ಆಪ್ಘಾನಿಸ್ತಾನ್ ಸರ್ಕಾರದಲ್ಲಿ ಮೋಸ್ಟ್ ವಾಂಟೆಡ್ ಟೆರರಿಸ್ಟ್

ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್  ಅಖುಂದ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಘೋಷಿಸಿದೆ. ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.

ತಾಲಿಬಾನ್ ಉಗ್ರ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಐವರು ಅಮೆರಿಕದ ಮೋಸ್ಟ್ ವಾಂಟೆಡ್‌ ಟೆರರ್ ಲಿಸ್ಟ್ ನಲ್ಲಿದ್ದಾರೆ. ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದ್ದು, FBI ಲಿಸ್ಟ್ ನಲ್ಲಿ ಸಿರಾಜುದ್ದೀನ್ ಹಕ್ಕಾನಿ ಹೆಸರು ಅಗ್ರ ಸ್ಥಾನದಲ್ಲಿದೆ. ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ತಲೆಗೆ ಅಮೆರಿಕದ FBI ಬರೋಬ್ಬರಿ 40 ಕೋಟಿ ಬಹುಮಾನ ಘೋಷಿಸಿದೆ.

2008ರ ಕಾಬೂಲ್ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಿರಾಜುದ್ದೀನ್ ಹಕ್ಕಾನಿ ಪ್ರಮುಖ ಆರೋಪಿಯಾಗಿದ್ದು, 8 ನಾಗರಿಕರ ಸಾವಿಗೂ ಹಕ್ಕಾನಿ ಕಾರಣವಾಗಿದ್ದ. ಅಫ್ಘಾನಿಸ್ತಾನದ ಅಂದಿನ ಅಧ್ಯಕ್ಷ ಹಮೀದ್ ಕಾರ್ ಜೈ ಹತ್ಯೆಗೆ ಹಕ್ಕಾನಿ ಸಂಚು ರೂಪಿಸಿದ್ದ ಎನ್ನಲಾಗಿದೆ.

ಇನ್ನು, ತಾಲಿಬಾನ್ ಸಂಸ್ಥಾಪಕ ಮತ್ತು ದಿವಂಗತ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ಆಫ್ಘನ್ ನ ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದ್ದು, ಮುಲ್ಲಾ ಯಾಕೂಬ್ ಹೆಸರು ಉಗ್ರ ಪಟ್ಟಿಯಲ್ಲಿದೆ. ಆಫ್ಘಾನ್ ನ ತಾಲಿಬಾನ್ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಐವರು ಅಮೆರಿಕದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಲಿಸ್ಟ್ ನಲ್ಲಿರುವುದು ಗಮನಾರ್ಹ.

More News