ಆಸ್ಚ್ರೇಲಿಯಾ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿ ಮಿಂಚಿದ್ದ ಟೀಮ್ ಇಂಡಿಯಾ, ಇಂದು ನಡೆಯುವ ಎರಡನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ತಂಡವನ್ನ ಎದುರಿಸಲಿದೆ.
ಟಿ20 ವಿಶ್ವಕಪ್‌ನ ಸೂಪರ್-12 ಪಂದ್ಯಗಳ ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಉಭಯ ತಂಡಗಳಿಗೆ ಇದು ಅಂತಿಮ ಅಭ್ಯಾಸ ಪಂದ್ಯವಾಗಿದೆ. ಹೀಗಾಗಿ ಗೆಲುವಿನೊಂದಿಗೆ ಸೂಪರ್-12ಗೆ ತೆರಳುವ ನಿರೀಕ್ಷೆಯೊಂದಿಗೆ ಎರಡು ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಲು ಸಜ್ಜಾಗಿವೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ, ಆಸೀಸ್ ವಿರುದ್ಧ ಗೆಲುವಿವು ಸಾಧಿಸಿದ್ದರೆ. ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ನ್ಯೂಜಿ಼ಲೆಂಡ್, ಹೀನಾಯ ಸೋಲು ಕಂಡಿತ್ತು.
ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ್ದ ಕಿವೀಸ್ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 98 ರನ್‌ಗಳಿಗೆ ಆಲೌಟ್ ಆಗಿತ್ತು. ನಾಯಕ ಕೇನ್ ವಿಲಿಯಂಸನ್ ಸೇರಿದಂತೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಆಟವಾಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಸೂಪರ್-12 ಆರಂಭಕ್ಕು ಮುನ್ನ ನಡೆಯುವ ಈ ಅಭ್ಯಾಸ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ವೈಫಲ್ಯ ಸರಿಪಡಿಸಿಕೊಳ್ಳಲು ಕಿವೀಸ್ ಎದುರು ನೋಡುತ್ತಿದ್ದು, ಭಾರತದ ವಿರುದ್ಧದ ಅಭ್ಯಾಸ ಪಂದ್ಯ ಅತ್ಯಂತ ಪ್ರಮುಖವಾಗಲಿದೆ.

ಮತ್ತೊಂದೆಡೆ ಆಸೀಸ್ ವಿರುದ್ಧ ಸಂಘಟಿತ ಪ್ರದರ್ಶನದಿಂದ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದೆ. ಬ್ಯಾಟಿಂಗ್ ಬೌಲಿಂಗ್ ಎರಡಲ್ಲೂ ಮಿಂಚಿದ್ದ ಭಾರತದ ಪರ ಕೆ.ಎಲ್.ರಾಹುಲ್, ಸೂರ್ಯಕುಮಾರ್ ಬ್ಯಾಟಿಂಗ್‌ನಲ್ಲಿ ಅದ್ಭುತ ಫಾರ್ಮ್ ಕಂಡುಕೊಂಡಿದ್ದರೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ದಿನೇಶ ಕಾರ್ತಿಕ್ ಸಹ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.
ಆಸೀಸ್ ವಿರುದ್ಧ ನಿರೀಕ್ಷಿತ ಆಟವಾಡುವಲ್ಲಿ ಎಡವಿದ್ದ ಹಾರ್ದಿಕ್ ಪಾಂಡ್ಯ ಸಹ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ಭಾರತದ ಬೌಲಿಂಗ್ ಸಹ ಬಲಿಷ್ಠವಾಗಿ ಕಾಣುತ್ತಿದೆ. ಆಸೀಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಮಿಂಚಿದ್ದ ಮೊಹಮ್ಮದ್ ಶಮಿ, ನ್ಯೂಜಿ಼ಲೆಂಡ್ ವಿರುದ್ಧವೂ ಬೌಲಿಂಗ್ ವಿಭಾಗವನ್ನ ಮುನ್ನಡೆಸುವ ಸಾಧ್ಯತೆ ಇದೆ. ಆದರೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ದೀಪಕ್ ಹೂಡ, ರಿಷಬ್ ಪಂತ್ ಅವರುಗಳಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ.
ಸಂಭಾವ್ಯ ತಂಡ:
ಭಾರತ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, KL ರಾಹುಲ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಹೂಡ, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್.
ನ್ಯೂಜಿ಼ಲೆಂಡ್: ಮಾರ್ಟಿನ್ ಗಪ್ಟಿಲ್, ಆಡಮ್ ಮಿಲ್ನೆ, ಕೇನ್ ವಿಲಿಯಮ್ಸನ್, ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಮಾರ್ಕ್ ಚಾಪ್ಮನ್, ಮೈಕೆಲ್ ಬ್ರೇಸ್ವೆಲ್, ಲಾಕಿ ಫರ್ಗುಸನ್, ಗ್ಲೆನ್ ಫಿಲಿಪ್ಸ್, ಫಿನ್ ಅಲೆನ್.
#team india #newzland #practice match #t20 cricket #t20 cricket world cup #t20 cwc #indian team




