ರಸ್ತೆ ಇಲ್ಲದ ಕಾರಣ ಗರ್ಭಿಣಿಯನ್ನು ಡೋಲಿಯಲ್ಲಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ

ಆಂಧ್ರಪ್ರದೇಶ: ಸ್ವಾತಂತ್ರ್ಯ ಸಿಕ್ಕು 75 ವರ್ಷಗಳೇ ಕಳೆದಿವೆ. ಆದ್ರೆ ಅದೆಷ್ಟು ಜನರಿಗೆ ಮೂಲಭೂತ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿಯೇ ಉಳಿದಿವೆ. ಆಂಧ್ರಪ್ರದೇಶ ಸೀತಾರಾಮರಾಜು ಜಿಲ್ಲೆಯ ಅಲ್ಲೂರಿ ಎಂಬ ಗ್ರಾಮದಲ್ಲಿ ಮನಮಿಡಿಯೋ ಘಟನೆಯೊಂದು ನಡೆದಿದೆ.

ದಟ್ಟ ಅರಣ್ಯದಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲ ಹೀಗಾಗಿ ಅಲ್ಲಿ ಸ್ಥಳೀಯರು ಆಕೆಯನ್ನು ಡೋಲಿಯಲ್ಲಿ ಹೊತ್ತು 60.ಕಿ.ಮೀ ದೂರ ಇರೋ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಪ್ರಯತ್ನ ಪಟ್ಟಿದ್ದಾರೆ. ಆದ್ರೆ ದಟ್ಟ ಅರಣ್ಯದ ನಡುವೆಯೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾಳೆ. ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತು ಕರೆದುಕೊಂಡು ಹೋಗುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

More News