GURUJI PROPOSED RACHITHA: ಬಿಗ್‌ ಬಾಸ್‌ ಮನೆಯಲ್ಲಿ ರಚಿತಾಗೆ ಐಲವ್ಯೂ ಹೇಳಿದ ಆರ್ಯವರ್ಧನ್: ಗುರೂಜಿ ಮಾತಿಗೆ ದಂಗಾದ ಮನೆ ಮಂದಿ

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಸಖತ್ ಹಾಟ್ ಅಂಡ್ ಟ್ರೋಲ್ ಗೆ ಗುರಿಯಾಗುವ ಆರ್ಯವರ್ಧನ್ ಗುರೂಜಿ ಇದೀಗ ಹೊಸದೊಂದು ಬೇಡಿಯಿಟ್ಟಿದ್ದು, ರಚಿತಾಗೆ ಮನೆಯ ಕ್ಯಾಮೆರಾ ಮುಂದೆ‌ ನಿಂತುಕೊಂಡು ಐ ಲವ್ ಯ್ಯೂ ಹೇಳಿದ್ದಾರೆ.
ಗುರೂಜಿ ಈ ಮಾತಿಗೆ ಮನೆಯ ಸದಸ್ಯರೆಲ್ಲರೂ ದಂಗಾಗಿ ಹೋಗಿದ್ದಾರೆ. ಗುರೂಜಿ ಬಾಯಿಯಿಂದ ಇಂತಹ ನುಡಿಮುತ್ತುಗಳು ಬರುತ್ತಿದ್ದಂತೆಯೇ ಬಿಗ್ ಬಾಸ್ ಮನೆ ಸದಸ್ಯರು ಶಾಕ್ ಆಗಿದ್ದಾರೆ.
ಮನೆಯಲ್ಲಿ ಎಲ್ಲರೂ ಊಟ ಮಾಡಿಕೊಂಡು ವಾಪಸು ಬರುವ ವೇಳೆ ಪ್ರಶಾಂತ್ ಸಂಬರ್ಗಿ ಅಲ್ಲೇ ಇದ್ದ ಕ್ಯಾಮೆರಾ ಮುಂದೆ ನಿಂತ್ಕೊಂಡು ಹಾಯ್ ಬಿಗ್ ಬಾಸ್. ನನ್ನದು ಊಟ ಆಯಿತು, ನಿಮ್ಮದೆಲ್ಲಾ ಆಯಿತಾ. ಆಗಿದೆ ಅನ್ಕೋತೀನಿ. ಥ್ಯಾಂಕ್ಯೂ ಬಿಗ್ ಬಾಸ್ ಅಂತ ಹೇಳಿದರು.
ಆಗಷ್ಟೇ ಬಂದ ಆರ್ಯವರ್ದನ್ ಗುರೂಜಿ ನೀವು ಮಾತ್ರ ಕ್ಯಾಮರಾ ಮುಂದೆ ಮಾತಾಡೋದಾ. ನಾನೂ ಮಾತಾಡ್ತೀನಿ ನೋಡಿ ಅಂತ ಸಂಬರಗಿ ಸ್ಟೈಲ್ ನಲ್ಲಿಯೇ ರಚಿತಾಗೆ ಪ್ರಪೋಸ್ ಮಾಡಿದ್ದಾರೆ.
ಕ್ಯಾಮರಾ ಮುಂದೆ ನಿಂತ್ಕೊಂಡು ಗುರೂಜಿ ಏನ್ ಹೇಳ್ತಾರೆ‌ ಅಂತ ಕಾಯ್ತಿದ್ದ ಮನೆ ಮಂದಿಗೆಲ್ಲಾ ಆಶ್ಚರ್ಯ ಕಾದಿತ್ತು. ನೇರವಾಗಿ ರಚಿತಾಗೆ ಐಲವ್ಯೂ ಹೇಳಿದ್ದು ಥ್ರಿಲ್ಲಿಂಗ್ ಆಗಿತ್ತು.
ಬಿಗ್ ಬಾಸ್ ಮನೆಗೆ ನಿನಗಾಗಿ ಬಂದಿರುವೆ. ಸೋ ನಾನು ಹೊರಗಡೆ ಬಂದಮೇಲೆ ಆದರೂ ಲವ್ ಮಾಡು. ನಂಗೆ ಈ ಲವ್ ಅದೆಲ್ಲಾ ಗೊತ್ತೇ ಇಲ್ಲ. ನೀನು ತುಂಬಾ ಇಷ್ಟ ಆಗ್ಬಿಟ್ಟಿದೀಯಾ. ಇಷ್ಟು ದಿನ ನಾನು ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು ಹೀಗೆ ಏನೇನೋ ಮಾತಾಡೋಕೆ ಶುರು ಮಾಡಿಕೊಂಡಿದ್ದಾರೆ.
ನೋಡ ನೋಡುತ್ತಿದ್ದಂತೆಯೇ ಗುರೂಜಿ ಭಾವುಕರಾಗಿ ಮಾತಾಡೋಕೆ ಆರಂಭಿಸಿದರು.

