KHOSTA 2 VIRUS: ನಿಲ್ಲದ ವೈರಸ್ ಹಾವಳಿ: ಕೊರೋನ ರೂಪಾಂತರ ಖೋಸ್ಟಾ -2 ವೈರಸ್ ಭೀತಿ ಶುರು..

ರಷ್ಯಾದಲ್ಲಿ ಅಮೆರಿಕ ಸಂಶೋಧಕರ ತಂಡವೊಂದು ಬಾವಲಿಗಳಲ್ಲಿ ಕೊರೋನ ರೂಪಾಂತರ ವೈರಸ್ ಅನ್ನು ಪತ್ತೆ ಹಚ್ಚಿದ್ದು, ಜನರಿಗೆ ಸೋಂಕನ್ನು ಹರಡುವ ಸಾಮರ್ಥ್ಯ ಹೊಂದಿದೆ ಎಂದು ಬಹಿರಂಗಪಡಿಸಿದ್ದಾರೆ.
ವಿಶ್ವವೇ ಕಂಡು ಕೇಳದಂತಹ ಒಂದು ಮಾರಣಾಂತಿಕ ಕಾಯಿಲೆ ಇಡೀ ಮನುಕುಲವನ್ನೇ ಕಾಡುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಮುಟ್ಟಿದರೆ ಅಂಟುವ, ಕೆಮ್ಮಿದರೆ ಹರಡುವ ಒಂದು ಕಾಯಿಲೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಕೋಟ್ಯಾಂತರ ಜನರನ್ನು ಸೋಂಕು ಬಾಧಿಸಿತು. ಇದು ಇಡೀ ವಿಶ್ವವನ್ನೇ ಅಲುಗಾಡಿಸಿತು.
ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು, ಬದುಕು ಬೀದಿಗೆ ಬಂದಿತು. ಈ ಸಂದರ್ಭದಲ್ಲಿ ಜನರಿಗೆ ಜೀವವನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿತ್ತು. ಇಂತಹ ಪರಿಸ್ಥಿತಿ ಮರುಕಳಿಸದಿರಲಿ‌ ಎಂದು ಹಲವಾರು ಜನರು ವೈರಾಣು ವಿರುದ್ಧ ಹೋರಾಡಿದರು. ಇದೀಗ ಇದೇ ತರಹದ ವೈರಸ್ ಮತ್ತೆ ಕಾಣಿಸಿಕೊಂಡಿರುವುದು ಆತಂಕವನ್ನು ಉಂಟು ಮಾಡಿದೆ.
ಅಮೆರಿಕ ಸಂಶೋಧಕರು ರಷ್ಯಾದಲ್ಲಿ ಬಾವಲಿಗಳಲ್ಲಿ ಕೊರೋನ ರೂಪಾಂತರ ತಳಿಯಿದೆ ಎಂದು ಗುರುತಿಸಿದ್ದಾರೆ. ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕೊರೋನಾ ವೈರಸ್ ವ್ಯಾಕ್ಸಿನೇಷನ್‌ಗಳಿಗೆ ಖೋಸ್ಟಾ 2 ಎಂಬ ಹೆಸರಿನ ವೈರಸ್ ಪ್ರತಿರೋಧಕವಾಗಿ ಇರಬಹುದು ಎನ್ನಲಾಗಿದೆ. ಇದೇ ವೇಳೆ ಮನುಷ್ಯರಿಗೆ ಬಾವಲಿಗಳ ಮೂಲಕವೂ ಸೋಂಕು ತಗುಲುವ ಬೀತಿಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ಯಾಥೋಜೆನ್ಸ್ ಜರ್ನಲ್ ನಲ್ಲಿ ತಂಡ ನಡೆಸಿದ ಸಂಶೋಧನೆಯ ವರದಿಯನ್ನು ಪ್ರಕಟ ಮಾಡಲಾಗಿದೆ.
ಖೋಸ್ಟಾ 2 ವೈರಸ್ ಅಂದರೆ ಏನು..?
ರೋಗಕಾರಕವನ್ನು ಸಾರ್ಬೆಕೊವೈರಸ್ ಎಂದು ವರ್ಗೀಕರಿಸಲಾಗಿದೆ, ಇದು ಕೊರೋನಾ ವೈರಸ್‌ಗೆ ಸಂಬಂಧಿಸಿದ ರೋಗಕಾರಕವಾಗಿದೆ. ಇದು ಕೋವಿಡ್‌ಗೆ ಕಾರಣವಾದ SARS-CoV-2 ಗೆ ಸಂಬಂಧಿಸಿದೆ ಎಂಬ ಅಂಶವನ್ನು ಹೊರತುಪಡಿಸಿ ಇದರ ಬಗ್ಗೆ ಯಾವ ಮಾಹಿತಿಯೂ ತಿಳಿದು ಬಂದಿಲ್ಲ.
ಎಲ್ಲಿ ಪತ್ತೆಯಾಯಿತು ಈ ವೈರಸ್..?
ಸೋಚಿ ನ್ಯಾಷನಲ್ ಪಾರ್ಕ್ ನಲ್ಲಿ ಕಾಣಸಿಗುವ ಬಾವಲಿಗಳ ಮಾದರಿಯನ್ನು ಮಾರ್ಚ್ ಮತ್ತು ಅಕ್ಟೋಬರ್ 2020 ರಲ್ಲಿ ತೆಗೆಯಲಾಗಿತ್ತು. ಅದರಲ್ಲಿ ಸೂಕ್ಷ್ಮ ಪ್ರಯೋಗ ನಡೆಸಿದ ನಂತರ ಖೋಸ್ಟಾ -2 ಅನ್ನು ಪತ್ತೆ ಮಾಡಲಾಗಿದೆ. ಈ ವೇಳೆಗೆ ವಿಶ್ವವು SARS-CoV-2 ಬಗ್ಗೆ ಭಯಭೀತರಾಗಿದ್ದರು. ಇದರ ನಡುವೆಯೂ ರಷ್ಯಾ ಸರ್ಕಾರ ವೈರಸ್ ನ ಅಸ್ತಿತ್ವವನ್ನು ಮೇ ತಿಂಗಳಲ್ಲಿ ಅಂಗೀಕರಿಸಿಕೊಂಡಿತು.
ಸೋಂಕು ಹೇಗೆ ತಗುಲಿಸುತ್ತದೆ?

