ನಟಿ ನಯನತಾರ ಹಾಗೂ ವಿಘ್ನೇಷ್ ಶಿವನ್ ಸಾರೋಗಸಿ ಪದ್ದತಿ ಮೂಲಕ ಮಕ್ಕಳು ಪಡೆದಿದ್ದಾರೆ. ಇದು ಕಾನೂನಿನ್ವಯ ಅಪರಾಧ ಎನ್ನಲಾಗಿದ್ದು, ಇದೀಗ ಎಲ್ಲೆಡೆ ಚರ್ಚೆಗೀಡಾಗಿದೆ.
ನಯನತಾರ ಇತ್ತೀಚಿಗೆ ಅಷ್ಟೇ ಅವಳಿ ಮಕ್ಕಳನ್ನು ಪಡೆಯುವ ಮೂಲಕ ಬಾಡಿಗೆ ತಾಯಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಇವರು ಪಡೆದ ಮಕ್ಕಳು ಸಾರೋಗಸಿ ಪದ್ದತಿ ಎನ್ನಲಾಗಿದ್ದು, ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. 2019 ರಲ್ಲಿ ಸುಪ್ರೀಂ ಕೋರ್ಟ್ ಸಹ ಇದನ್ನು ಹೇಳಿದೆ. ಇದೀಗ ನಯನತಾರ ದಂಪತಿ ಮಕ್ಕಳನ್ನು ಪಡೆದಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ತಮಿಳುನಾಡು ಸರ್ಕಾರ ಸಹ ಹೇಗೆ ಮಕ್ಕಳು ಪಡೆದಿದ್ದಾರೆ ಎನ್ನುವುದನ್ನು ಮಾಹಿತಿ ಪಡೆಯಲಾಗುತ್ತಿದೆ. ಕಾನೂನು ಉಲ್ಲಂಘಿಸಿ ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆದಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದರ ಕುರಿತು ಈಗ ಎಲ್ಲ ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಿದ್ದರೂ ನಯನತಾರ ದಂಪತಿಗಳು ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಯಾರು ಏನಾದರೂ ಅಂದುಕೊಳ್ಳಲಿ ನಮಗೆ ಸರಿ ಅನ್ಸಿದೆ. ಹಾಗೇ ಬದುಕ್ತೀವಿ ಅನ್ಕೊಂಡ ಹಾಗೇ ಇದೆ.
ಏನಿದು ಸರೋಗಸಿ ಪದ್ದತಿ..?
2021 ರಲ್ಲಿ ತಂದಿರುವ ಸರೋಗಸಿ ನಿಯಂತ್ರಣ ಕಾಯ್ದೆಯ ಪ್ರಕಾರ ಮದುವೆಯಾದ ಮೇಲೆ ಗಂಡ – ಹೆಂಡತಿ ನಡುವೆ ಗೊಡವೆಯಾಗಿ ಸಂಬಂಧದಿಂದ ಬಿಡಿಸಿಕೊಂಡು(ಡಿವೋರ್ಸ್) ನಂತರ, ಗಂಡ ಮೃತಪಟ್ಟಿದ್ದರೆ, ಒಂಟಿ ಮಹಿಳೆಯರಿದ್ದರೆ ಅಷ್ಟೇ ಸರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ. ಆದರೆ, ನಯನತಾರ ದಂಪತಿಯು ಮದುವೆಯಾಗುವ 5 ತಿಂಗಳ ಮೊದಲೇ ಈ ಕಾಯ್ದೆಯಡಿ ಪ್ರೋಸೆಸ್ ಶುರು ಮಾಡಿದ್ದಾರೆ ಎನ್ನಲಾಗಿದೆ.

ಈ ಪ್ರಕ್ರಿಯೆಯನ್ನು ಮದುವೆಗೂ ಮೊದಲೇ ಗರ್ಭದಲ್ಲಿ ಮಗು ಬೆಳೆಯುವುದು ಎನ್ನಲಾಗುತ್ತದೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬೇಕೆಂದುಕೊಂಡಿದ್ದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಮದುವೆಯಾಗುವ ಮೊದಲೇ ಒಟ್ಟಿಗೆ ಜೀವಿಸುವ ಜೋಡಿಗಳು ಸರೋಗಸಿ ಮೂಲಕ ಮಕ್ಕಳನ್ನು ಬೆಳೆಸುವ ಅವಕಾಶ ಇಲ್ಲ. ನಯನತಾರ ಮತ್ತು ವಿಘ್ನೇಶ್ ಮದುವೆಗೂ ಮುಂಚೆಯೇ ಸಹ ಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು, ಇದೀಗ ಇವರಿಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ಟ್ರೋಲ್ ಆಗುತ್ತಿರುವ ಈ ಸುದ್ದಿಯು ಇವರಿಬ್ಬರಿಗೂ ಮಕ್ಕಳು ಎಲ್ಲಿಂದ ಬಂದರು, ಹೇಗೆ ಪಡೆದರು, ದತ್ತು ತಗೊಂಡಿದಾರ, ಕಾನೂನು, ನಿಯಮಗಳನ್ನು ಪಾಲಿಸಿದ್ದಾರ ಎಂದೆಲ್ಲಾ ಪ್ರಶ್ನೆಗಳನ್ನು ಸಹ ಕೇಳುತ್ತಿದ್ದಾರೆ. ಸೆಲೆಬ್ರಿಟಿ ಗಳಿಗೆ ಒಂದು ತರ, ಸಾಮಾನ್ಯ ಜನರಿಗೆ ಒಂದು ತರ ಕಾನೂನು ಇದೀಯಾ ಎಂದೆಲ್ಲಾ ಟೀಕೆ ವ್ಯಕ್ತವಾಗುತ್ತಿದೆ.

ಹಲವಾರು ಜನರು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದು, ನಯನತಾರ ಮತ್ತು ವಿಘ್ನೇಷ್ ತೀರ್ಪುನ್ನು ಉಲ್ಲಂಘಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ಅಲ್ಲದೇ, ಇವರಿಗೆ ಶಿಕ್ಷೆಯೂ ಆಗಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಶಿಕ್ಷೆ ಏನು..?
ಸರೋಗಸಿ ನಿಯಮಾನುಸಾರ ಮಕ್ಕಳನ್ನು ಪಡೆದಿದ್ದಲ್ಲಿ ಕಾಯ್ದೆಯ ಅನ್ವಯ 5 ವರ್ಷ ಜೈಲು, 50 ಸಾವಿರ ದಂಡ ವಿಧಿಸಲಾಗುತ್ತದೆ. ಎರಡನೇ ಭಾರಿ ಇದೇ ತಪ್ಪು ಮಾಡಿದರೆ 1 ಲಕ್ಷ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಯನತಾರ ಮತ್ತು ವಿಘ್ನೇಷ್ ದಂಪತಿ ಮಕ್ಕಳನ್ನು ಪಡೆದಿರುವ ಪ್ರಕ್ರಿಯೆ ಬಗ್ಗೆ ಸಾಭೀತು ಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಅಷ್ಟೇ.




