ಸಿಡ್ನಿ : 2022ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಪಂದ್ಯಗಳು ಇಂದಿನಿಂದ ಆರಂಭವಾಗಲಿದೆ. ಇಂದಿನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ v/s ನ್ಯೂಜಿ಼ಲೆಂಡ್ ಮುಖಾಮುಖಿಯಾಗಲಿದ್ದು, ದಿನದ 2ನೇ ಪಂದ್ಯದಲ್ಲಿ ಇಂಗ್ಲೆಂಡ್ v/s ಅಫ್ಘಾನಿಸ್ತಾನ ತಂಡಗಳು ಹಣಾಹಣಿ ನಡೆಸಲಿವೆ.
ಆಸೀಸ್ ಹಾಗೂ ಕಿವೀಸ್ ನಡುವಿನ ಹಣಾಹಣಿಗೆ ಸಿಡ್ನಿ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ. ತವರಿನಲ್ಲಿ ನಡೆಯುತ್ತಿರುವ T20 ವಿಶ್ವಕಪ್‌ನ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಆಸೀಸ್ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದೆ. ಆದರೆ 2021ರ ಫೈನಲ್‌ನಲ್ಲಿ ಅನುಭವಿಸಿದ ಸೋಲಿನ ಆಘಾತವನ್ನ ಮರೆಯದ ಕಿವೀಸ್, ಕಾಂಗರೂ ಪಡೆಗೆ ಅವರದ್ದೇ ನೆಲದಲ್ಲಿ ಸೋಲಿಸಿ ಪ್ರತೀಕಾರ ತೀರಿಸಿಕೊಳ್ಳಲು ರಣತಂತ್ರ ರೂಪಿಸಿಕೊಂಡಿದೆ.
ಸಂಭಾವ್ಯ ತಂಡಗಳು:
ಆಸ್ಟ್ರೇಲಿಯಾ: ಆರನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟಾಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜ್ಹಂಪ, ಜೋಶ್ ಹೇಜ಼ಲ್ವುಡ್.
ನ್ಯೂಜಿ಼ಲೆಂಡ್: ಡೆವೋನ್ ಕಾನ್ವೆ, ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಂಸನ್(ನಾಯಕ), ಗ್ಲೆನ್ ಫಿಲಿಪ್ಸ್, Glenn Phillips, ಮೈಕೆಲ್ ಬ್ರಾಸ್ವೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಲೂಕಿ ಫೆರ್ಗುಸನ್, ಇಶ್ ಸೋಧಿ.
ಪಂದ್ಯದ ಸಮಯ: ಮಧಾಹ್ನ 12:30pm
ಇಂಗ್ಲೆಂಡ್ v ಅಫ್ಘಾನಿಸ್ತಾನ್ ಫೈಟ್
ಸೂಪರ್-12 ಹಂತದ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಚಾಲೆಂಜ್ ಎದುರಿಸಲು ಇಂಗ್ಲೆಂಡ್ ಸಜ್ಜಾಗಿದೆ. ಉಭಯ ತಂಡಗಳು ಪರ್ತ್ ಮೈದಾನದಲ್ಲಿ ಮುಖಾಮುಖಿ ಆಗಲಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ. ಹೊಸ ನಾಯಕ ಜೋಸ್ ಬಟ್ಲರ್ ನೇತೃತ್ವದಲ್ಲಿ ಇಂಗ್ಲೆಂಡ್ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲು ರೆಡಿಯಾಗಿದೆ.
ಗಾಯಾಳುಗಳ ಸಮಸ್ಯೆ ನಡುವೆಯೂ ಟಿ20 ವಿಶ್ವಕಪ್ ಆಡಲು ಸಜ್ಜಾಗಿರುವ ಇಂಗ್ಲೆಂಡ್ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಮತ್ತೊಂದೆಡೆ, ಅಫ್ಘಾನಿಸ್ತಾನವು ಸೂಪರ್-12 ಹಂತದಲ್ಲಿ ಬಲಿಷ್ಠ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್‌ನಲ್ಲಿ ಸಮತೋಲನ ಕಾಯ್ದುಕೊಂಡಿರುವ ಆಫ್ಘಾನ್ ತಂಡಕ್ಕೆ ಸ್ಪಿನ್ ಬೌಲರ್‌ಗಳೇ ಪ್ರಮುಖ ಶಕ್ತಿಯಾಗಿದ್ದಾರೆ.
ಹೀಗಾಗಿ ಎಲ್ಲಾ ಕಣ್ಣುಗಳು ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಮೇಲಿದೆ. ಆಸೀಸ್ ಅಂಗಳದಲ್ಲಿ ಆಂಗ್ಲರ ಆರ್ಭಟಕ್ಕೆ ಕಡಿವಾಣ ಹಾಕಲು ಆಫ್ಘಾನ್ ಸ್ಪಿನರ್‌ಗಳು ರಣತಂತ್ರ ರೂಪಿಸಿಕೊಂಡು ಸಜ್ಜಾಗಿದ್ದಾರೆ.
ಸಂಭಾವ್ಯ ತಂಡಗಳು:
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಕ್ರಿಸ್ ಜಾರ್ಡನ್, ಆದಿಲ್ ರಶೀದ್, ಮಾರ್ಕ್ ವುಡ್.
ಅಫ್ಘಾನಿಸ್ತಾನ:
ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಝಜೈ, ನಜೀಬುಲ್ಲಾ ಝದ್ರಾನ್, ಇಬ್ರಾಹಿಂ ಜದ್ರಾನ್ ಉಸ್ಮಾನ್ ಘನಿ, ಮೊಹಮ್ಮದ್ ನಬಿ(ನಾಯಕ), ಫರೀದ್ ಅಹ್ಮದ್ ಮಲಿಕ್, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.
ಪಂದ್ಯದ ಸಮಯ: ಸಂಜೆ 4:30pm
#t20 cricket world cup starts #austrelia #england #afhaghanisthan #newzland




