಾಕಷ್ಟು ವಿಚಾರವಾಗಿ ಹೈಲೆಟ್ ಆಗುತ್ತಲೇ ಇದೆ. ಮನೆ ಶುರುವಾಗಿ 13 ದಿನಗಳು ಕಳೆದಿವೆ. ಆದರೆ, ಮನೆಯಲ್ಲಂತೂ ರಣರಂಗವಾಗೋಗಿದೆ. ಆರಂಭದಲ್ಲಿದ್ದ ಜೋಶ್, ಎನರ್ಜಿ, ಎಂಜಾಯ್ ಮೆಂಟ್, ಫನ್, ಶಾಂತಿ, ಶಿಸ್ತು ಇವಾಗ ಇಲ್ಲವಾಗುತ್ತಾ ಹೋಗುತ್ತಿದೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಪೇಮಸ್ ಆದ ಆರ್ಯವರ್ಧನ್ ಗುರೂಜಿ ತಮ್ಮ ಚಾಣಾಕ್ಷತನ, ಅಡುಗೆ, ಟಾಸ್ಕ್ ಆಡುವ ವೈಖರಿಯಿಂದಲೇ ಹೆಸರುವಾಸಿ ಆಗಿದ್ದು, ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೇರ ಮಾತುಗಳಿಂದ ಕೆಲ ಸ್ಪರ್ಧಿಗಳ ಜೊತೆಗೆ ಜಗಳವನ್ನು ಮಾಡಿಕೊಂಡಿದ್ದಾರೆ. ಆಗಾಗ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಇದರಿಂದ ರೋಸಿ ಹೋಗಿರುವ ಗುರೂಜಿ ತಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ.

ಹೀಗಿರುವಾಗ, ಗುರೂಜಿಯನ್ನು ಕೆಣಕಲು ಬಂದ ಕಾವ್ಯಗೆ ಕೈ ಕೊಯ್ದುಕೊಳ್ತೀನಿ ಎಂದು ಬೆದರಿಸಿದ್ದಾರೆ. ಕ್ಯಾಪ್ಟನ್ಸಿ ಸಿಕ್ಕಿದ ನಂತರ ಫ್ರ್ಯಾಂಕ್ ಗಳು ನಡೆಯುವುದು ಅತಿರೇಕವಾಯಿತು. ಕಾವ್ಯಶ್ರೀಯ ವಿರುದ್ಧ ನಾಟಕೀಯವಾಗಿ ಮಾತನಾಡುತ್ತಾರೆ, ಚುಚ್ಚಿ ಮಾತನಾಡಿದ್ದು, ಬೇಸರವಾಯಿತು ಹಲವು ಸಲ ಗುಡುಗಿದ್ದಾರೆ.
ಈ ವಿಚಾರವಾಗಿ ಕಾವ್ಯಶ್ರೀ ನಾನೆಲ್ಲಿ ನಾಟಕೀಯವಾಗಿ ಮಾತನಾಡಿದೆ ಅಂತ ನಯವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಆರ್ಯವರ್ಧನ್ ಗುರೂಜಿ ಕಾವ್ಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಬಿಡಿ, ಇಲ್ಲ ನಾನು ಕೈ ಕೊಯ್ದುಕೊಳ್ತೇನೆ ಎಂದು ಗುರೂಜಿ ಕೈಯಲ್ಲಿ ಚಾಕು ಹಿಡಿದು ಅವಾಜ್ ಹಾಕಿದ್ದಾರೆ.

#kavyasri gowda #aryaverdhan guruji #bigg boss #compitation

More News