ಬೆಂಗಳೂರು : ಬಿಗ್ ಬಾಸ್ ಮನೆಗೆ ಮಹಿಳಾ ಕ್ಯಾಪ್ಟನ್ ಆಗಿ ನಟಿ ದೀಪಿಕಾ ಆಯ್ಕೆಯಾಗಿದ್ದಾರೆ. ಆ ಮೂಲಕ ಮನೆಯಲ್ಲಿ ಮೊದಲ ಮಹಿಳಾ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಕನಸು ಕಂಡಿದ್ದ ನಟಿ ದೀಪಿಕಾ ದಾಸ್ ಗೆ ಇದೀಗ ಇಂಥದ್ದೊಂದು ಅವಕಾಶ ಸಿಕ್ಕಿದೆ. ಇದಕ್ಕೆ ಸಖತ್ ಖುಷಿಯಾಗಿರುವ ನಟಿ ಮನೆಯ ಸದಸ್ಯರಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ. ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಕ್ಯಾಪ್ಟನ್ (Captain) ಆಗಬೇಕು ಎನ್ನುವ ಹಠ ನನ್ನಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಬಿಗ್ ಬಾಸ್ ಮನೆಗೆ ಬಂದಮೇಲೆ ಒಂದ್ಸಲ ಆದ್ರೂ ಕ್ಯಾಪ್ಟನ್ ಆಗಿಬಿಡಬೇಕಂತ ಆಸೆ ಹೊಂದಿದ್ದ ದೀಪಿಕಾ ಗೆ ಕೊನೆಗೂ ಅವಕಾಶ ಸಿಕ್ಕಿದ್ದಕ್ಕೆ ಅವರ ತಾಯಿ ವಾಯ್ಸ್ ನೋಟ್ಸ್ ಕಳುಹಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.
ನಾವು ಮನೆಯಲ್ಲಿ ಸಖತ್ ಎಂಜಾಯ್ ಮಾಡ್ತಿದೀವಿ. ನೀನೀನ ಕ್ಯಾಪ್ಟನ್ ಆಗಿರುವುದು ಸಹ ಖುಷಿ ತಂದಿದೆ. ಆರಾಮಾಗಿ ಆಟವಾಡು. ಎಲ್ಲರ ಜೊತೆ ಜಗಳವಾಡದೇ, ಕೋಪ ಮಾಡಿಕೊಳ್ಳದೇ ಹೊಂದಿಕೊಂಡು ಹೋಗು. ಎಲ್ಲರೊಂದಿಗೆ ತುಂಬಾ ಮಾತನಾಡು ಎಂದು ದೀಪಿಕಾ ತಾಯಿ, ಆಕೆಗೆ ಸಲಹೆ ನೀಡಿದ್ದಾರೆ.

ದೀಪಿಕಾ ದಾಸ್ ದೊಡ್ಮನೆಗೆ ಈ ಹಿಂದಿನ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಬಂದಿದ್ದರು. ಆ ಸಂದರ್ಭದಲ್ಲಿ ಆಕೆ 16 ವಾರಗಳ ಕಾಲ ಈ ಮನೆಯಲ್ಲಿ ಕಾಲ ಕಳೆದಿದ್ದರು. ಆದರೆ, ಒಂದು ಬಾರಿಯೂ ಅವರಿಗೆ ಕ್ಯಾಪ್ಟನ್ ಆಗುವಂತಹ ಅವಕಾಶ ಕೂಡಿ ಬರಲಿಲ್ಲ. ಇದೀಗ 9 ನೇ ಸೀಸನ್ ನಲ್ಲಿ ಆ ಅವಕಾಶ ದಕ್ಕಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 9 ರಲ್ಲಿ ಅವರು ಮರು ಆಯ್ಕೆಯಾಗಿ ಮನೆಯಲ್ಲಿರುವ ದೀಪಿಕಾ ಮೂರೇ ವಾರಕ್ಕೆ ಅವರು ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಸೀಸನ್ 9ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹೆಮ್ಮೆ ಅವರಿಗಿದೆ.
ಬಿಗ್ ಬಾಸ್ ಮನೆಯಲ್ಲಿ ಯಾರಾದರೂ ಕ್ಯಾಪ್ಟನ್ ಆಗಬೇಕೆಂಬ ಆಸೆಯಿದ್ದರೆ ಅವರು ಆಟವಾಡಲೇಬೇಕು. ಅಲ್ಲಿ ಕ್ಯಾಪ್ಟನ್ಸಿಗಾಗಿಯೇ ಹಲವಾರು ಆಟಗಳನ್ನು ಇಡಲಾಗಿದೆ. ಅದರಲ್ಲಿ ಇವರು ಕ್ಯಾಪ್ಟನ್ ಆಗುವ ಸಂದರ್ಭದಲ್ಲಿ ಮೊದಲಿಗೆ ಗೋಲ್ಡ್ ಮೈನ್ ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ದೀಪಿಕಾ ಸೋತಿದ್ದರು. ಅನಂತರ ನೀಡಿದ ನಾಲಿಗೆ ನುಲಿ ಚಟುವಟಿಕೆ ಟಾಸ್ಕ್ ನಲ್ಲಿ ಗೆಲ್ಲುವ ಮೂಲಕ ಆಟಕ್ಕೆ ವಾಪಸ್ ಬಂದರು. ಬಳಿಕ ಆಕೃತಿ ಹುಡುಕಾಟದಲ್ಲಿ ದೀಪಿಕಾ ದಾಸ್ ಗೆಲ್ಲುವ ಮೂಲಕ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.




