ಬೀದರ್ : ಕಳೆದ ಹಲವಾರು ವರ್ಷಗಳಿಂದ ಈಡಿಗಾ ಹಾಗೂ ಬಿಲ್ವ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸದೇ ಇರುವ ರಾಜ್ಯ ಸರ್ಕಾರದ ವಿರುದ್ದ ಡಾ ಪ್ರಣವಾನಂದ ಸ್ವಾಮೀಜಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಈಡಿಗಾ ಹಾಗೂ ಬಿಲ್ವ ಸಮುದಾಯ ಬೀದಿಗೆ ಇಳಿದು ಹೋರಾಟ ಮಾಡಲು ಸಿದ್ದವಿದ್ದು, ನಾಳೆ ರಾಯಚೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಪಾರ್ಲಿಮೆಂಟ್ ನಲ್ಲಿ ಈಡಿಗಾ ಸಮುದಾಯದ ಪರವಾಗಿ ಧ್ವನಿ ಎತ್ತಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ 60 ಲಕ್ಷ ಈಡಿಗ, ಬಿಲ್ವ ಸಮಾಜಕ್ಕೆ ನೇರವಾಗಿ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ, ಅವರ ಪುತ್ರ ಬಿ ಎಸ್.ವಿಜಯೇಂದ್ರ ಹಾಗೂ ಬಿ ಎಲ್ ಸಂತೋಷ್ ಅವರಲ್ಲೂ ಈ ವಿಚಾರ ಸಂಬಂಧ ಸಾಕಷ್ಟು ಚರ್ಚೆ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.

ಈಡಿಗ ಹಾಗೂ ಬಿಲ್ವ ಸಮುದಾಯದ ಮೀಸಲಾತಿಗಾಗಿ ನಾವು ಎರಡು ವರ್ಷಗಳಿಂದ ಹೋರಾಟ ಮಾಡುತ್ತಾ ಇದ್ದೆವೆ. ಇನ್ನೂ ಮುಂದೆ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ತಿಳಿಸಿದ ಸ್ವಾಮೀಜಿ, ಇದು ನಮ್ಮ ಸಾವು – ಬದುಕಿನ ಮದ್ಯ ಇರುವ ಹೋರಾಟವಾಗಿದೆ ಎಂದು ಕಿಡಿಕಾರಿದರು.
ಸಚಿವರಾದ ಸುನೀಲ್ ಕುಮಾರ್ ಹಾಗೂ ಹಾಲಪ್ಪ ಆಚಾರ್ ರಾಜೀನಾಮೆಗೆ ಒತ್ತಾಯ
ನಿಮ್ಮ ರಾಜಕೀಯ ಗಿಮಿಕ್ ಅನ್ನು ಬಿಟ್ಟು ಬಿಡಿ ಎಂದು ಮುಖ್ಯಮಂತ್ರಿ ಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಟೀಕಿಸಿದ ಅವರು, ನಮ್ಮ ಈಡಿಗ ಹಾಗೂ ಬಿಲ್ವ ಸಮುದಾಯದ ಏಳು ಮಂದಿ ಶಾಸಕರು ಆಯ್ಕೆ ಆಗಿದ್ದಾರೆ. ಸಿಎಂ ನಿಮ್ಮ ಮಾತು ಕೇಳಿಲ್ಲಾ ಅಂದ್ರೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ಬನ್ನಿ ಎಂದು ಆಗ್ರಹಿಸಿದರು.

ಈಡಿಗ, ಬಿಲ್ವ ಸಮುದಾಯದ ಶಾಸಕರಾದ ಸುನಿಲ್ ಕುಮಾರ್ ಮತ್ತು ಹಾಲಪ್ಪ ನಿಮಗೆ ಸ್ವಾಭಿಮಾನ ಇದ್ದರೆ, ತಾಕತ್ತು ಇದ್ದರೆ ರಾಜಿನಾಮೆ ನೀಡಿ. ಹೊರ ಬಂದು ಸಮಾಜದ ಪಾದಯಾತ್ರೆಯಲ್ಲಿ ಭಾಗವಹಿಸಿ. ಮತ್ತೆ ನಿಮಗೆ ಶಾಸಕರನ್ನಾಗಿ ಮಾಡುತ್ತವೆ. ಬ್ರಾಹ್ಮಣಶಾಹಿಗಳ ಮಾತು ಕೇಳಿ ನೀವು ಈಡಿಗ, ಬಿಲ್ವಾ ಸಮುದಾಯಕ್ಕೆ ಅನ್ಯಾಯ ಮಾಡಬೇಡಿ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
#PRANAVANANDA SWAMIJI #EDIGA #BILLAVA COMMUNITY #RESERVATION DEMAND #CM BASAVARAJ BOMMAI #MINISTER SUNIL KUMAR #MINISTER HALLAPPA ACHAR #RAHUL GANDHI #BHARATH JODO YATHRE




