ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಆಗಿದ್ದ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆರ್ಮುಗಸ್ವಾಮಿ ಸಮಿತಿಯು ಜಯಲಲಿತಾ ಆಪ್ತೆ ಶಶಿಕಲಾ ಸೇರಿದಂತೆ ಇನ್ನಿತರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿದ್ದರೆ, ಶಶಿಕಲಾ ಇದನ್ನು ಸರಾಗವಾಗಿ ತಿರಸ್ಕಾರ ಮಾಡಿದ್ದು, ವೈದ್ಯಕೀಯ ವಿಚಾರದಲ್ಲಿ ನನ್ನದೇನೂ ಹಸ್ತಕ್ಷೇಪ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಚಾರಣಾ ಸಮಿತಿಯು ಶಶಿಕಲಾ ಸೇರಿ ತಮಿಳುನಾಡಿನ ಮಾಜಿ ಆರೋಗ್ಯ ಸಚಿವ, ವೈದ್ಯರ ವಿರುದ್ಧ ತನಿಖೆ ನಡೆಸಲು ನಿರ್ದೇಶನ ನೀಡಿತ್ತು. ಅದನ್ನು ನಿರಾಕರಿಸಿರುವ ಶಶಿಕಲಾ ಕಾನೂನು ತನಿಖೆಗಳನ್ನೂ ಎದುರಿಸಲು ತಾನು ಸಿದ್ಧನಿದ್ದೇನೆ. ಜಯಲಲಿತಾ ಅವರ ವೈದ್ಯಕೀಯ ಚಿಕಿತ್ಸೆಯಲ್ಲಿ ನನ್ನ ಹಸ್ತಕ್ಷೇಪ ಏನೂ ಇಲ್ಲ ಎಂದಿದ್ದಾರೆ.
ತಮಿಳುನಾಡಿನ ಪ್ರಭಾವಿ ನಾಯಕಿ ಹಾಗೂ ಮಾಜಿ ಸಿಎಂ ಆಗಿದ್ದ ಜಯಲಲಿತಾ 2016 ರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದರು. ಆ ಸಂದರ್ಭದಲ್ಲಿ ಸಾವಿನ ಕುರಿತು ತನಿಖೆಗೆ ಮುಂದಾಗಿದ್ದ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆಗ ಶಶಿಕಲಾ, ವೈದ್ಯ ಕೆಎಸ್ ಶಿವಕುಮಾರ್, ಮಾಜಿ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಮತ್ತು ಆಗಿನ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಅವರುಗಳು ತಪ್ಪು ಮಾಡಿದ್ದು ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು.

ಆಗಸ್ಟ್ 2022 ರಲ್ಲಿ ಆರ್ಮುಗಸ್ವಾಮಿ ಸಮಿತಿಯು ಐದು ವರ್ಷಗಳ ನಂತರ ವರದಿಯನ್ನು ಇಂದಿನ ಸಿಎಂ ಸ್ಟಾಲಿನ್ ಗೆ ಸಲ್ಲಿಸಿದ್ದರು. ಡಿಸೆಂಬರ್ 2016ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳಲ್ಲಿ ರಾಜಕೀಯ ನಡೆದಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಮಿತಿ ವರದಿಯನ್ವಯ ಈ ನಾಲ್ವರ ವಿರುದ್ಧ ಸರ್ಕಾರಿ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಅಂಗೀಕರಿಸಿದೆ.