ಇದಕ್ಕೆ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್ ಗೆ ಒಳಗಾಗಿ, ಇಷ್ಟು ರೋಮ್ಯಾಂಟಿಕ್ ಆಗಿ ಯಾವ ರಚಿತಾಗೆ ಪ್ರಪೋಸ್ ಮಾಡ್ತಿರಬೇಕಂತ ತಲೆ ಕೆಡಿಸಿಕೊಂಡರು. ಆದರೆ, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ಅವರು ಇಲ್ಲಿಂದ ತನ್ನ ಹೆಂಡತಿಗೆ ಹೇಳ್ತಿದಾರೆ ಅಂತ ಆಮೇಲೆ ಗೊತ್ತಾಯಿತು. ಇದನ್ನು ಕೇಳಿಸಿಕೊಂಡ ಮನೆ‌ಮಂದಿ ನಿಟ್ಟುಸಿರು ಬಿಟ್ಟರು.
ಇಷ್ಟಕ್ಕೆ ಸುಮ್ಮನಾಗದ ಗುರೂಜಿ, ಈ ಮನೆಯಲ್ಲಿ ರಾತ್ರಿ ಟೈಂ ತಬ್ಕೋತಾರೆ, ಅದನ್ನು ನಂಗೆ ನೋಡೋಕಾಯ್ತಿಲ್ಲ. ಇದನ್ನೆಲ್ಲಾ ನೋಡಿದ್ಮೇಲೆ ನಾನು ನಿನ್ನನ್ನು ಹಗ್ ಮಾಡ್ಕೋಬೇಕಂತ ಅನಿಸ್ತಿದೆ. ನಿನ್ನ ನೋಡಬೇಕು ಅನಿಸ್ತಿದೆ ಅಂತೆಲ್ಲಾ ತನ್ನೊಳಗಿದ್ದ ಆಸೆಗಳನ್ನು ಕ್ಯಾಮರಾ ಮುಂದೆ ಬಿಚ್ವಿಟ್ಟರು.
ಲವ್, ರಿಯಲ್ ಲವ್, ಹಗ್ ಅಂತೆಲ್ಲ ಮಾತನಾಡುತ್ತಾ ಗುರೂಜಿ, ನಂತರ ತುಸು ಭಾವುಕರಾಗಿ ‘ಇಲ್ಲಿವರೆಗೂ ಹೇಗೋ ಆಯ್ತು. ಕ್ಷಮಿಸಿ ಬಿಡಿ ನನ್ನ. ನಿನಗೋಸ್ಕರ ನಾನು ದುಡೀತೀನಿ. ನಿನಗೋಸ್ಕರ ಬದುಕ್ತೀನಿ ಎಂದು ಆಶ್ವಾಸನೆ ನೀಡಿದರು.

#BIGGBOSS HOUSE #ARYAVERDHAN GURUJI #PRASHANTH SAMBERGI #I LOVE YOU # I WANT HUG YOU #GURUJI TOLD #RACHITHA #BIGG BOSS HOUSE SHOCK

More News

You cannot copy content of this page