ಸಾಮಾನ್ಯವಾಗಿ ಜ್ಯೋತಿಷಿಗಳು ಕೈನೋಡಿ ಅಥವಾ ಜಾತಕ ನೋಡಿ ಭವಿಷ್ಯ ಹೇಳ್ತಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ದನ್ ಗುರೂಜಿ ಮಾತ್ರ ಹಲ್ಲು, ತುಟಿ, ಮುಖ ನೋಡುವ ಮೂಲಕ ಡಿಫರೆಂಟ್ ಆಗಿ ಜಾತಕ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸದಾ ಒಂದೊಂದು ವಿಷಯದ ಕುರಿತು ಸುದ್ದಿಯಲ್ಲಿರುವ ಆರ್ಯವರ್ದನ್ ಗುರೂಜಿ ಸಖತ್ ಹಾಟ್ ಆಗಿರ್ತಾರೆ. ಎಲ್ಲರ ಮೇಲೆ ಜಗಳಕ್ಕೆ ನಿಲ್ಲುತ್ತಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹೊಸ ವರ್ಶನ್ ಶುರು ಮಾಡಿರುವ ಗುರೂಜಿ ಕಾವ್ಯಶ್ರೀ ಮುಖದ ಮೇಲಿನ ಮಚ್ಚೆ ನೋಡಿ ಭವಿಷ್ಯ ನುಡಿದಿದ್ದಾರೆ.
ದೊಡ್ಮನೆಯಲ್ಲಿ ಅಡುಗೆ ಟಾಸ್ಕ್, ಕ್ಯಾಪ್ಟನ್ಸಿ ಟಾಸ್ಕ್ ಸೇರಿದಂತೆ ವಿವಿಧ ಟಾಸ್ಕ್ ಗಳನ್ನು ಮಾಡುವ ಮೂಲಕ ಗುರೂಜಿ ಹೈಲೆಟ್ ಆಗಿದ್ದಾರೆ. ಗುರೂಜಿ ಯು ಆವಾಗಾವಾಗ ತಮ್ಮ ನೇರ ಮಾತುಗಳಿಂದಲೂ ಹಲವರಿಗೆ ಸಿಟ್ಟು, ಕೋಪ ತರಿಸುತ್ತಾ ಇರ್ತಾರೆ. ಇವೆಲ್ಲವುಗಳ ನಡುವೆಯೇ ಗುರೂಜಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಭವಿಷ್ಯ ನುಡಿಯುತ್ತಾರೆ. ಕಳೆದ ಬಾರಿ ಅಮೂಲ್ಯಗೆ ತುಟಿ ನೋಡಿ ಭವಿಷ್ಯ ಹೇಳಿದ್ದರು. ಅದಾದ ಮೇಲೆ ಇವಾಗ ಕಾವ್ಯಶ್ರೀಗೆ ಮಚ್ಚೆ ನೋಡಿ ಜಾತಕ ಹೇಳಿದ್ದು, ಮುಂದೆ ಇನ್ನೂ ಏನೇನು ನೋಡಿ ಹೇಳ್ತರೋ ಎಂದು ಮನೆ ಮಂದಿಯೆಲ್ಲಾ ಗೊಂದಲದಲ್ಲಿದ್ದಾರೆ.
ಗುರೂಜಿ ಜಾತಕ ಹೇಳಿದ ಕಾವ್ಯಶ್ರೀಯು ಗುರೂಜಿ ಮೇಲೆ ರೇಗಿದ್ದಾರೆ. ಇದೇ ವೇಳೆ ಇವರಿಬ್ಬರ ನಡುವೆ ದೊಡ್ಡ ಚರ್ಚೆ ನಡೆದಿದೆ. ತನ್ನ ಮುಖದ ಮೇಲೆ ಮಚ್ಚೆ ಬಂದಿದೆ ಅಂದರೆ ನಿಮ್ಮನ್ನ ತುಂಬಾ ಜನ ಲೈನ್ ಹೊಡೀತಾರೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಅವರು ನೀವು ಎಷ್ಟು ಜನರನ್ನಾದರೂ ಟ್ರಾಕ್ ನಲ್ಲಿ ಬೀಳಿಸಬಹದು ಅಥವಾ ನೀವೇ ಬೀಳಿಸಬಹುದು. ಅದು ನಿನ್ನ ಪರ್ಸನಲ್ ವಿಷಯ ಎಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಾವ್ಯಶ್ರೀಯು ಓ… ಹೌದಾ…ಆಗಲಿ ಬಿಡು. ನಾನಂತೂ ಚೆನ್ನಾಗಿರುವ ಹುಡ್ಗನನ್ನೇ ನೋಡಿಕೊಂಡು ಮ್ಯಾರೇಜ್ ಮಾಡ್ಕೋತೀನಿ ಅಂತ ಖುಷಿಯಿಂದಲೇ ಉತ್ತರ ಕೊಟ್ಟಿದ್ದಾರೆ.




