BIGG BOSS: ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಆಗಿ ಆಯ್ಕೆ

ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡಿದ್ದ, ಎಲ್ಲರೊಂದಿಗೆ ಕಿರಿಕ್ ಗೆ ಇಳಿದು ಗಲಾಟೆ ಮಾಡುತ್ತಿದ್ದ ಆರ್ಯವರ್ಧನ್ ಗುರೂಜಿ ಇದೀಗ ದೊಡ್ಮನೆಯ ಬಾಸ್ ಆಗಿದ್ದಾರೆ.
ಹೌದು, ಬಿಗ್‌ ಬಾಸ್ ಮನೆಯಲ್ಲಿ ಕ್ಯಾಪ್ಟನ್‌ ಆಗಲು ನಡೆದ ಟಾಸ್ಕ್ ನಲ್ಲಿ ಗುರೂಜಿ ಗೆಲ್ಲುವ ಮೂಲಕ ಮನೆಯ ಕ್ಯಾಪ್ಟನ್ ಆಗಿದ್ದಾರೆ. ನಾನೂ ಕ್ಯಾಪ್ಟನ್ ಆಗಬೇಕು ಅಂತಲೇ ಓಡಾಡಿಕೊಡಿದ್ದ ಗುರೂಜಿ ಕೊನೆಗೂ ಅದನ್ನು ಸಾಧಿಸಿದ್ದಾರೆ. ಈ ಟಾಸ್ಕ್ ನಲ್ಲಿ ಆಡಲು ಗುರೂಜಿಯನ್ನು ಅನುಪಮಾ ಗೌಡ ಆಯ್ಕೆ ಮಾಡಿರುವುದೇನೋ ನಿಜ. ಆದರೆ, ಗುರೂಜಿ ಗೆಲುವಿನ ಬಗ್ಗೆ ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ.
ದೊಡ್ಮನೆಯಲ್ಲಿ ಎಲ್ಲರ ನಡುವೆಯೂ ಜಗಳಕ್ಕೆ ನಿಂತ್ಕೊಂಡು ಹೊರಗಡೆ ಪ್ರೇಕ್ಷಕರಿಗೆ ಸದಾ ಮನರಂಜನೆ ನೀಡುತ್ತಿದ್ದ ಗುರೂಜಿ ಕ್ಯಾಪ್ಟನ್ ಆಗೇ ಆಗ್ತೀನಂತ ಡಿಸೈಡ್ ಮಾಡ್ಕೊಂಡು ಫೀಲ್ಡ್ ಗೆ ಇಳಿದಿದ್ದರು. ಅವರ ಗೆಲುವಿಗೆ ಮನೆಯ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಸಹಾಯ ಮಾಡಿದಾರೆ ಅನ್ನೋದು ಇಲ್ಲಿ ಈಗ ಚರ್ಚೆ ನಡೆಯುತ್ತಿದೆ. ಇನ್ನೂ ನೇಹಗೌಡ ಸಹ ಅನುಮಾ ತರ ಮಾತಾಡ್ತಿದ್ರುನೂ ಗುರೂಜಿ ಗೆದ್ದ ಖುಷಿಯಲ್ಲಿ ಎಲ್ಲವನ್ನೂ ಮರೆತು ಎಂಜಾಯ್ ಮೂಡ್ ನಲ್ಲಿದ್ದಾರೆ.
ಕ್ಯಾಪ್ಟನ್ ಗುರೂಜಿ ಗೆಲುವಿನ ಬಗ್ಗೇನೆ ಭಾರೀ ಡೌಟು.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಅಂದ್ರೆ ಟಾಸ್ಕ್ ಆಡಲೇಬೇಕು. ಟಾಸ್ಕ್ ನೀಡುವ ಅಧಿಕಾರವನ್ನು ಈ ಬಾರಿ ವಜ್ರಕಾಯ ತಂಡದ ನಾಯಕಿ ಅನುಪಮಾ ಗೌಡರಿಗೆ ನೀಡಿದ್ದರು. ಅವರು ನಾಲ್ಕು ಜನರನ್ನು ಆಯ್ಕೆ ಮಾಡಬೇಕಿತ್ತು. ಅನುಪಮಾ ಗೌಡ ಕ್ಯಾಪ್ಟನ್ ಟಾಸ್ಕ್ ತಗೊಳ್ಳಲು ಆಯ್ಕೆ ಮಾಡಿದವರಲ್ಲಿ ಆರ್ಯವರ್ದನ್ ಗುರೂಜಿ ಮೊದಲಿಗರಾದರೆ ಅಮೂಲ್ಯ ಗೌಡ, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ ಉಳಿದವರಾಗಿದ್ದರು.
ಆಟ ಹೇಗಿತ್ತು ಗೊತ್ತಾ..?
ಕ್ಯಾಪ್ಟನ್ ಆಟದಲ್ಲಿ ಎಲ್ಲರಿಗೂ ಒಂದೇ ಆಟ ನೀಡಿದ್ದರು. ಕಪ್ಪು ಬಣ್ಣದ ತೆಂಗಿನ ಕಾಯಿ, ಬಿಳಿ ಬಣ್ಣದ ತೆಂಗಿನ ಕಾಯಿಗಳೇ ಇಲ್ಲಿದ್ದವು. ಎಲ್ಲರೂ ಇವುಗಳನ್ನ ನಂಬರ್ ರೂಪದಲ್ಲಿ ಕೂಡಿಸಿ ಗೆಲ್ಲಬೇಕಾಗಿತ್ತು. ಅದರಂತೆ ಇಲ್ಲಿ ನಾಲ್ಕು ಜನ ಮಗ್ನರಾಗಿದ್ದರು. ಆಟವಾಡುತ್ತಿರುವಾಗ ಗುರೂಜಿಯ ಕೈಲಿ ಆಟವಾಡಲು ಕಷ್ಟವಾಗುತ್ತಿತ್ತು‌ ಆಗ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಆರ್ಯವರ್ದನ್ ಗುರೂಜಿಗೆ ಸಹಾಯ ಮಾಡಿದರು. ಕೊನೆಗೂ ಗುರೂಜಿ ಆಟದಲ್ಲಿ ಗೆದ್ದರು.

