ಬ್ರಿಟನ್ : ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಶ್ರೀಲಂಕಾದ ಲೇಖಕ ಶೆಹನ್ ಕರುಣತಿಲಕ ಅವರಿಗೆ ಸಂದಿದೆ. ಶೆಹನ್ ಅವರ ಎರಡನೇ ಕಾದಂಬರಿಯಾದ “ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ ಮೀಡಾ” ಕೃತಿಗೆ ಪ್ರಶಸ್ತಿ ಲಭಿಸಿದೆ. ಯುದ್ಧದ ಛಾಯಾಚಿತ್ರಗಳನ್ನು ತೆಗೆಯುವ ಫೋಟೊಗ್ರಾಫರ್ ಒಬ್ಬನ ಸಾವಿನ ನಂತರದ ಪಯಣದ ಕಥೆಯನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ.
ಕೊರೋನ ವೈರಸ್ ಹರಡಿದ ಮೇಲೆ ನೇರವಾಗಿ ಈ ಪ್ರಶಸ್ತಿಯನ್ನು ನೀಡಿರಲಿಲ್ಲ. ಇದೇ ಕೊರೋನ ನಂತರ ಮೊದಲ ಬಾರಿಗೆ ಎಲ್ಲರನ್ನೂ ಸೇರಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಬೂಕರ್ ಪ್ರಶಸ್ತಿ ಅನ್ನು ಶೆಹನ್ ಅವರು ಇಂಗ್ಲೆಂಡ್ ನ ರಾಣಿಯಾದ ಕಾನ್ ಸರ್ಟ್ ಕೆಮಿಲ ಅವರಿಂದ ಪಡೆಯಲಿದ್ದಾರೆ. ಈ ಪ್ರಶಸ್ತಿಯು 50,000 ಪೌಂಡ್ (ಸುಮಾರು 46 ಕೋಟಿ ರೂಪಾಯಿ ಮೌಲ್ಯ) ಮೊತ್ತವನ್ನು ಹೊಂದಿದೆ.
ಶೆಹನ್ ಅವರ ಕಾದಂಬರಿಯು 1990ರ ದಶಕದ ಕಥಾಹಂದರವನ್ನು ಒಳಗೊಳಿಸಲಾಗಿದೆ. ಈ ಕಥನದ ನಾಯಕ ಮಾಲಿ ಅಲ್ಮೀಡಾ ಸಲಿಂಗಕಾಮಿ. ಯುದ್ಧದ ಛಾಯಾಗ್ರಾಹಕ (ವಾರ್ ಫೋಟೊಗ್ರಾಫರ್) ಮತ್ತು ಜೂಜುಕೋರ ಎನ್ನುವ ಎರಡು ಬಿರುದುಗಳಿರುವ ಅವನು ಒಂದು ದಿನ ಸತ್ತು ಮೇಲೇಳುತ್ತಾನೆ ಎಂಬಲ್ಲಿಂದ ಕಥೆ ಆರಂಭವಾಗಿ ಹಲವಾರು ರೀತಿಯಲ್ಲಿ ಅನೇಕ ಮಜಲುಗಳನ್ನು ಇದು ತೆಗೆದುಕೊಂಡು ಹೋಗುತ್ತದೆ.

ಬ್ರಿಟಿಷ್ ಲೇಖಕ ಅಲನ್ ಗಾರ್ನರ್ ಅವರ ಟ್ರೀಕಲ್ ವಾಕರ್, ಜಿಂಬಾಗ್ವೆಯ ಲೇಖಕ ನೊವಯಲೆಟ್ ಬುಲಾವಾಯೊ ಅವರ ಗ್ಲೋರಿ, ಐರಿಷ್ ಲೇಖಕಿ ಕ್ಲೇರ್ ಕೀಗನ್ ಅವರ ಸ್ಮಾಲ್ ಥಿಂಗ್ಸ್ ಲೈಕ್ ದೀಸ್, ಅಮೆರಿಕ ಲೇಖಕ ಪರ್ಸಿವಲ್ ಎವರ್ಗ್ರೆಟ್ ಅವರ ದಿ ಟ್ರೀಸ್ ಮತ್ತು ಅಮೆರಿಕ ಲೇಖಕಿ ಎಲಿಜಬೆತ್ ಸ್ಟ್ರೌಟ್ ಅವರ ಓಹ್ ವಿಲಿಯಮ್ಸ್ ಪುಸ್ತಕಗಳು ಈ ವರ್ಷದ ಬೂಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದವು. ಅದರಲ್ಲಿ ಶೆಹನ್ ಅವರ ಕೃತಿ ಅಂತಿಮವಾಗಿದೆ.
ಈ ಸಂದರ್ಭದಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ನೀಲ್ ಮೆಕ್ ಗ್ರೆಗೊರ್ ಮಾತನಾಡಿ, ಇದನ್ನು ನಾವು ಓದುತ್ತಾ ಹೋದಂತೆಲ್ಲಾ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ನಮ್ಮೊಳಗಿರುವ ಮಿಥ್ ಗಳನ್ನು ಹೊರಗಿಟ್ಟು ವಾಸ್ತವತೆಯನ್ನು ತೋರುತ್ತದೆ. ಬದುಕು-ಸಾವು, ದೇಹ-ಆತ್ಮ, ಪೂರ್ವ-ಪಶ್ಚಿಮ ಸೇರಿದಂತೆ ಹತ್ತಾರು ಬಗೆಯ ಚಿಂತನೆಗಳು ಈ ಕೃತಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ.

ಸಮಾಜದೊಳಗಿನ ಕರಾಳತೆಯನ್ನು ತೋರುವ ಗಂಭೀರ ಪ್ರಯತ್ನ ಶೆಹನ್ ಅವರ ಕೃತಿಯಲ್ಲಿದೆ. ಅಲ್ಲದೆ, ಇದು ಶ್ರೀಲಂಕಾ ದೇಶದ ಅಂತರ್ಯುದ್ಧದ ಭೀಕರತೆಯನ್ನು ಕಟ್ಟಿಕೊಡುವ ಮಹತ್ತರವಾದ ಪ್ರಯತ್ನವನ್ನು ಮಾಡಲಾಗಿದೆ. ಓದುಗರಿಗೆ ಬದುಕಿನ ಸೂಕ್ಷ್ಮಗಳು, ಸೌಂದರ್ಯ, ಪ್ರೀತಿ, ಬದ್ಧತೆಯ ಅರಿವೂ ಮೂಡುತ್ತದೆ. ಎಲ್ಲರಿಗೂ ಬದುಕಲು ತಮ್ಮದೇ ಆದ ಹಕ್ಕು ಮತ್ತು ಸಮರ್ಥನೆ ಇರುವುದನ್ನು ಕಾದಂಬರಿಯು ಅರ್ಥ ಮಾಡಿಸುತ್ತದೆ ಎಂದು ಸಮಿತಿಯ ಅಧ್ಯಕ್ಷರು ವಿವರಿಸಿದ್ದಾರೆ.
#prestigious booker prize #The Seven Moons of Maali Almeida #Shehan Karunatilaka #Wins Booker Prize #england queen #after corona #photographer story