ಹ್ಯಾಗ್ರಿಡ್… ಹ್ಯಾರಿ ಪಾಟರ್ ಸಿನಿಮಾ ನೋಡಿದವರಿಗೆ ಇವ್ರನ್ನ ಮರೆಯೋದಕ್ಕೆ ಸಾಧ್ಯಾವಾ.. ಪಾತ್ರದ ಮೂಲಕವೇ ಜನರನ್ನ ಸೆಳೆದುಬಿಡುತ್ತಿದ್ದ ಹಿರಿಯ ಹಾಲಿವುಡ್ ನಟ ಹ್ಯಾಗ್ರಿಡ್ ಅಲಿಯಾಸ್ ರಾಬಿ ಕೊಲ್ಟ್ರೇನ್ ತಮ್ಮ 72 ನೇ ವಯಸ್ಸಿಗೆ ಮೃತಪಟ್ಟಿದ್ದಾರೆ.
ಹೌದು, ಹ್ಯಾರಿ ಪಾಟರ್ ಸರಣಿಯಲ್ಲಿ ಹ್ಯಾಗ್ರಿಡ್ ಆಗಿ ವಿಶ್ವಾದ್ಯಂತ ಮನ್ನಣೆ ಪಡೆದು ಫೇಮಸ್ ಆಗಿದ್ದ ರಾಬಿ ಕೊಲ್ಟ್ರೇನ್ ಇಹಲೋಕ ತ್ಯಜಿಸಿದ್ದಾರೆ.

ಸ್ಕಾಟಿಷ್ ನಟ ರಾಬಿ ಕೋಲ್ಟ್ರೇನ್ ನಿಧನರಾಗಿದ್ದಾರೆ ಎಂದು ಕೋಲ್ಟ್ರೇನ್ ಅವರ ಸಹೋದರಿ ಅನ್ನಿ ರೇ, ಅವರ ಮಾಜಿ ಪತ್ನಿ ರೋನಾ ಗೆಮ್ಮೆಲ್ ಮತ್ತು ಅವರ ಮಕ್ಕಳಾದ ಸ್ಪೆನ್ಸರ್ ಮತ್ತು ಆಲಿಸ್ ಮಾಹಿತಿ ನೀಡಿದ್ದಾರೆ. ಆದರೆ ಸಾವಿಗೆ ಕಾರಣ ಏನೆಂದು ತಿಳಿಸಿಲ್ಲ. ಶುಕ್ರವಾರ ತಡರಾತ್ರಿ ನಟ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಬಿ ಕೋಲ್ಟ್ರೇನ್ ಮೊದಲ ಬಾರಿಗೆ 1990 ರ ದಶಕದಲ್ಲಿ ಸೀಕ್ವೆಲ್ನಲ್ಲಿ ಪತ್ತೇದಾರಿಯಾಗಿ ಖ್ಯಾತಿಯನ್ನು ಪಡೆದರು. ಅಷ್ಟೇ ಅಲ್ಲ. ಅವರ ಅಭಿನಯಕ್ಕಾಗಿ, ಅವರು ಮೂರು ವರ್ಷಗಳ ಕಾಲ ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ ಅವಾರ್ಡ್ಸ್ (BAFTA) ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆಲ್ಲುತ್ತಾ ಬಂದಿದ್ದರು.

#HARRY POTTER #HAGRID #SENIOR HOLLYWOOD ACTOR #ROBBIE COLTRANE #STILL MEMORY #DIED #BRITISH ACADEMY TELEVISION AWARD WINNER