ಈ ವೈರಸ್ ಸಹ ಕೊರೋನ ಸೋಂಕಿಗೆ ಹೋಲಿಕೆಯಾಗುತ್ತದೆ‌. ಆ ಸೋಂಕು ಹರಡಲು ಗಮನಾರ್ಹ ಕಾರಣವಾದ SARS-CoV-2 ಹೋಲುವ ರೀತಿಯಲ್ಲಿಯೇ ಇದು ಇದೆ. ಇದು ಮನುಷ್ಯರಿಗೆ ಸೋಂಕು ತಗುಲಲು ಸಹಾಯ ಮಾಡುತ್ತದೆ.
ಲಸಿಕೆಗಳು ಲಭ್ಯವಿದೆಯೇ?
ಸುದ್ದಿ ಮಾಧ್ಯಮವೊಂದು ವರದಿ ಮಾಡಿದನ್ವಯ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ಸಂಶೋದನಾ ವಿಭಾಗದ ತಂಡವು ಸೋಂಕಿನ ಸಾಧ್ಯತೆ ಅರಿಯಲು ವೈರಸ್ ಅನ್ನು ಪರೀಕ್ಷಿಸಲಾಗಿದೆ ಎಂದು ವರದಿ ಮಾಡಿದೆ. ಸಧ್ಯಕ್ಕೆ ಕೊರೋನ ವೈರಸ್ ನಿಯಂತ್ರಣ ಮಾಡಲು ಬಳಕೆ ಮಾಡುತ್ತಿರುವ ಲಸಿಕೆಯು ಒಂದಷ್ಟು ಸಹಾಯ ಆಗಬಲ್ಲದು ಎನ್ನಲಾಗಿದೆ.
ಪ್ರಯೋಗಾಲಯ ಪರೀಕ್ಷೆಯು ಮಾಡರ್ನಾ ಮತ್ತು ಫೈಜರ್‌ನಿಂದ ಎರಡು ಡೋಸ್ ವ್ಯಾಕ್ಸಿನೇಷನ್‌ಗಳಿಗೆ ನಿರೋಧಕ ಎಂದು ತೋರುತ್ತಿದೆ ಎಂದು ಬಹಿರಂಗಪಡಿಸಿದ್ದು, ಅದನ್ನು ಪಡೆದ ಜನರು ಸಾರ್ಸ್ -ಕೋವಿ-2 ಅನ್ನು ಕಂಟ್ರೋಲ್ ಮಾಡಬಹುದು. ಆದರೆ, ಖೋಸ್ಟಾ-2 ಅನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲ ಎನ್ನಲಾಗಿದ್ದು, ಮತ್ತಷ್ಟು ಆಂತಕ ಸೃಷ್ಟಿ ಮಾಡಿದೆ.

More News

You cannot copy content of this page