ಬ್ರಿಟನ್ ಕನ್ಸವೇರ್ಟಿವ್ ಪಕ್ಷದ ಸಂಸದರಾದ ರಿಷಿ ಸುನಕ್‌ಗೆ ಪಕ್ಷದ ನಾಯಕತ್ವಕ್ಕೆ ಸ್ಪರ್ಧಿಸಲು ಬೇಕಾದ ಕನಿಷ್ಠ ಮಿತಿ ದೊರಕಿದೆ. ರಿಷಿ ಅವರನ್ನು ಬೆಂಬಲಿಸುವ ನೂರನೇ ಸಂಸದನ ಗೌರವ ದೊರಕಿದೆ ಎಂದು ಹಿರಿಯ ಸಂಸದರಾದ ಟೋಬಿಯಾಸ್ ಎಲ್ವುಡ್ ಟ್ವೀಟ್ ಮಾಡಿದ್ದಾರೆ.

ರಿಷಿ ಸುನಕ್ ಅವರ ವಿರೋಧಿಗಳು ಪಕ್ಷದ ನೂರು ಸಂಸದರಿಂದ ಬೆಂಬಲ ಪಡೆಯಲು ವಿಫಲವಾದರೆ ಸುನಕ್ ಅವರು ಪಕ್ಷದದ ನಾಯಕ ಮತ್ತು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರ ನಾಟಕೀಯ ರಾಜೀನಾಮೆಯ ನಂತರ, ಬ್ರಿಟನ್ ಆಡಳಿತ ಪಕ್ಷದಲ್ಲಿ ಈ ವರ್ಷ ಎರಡನೇ ಬಾರಿ ನಾಯಕತ್ವ ಸ್ಪರ್ಧೆ ಏರ್ಪಟ್ಟಿದೆ. ಕ್ಯಾಬಿನೆಟ್ ಸದಸ್ಯ ಪೆನ್ನಿ ಮೊರ್ಡಾಂಟ್ ಅವರು ತಮ್ಮ ಉಮೇದುವಾರಿಕೆಯನ್ನು ಔಪಚಾರಿಕವಾಗಿ ಘೋಷಿಸಿದ ಮೊದಲಿಗರಾಗಿದ್ದಾರೆ. ಈ ಮಧ್ಯೆ, ಬೋರಿಸ್ ಜಾನ್ಸನ್ ಸಹ ಟೋರಿ ನಾಯಕತ್ವಕ್ಕೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಸುನಕ್ ಅಥವಾ ಜಾನ್ಸನ್ ಅವರು ತಮ್ಮ ಸ್ಪರ್ಧೆ ಕುರಿತಂತೆ ಈವರೆಗೆ ಸಾರ್ವಜನಿಕವಾಗಿ ಘೋಷಿಸಿಲ್ಲ.




