T20 WORLD CUP CRICKET: ಭಾರತ-ಪಾಕಿಸ್ತಾನ ಕದನಕ್ಕೆ ದಿನಗಣನೆ: ಬದ್ಧವೈರಿಗಳ ವಿರುದ್ಧ ಅಬ್ಬರಿಸೋಕ್ಕೆ ರೋಹಿತ್‌ ಪಡೆ ಸಜ್ಜು

ಟಿ20 ವಿಶ್ವಕಪ್‌ ಟೂರ್ನಿಯ ಪ್ರಮುಖ ಪಂದ್ಯಗಳ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಬಲಿಷ್ಠ ಪ್ರದರ್ಶನ ನೀಡಿರುವ ಭಾರತ, ಇದೀಗ ಸೂಪರ್‌-12 ಪಂದ್ಯಗಳಲ್ಲಿ ಅಬ್ಬರಿಸೋಕ್ಕೆ ಸಜ್ಜಾಗಿದ್ದು, ಟೀಂ ಇಂಡಿಯಾ ಮೊದಲ ಫೈಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲು ಎದುರಿಸಲಿದೆ.
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ರೋಹಿತ್‌ ಪಡೆ, ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ಕಮಾಲ್‌ ಮಾಡಲು ತಯಾರಿ ಮಾಡಿಕೊಂಡಿದೆ. ಈಗಾಗಲೇ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಭಾರತ, ಕೊನೆಯ ಓವರ್ ನಲ್ಲಿ ರೋಚಕವಾಗಿ ಗೆದ್ದುಬೀಗಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧವೂ ಇನ್ನಷ್ಟು ತಯಾರಿ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಭಾರತದ ಲೆಕ್ಕಾಚಾರಕ್ಕೆ ಮಳೆ ಅಡ್ಡಿ ಉಂಟು ಮಾಡಿತು.
ಹೀಗಾಗಿ ಅಭ್ಯಾಸ ಪಂದ್ಯದ ತಯಾರಿಯೊಂದಿಗೆ ಟೀಂ ಇಂಡಿಯಾ, ಆಟಗಾರರು ತಮ್ಮ ಮೊದಲ ಪಂದ್ಯವನ್ನ ಎದುರು ನೋಡುತ್ತಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಅ. 23ರಂದು ಪಾಕಿಸ್ತಾನ ವಿರುದ್ಧ ಮೆಲ್ಬೊರ್ನ್ ಮೈದಾನದಲ್ಲಿ ಎದುರಿಸಲಿದೆ. ಹೀಗಾಗಿ ತನ್ನ ಬದ್ಧವೈರಿಯ ವಿರುದ್ಧ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಭಾರತ ಎಲ್ಲಾ ರೀತಿಯ ರಣತಂತ್ರಗಳನ್ನ ರೂಪಿಸಿಕೊಂಡಿದೆ.
ಬ್ಯಾಟಿಂಗ್‌ನಲ್ಲಿ ಕನ್ನಡಿಗ ಕೆ.ಎಲ್.‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಜೊತೆಗೆ ತಂಡದ ಸ್ಟಾರ್‌ಗಳಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಕೂಡ ಸಾಥ್‌ ನೀಡಿದರೆ, ಭಾರತದ ಬ್ಯಾಟಿಂಗ್‌ ಇನ್ನಷ್ಟು ಬಲಿಷ್ಠಗೊಳ್ಳಲಿದೆ.
ಇವರೊಂದಿಗೆ ಆಲ್ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ, ದೀಪಕ್‌ ಹೂಡ, ಅಕ್ಸರ್‌ ಪಟೇಲ್‌ ಅವರ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ. ವಿಕೆಟ್‌ ಕೀಪಿಂಗ್‌ನಲ್ಲಿ ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌ ನಡುವೆ ಪೈಪೋಟಿ ಶುರುವಾಗಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರಿಗೂ ಸ್ಥಾನ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಇನ್ನೂ ಬೌಲಿಂಗ್‌ನಲ್ಲಿ ವೇಗಿ ಮೊಹಮ್ಮದ್‌ ಶಮಿ, ಆಸ್ಟ್ರೇಲಿಯಾ ವಿರುದ್ಧ ಮಿಂಚುವ ಮೂಲಕ ಸ್ಟ್ರಾಂಗ್‌ ಕಮ್ ಬ್ಯಾಕ್ ಮಾಡಿದ್ದಾರೆ. ಇವರೊಂದಿಗೆ ಸ್ವಿಂಗ್‌ ಸ್ಪೆಷಲಿಸ್ಟ್‌ ಭುವನೇಶ್ವರ್‌ ಕುಮಾರ್‌, ಅರ್ಶದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ಕೂಡ ಚುಟುಕು ಕ್ರಿಕೆಟ್‌ ಮಹಾಸಮರದಲ್ಲಿ ತಮ್ಮ ಕೈಚಳಕ ತೋರೋದಕ್ಕೆ ಕಾಯುತ್ತಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ಸಹ ಟೀಂ ಇಂಡಿಯಾ ಬಲಿಷ್ಠವಾಗಿದ್ದು, ಅನುಭವಿ ರವಿಚಂದ್ರನ್‌ ಅಶ್ವಿನ್‌, ಯುಜ್ವೇಂದ್ರ ಚಹಲ್‌ ಹಾಗೂ ಅಕ್ಸರ್‌ ಪಟೇಲ್‌ ನಡುವೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಪೈಪೋಟಿ ಏರ್ಪಟ್ಟಿದೆ.

#india #pakistan #t20 cricket match #october 23rd #world cup #virat kohli #rohith sharma

More News