ACTOR AAMIR KHAN: ಒಟಿಟಿಯಲ್ಲಿ ನಂ.2 ಸ್ಥಾನ ಪಡೆದ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ

ಅಮೀರ್ ಖಾನ್ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯದ ಈ ಚಿತ್ರ, ಒಟಿಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಜನರಿಂದ ಸಖತ್ ರೆಸ್ಪಾನ್ಸ್ ಬಂದಿದೆ.
ಸಿನಿಮಾವು ಥಿಯೇಟರ್ ಗಳಲ್ಲಿ ಅಷ್ಟೇನೂ ಯಶಸ್ವಿಯಾಗಲಿಲ್ಲ. ಹಿಂದಿ ಚಿತ್ರರಂಗದಲ್ಲಿ ಸದ್ದು ಮಾಡುತ್ತದೆ ಎನ್ನಲಾಗಿತ್ತಾದರೂ ನಿರೀಕ್ಷಿತ ಮಟ್ಟಕ್ಕೆ ಯಶಸ್ವಿಯಾಗಿ ನಡೆಯಲಿಲ್ಲ. ಹಲವಾರು ಜನರು ಈ ಸಿನಿಮಾವನ್ನು ವಿರೋಧಿಸಿದ್ದಾರೆ. ಅಲ್ಲದೆ, ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಯಿತು.

ಈ ಹಿನ್ನೆಲೆಯಲ್ಲಿ ಅದು ಬಾಕ್ಸ್ ಆಪೀಸ್ ನಲ್ಲಿ ಅಷ್ಟೇನೂ ಯಶಸ್ಸಾಗಲಿಲ್ಲ. ಆದರೆ, ಇದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಅದಕ್ಕೆ ಸಾಧಾರಣವಾಗಿ ಪ್ರತಿಕ್ರಿಯೆ ಸಿಕ್ಕಿದೆ. ಒಟಿಟಿಯಲ್ಲಿ ನೋಡದ ಜನರು ಚಿತ್ರಮಂದಿರಗಳಲ್ಲಿ ಯಾಕೆ ನೋಡುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ.
ಆನ್ ಲೈನ್ ಜಾಲತಾಣಗಳಲ್ಲಿ ನೆಟ್ ಪ್ಲೆಕ್ಸ್ ಒಂದಾಗಿದೆ. ಅದರಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿದ್ದು, ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ, ಭಾರತದ ಪಟ್ಟಿಯಲ್ಲಿ ಇದು ಮೊದಲನೇ ಸ್ಥಾನಕ್ಕೆ ಬಂದಿದೆ.
ಆನ್ ಲೈನ್ ನಲ್ಲಿ ಸಿನಿಮಾ ನೋಡುವ ಜನರ ಸಂಖ್ಯೆ ಹೆಚ್ಚಾಗಿ ಇದೆ. ಈ ಹಿನ್ನೆಲೆಯಲ್ಲಿ 6.63 ದಶಲಕ್ಷ ಸ್ಟ್ರೀಮ್ ಆಗುವ ಮೂಲಕ ಈ ಸಿನಿಮಾ ಹೊಸ ದಾಖಲೆಯನ್ನು ಬರೆದಿದೆ. ಅದಕ್ಕಾಗಿ ಅಮೀರ್ ಖಾನ್ ಎಲ್ಲರಿಗೂ ಧನ್ಯವಾದಗಳು ಸಲ್ಲಿಸಿದ್ದಾರೆ.

ಹೊಸ ಸಿನಿಮಾ ಗಳು ಬಿಡುಗಡೆಯಾದ ಸಮಯದಲ್ಲಿ ಸಿನಿ ಪ್ರಿಯರಿಂದ ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಅಲ್ಲದೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಾರೆ. ಆದರೆ, ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ನಂತರ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ.

ಕೇವಲ 88 ಕೋಟಿ ಗಳಿಸುವಲ್ಲಿ ಚಿತ್ರ ಸಫಲವಾಯಿತು. ಆಪ್ ಲೈನ್ ನಲ್ಲಿ ನೋಡದ ಜನರು, ಆನ್ ಲೈನ್ ನಲ್ಲಿ ಹೆಚ್ಚು ವೀಕ್ಷಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಚಿತ್ರವನ್ನು ನೋಡಿದ್ದಾರೆ. ಹೀಗಾಗಿಯೇ ದಾಖಲೆಯನ್ನು ಮೀರಿ ಮುಂದಕ್ಕೆ ಸಾಗುತ್ತಿದೆ.

#LAL SINGH CHADDHA #AAMIR KHAN #KAREENA KAPOOR KHAN #OTT #THEATER

More News

You cannot copy content of this page