ಅದನ್ನು ಬಿಗ್ ಬಾಸ್ ಘೋಷಿಸಿದ ಕೂಡಲೇ ನೇಹಾ ಗೌಡ ತಮ್ಮ ಅಸಮಾಧಾನ ಹೊರ ಹಾಕಿದರು..ಆರ್ಯವರ್ದನ್ ಗುರೂಜಿ ಗೆಲುವಿನ ಸಂಭ್ರಮದಲ್ಲಿದ್ದರೆ, ಹಿಂದುಗಡೆ ಇವೆಲ್ಲ ಹೈಡ್ರಾಮ ನಡೆಯುತ್ತಿದೆ. ಆದರೆ, ಗುರೂಜಿ ಯಾವುದಕ್ಕೂ ಕೇರ್ ಮಾಡಲಿಲ್ಲ. ಅಲ್ಲದೆ, ಬಿಗ್ ಬಾಸ್ ನಿಂದ ಮತ್ತೊಂದು ಸಪ್ರೈಸ್ ಕಳಿಸಿದ್ದು, ಆರ್ಯವರ್ಧನ್ ಪುತ್ರಿಯ ವಾಯ್ಸ್ ನೋಟ್ ಕೂಡ ಕಳಿಸಿದ್ದರು.ಇದನ್ನ ಕೇಳಿ ಗುರೂಜಿ ಫುಲ್ ಖುಷ್ ಆಗಿಯೇ ಬಿಟ್ಟರು.

#BOGG BOSS #ARYAVERDHAN GURUJI #ANUPAMA GOWDA #TASK #CAPTAIN #NEHA GOWDA

More News

You cannot copy content of this page