ಬೆಂಗಳೂರು: ಗಲಾಟೆ, ಜಗಳ, ಕೋಪ ವಾಕ್ಸಮರದಲ್ಲಿಯೇ ಕಳೆದು ಹೋಗುತ್ತಿರುವ ಬಿಗ್ ಬಾಸ್ ಸೀನನ್ 9 ಈ ವಾರದಲ್ಲಿ ಟಾಸ್ಕ್ ವಿಷಯವಾಗಿ ದೀಪಿಕಾ ದಾಸ್ ಮತ್ತು ರೂಪೇಶ್ ರಾಜಣ್ಣ ನಡುವೆ ಮಾತಿನ ಜಟಾಪಟಿಯಾಗಿದೆ.
ದೊಡ್ಮನೆಯಲ್ಲಿ ಗೊಬ್ಬರಗಾಲ, ಆರ್ಯವರ್ಧನ್ ಗುರೂಜಿ ನೇತೃತ್ವದಲ್ಲಿ ಮನೆ ನಡೆಸಲಾಯಿತು. ಈ ವೇಳೆಯಲ್ಲಿ ಟಾಸ್ಕ್ ಮೇಲೆ ಟಾಸ್ಕ್ ಗಳನ್ನು ನೀಡಲಾಯಿತು. ಆ ಅವಧಿಯಲ್ಲಿ ಮನೆಯಲ್ಲಿ ಸಾಕಷ್ಟು ಜಗಳ, ಕೋಪ ಮಾಡಿಕೊಂಡ ಘಟನೆಗಳು ಸಂಭವಿಸಿದವು. ಇದೀಗ ದೀಪಿಕಾ ದಾಸ್ ಕ್ಯಾಪ್ಟೆನ್ಸಿಯಲ್ಲಿ ಮನೆ ನಡೆಯುತ್ತಿದೆ. ಈ ವೇಳೆಯೂ ಟಾಸ್ಕ್ ಗಳಿಗೆ ಕೊರತೆಯಿಲ್ಲದಂತೆ ಬಿಗ್ ಬಾಸ್ ನೋಡಿಕೊಂಡಿದೆ.

ದೊಡ್ಮನೆಯಲ್ಲಿ ಟಾಸ್ಕ್‌ವೊಂದಕ್ಕೆ ಸಂಬಂಧಿಸಿ ದೀಪಿಕಾ ಮತ್ತು ರಾಜಣ್ಣ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಮಟ್ಟದಲ್ಲಿ ವಾಕ್ಸಮರಕ್ಕೆ ಕಾರಣವಾಯಿತು. ದೀಪಿಕಾ ರೂಪೇಶ್ ಮೇಲೆ ರೇಗಾಡಿದರು. ಅಲ್ಲದೆ, ನೀನೇನಿದ್ದರೂ ಆನೆ ಜೊತೆ ಗುದ್ದಾಡು, ನನ್ನ ಹತ್ರ ಬರಬೇಡಂತ ಖಡಕ್ ವಾರ್ನಿಂಗ್ ನೀಡಿದರು. ಅದಕ್ಕೆ ರೂಪೇಶ್ ಗರಂ ಆದರು.
ರೂಪೇಶ್ ರಾಜಣ್ಣ ಅವರು ಮುಂದಿರುವ ಟೀಮ್ ಕಡೆ ಸ್ವಲ್ಪ ನೋಡಿ, ಅವರ ಆಟ ತಪ್ಪಾಗುತ್ತಿದೆ ಎಂದು ಹೇಳಲು ಬಂದಾಗ ಅದಕ್ಕೆ ಸ್ಪಂದಿಸಲಿಲ್ಲ. ಈ ವಿಚಾರಕ್ಕೆ ದೀಪಿಕಾ ರನ್ನು ಪ್ರಶ್ನಿಸಿದ ರೂಪೇಶ್, ಕ್ಯಾಪ್ಟನ್ ಆಗಿ ಮನೆಯಲ್ಲಿ ಪ್ರಾಬ್ಲಂ ಆದಾಗ ಅದರ ಕಡೆ ಗಮನ ಕೊಡಬೇಕು ಎಂದು ದೀಪಿಕಾ ಮೇಲೆ ಕಿಡಿಕಾರಿದ್ದಾರೆ. ಇದಕ್ಕೆ ಸ್ಪಂದಿಸಿದ ದೀಪಿಕಾ, ನೀವು ನಿಮ್ಮ ಟೀಂ ಜೊತೆಗೆ ಸ್ಪಂದಿಸಿ ಎಂದಿದ್ದಾರೆ. ಇದೇ ವೇಳೆ ನೀವು ಆನೆ ಜೊತೆಗೆ ಹೊಡೆದಾಡಿ ಎಂದಿದ್ದಾರೆ. ಅದಕ್ಕೆ ರೂಪೇಶ್ ರಾಜಣ್ಣ, ನೀವು ಈ ಮನೆ ರಾಜ, ಕ್ಯಾಪ್ಟನ್ ಆಗಿರುವ ನೀವು ಆನೆ ಇದ್ದಂತೆ ಎಂದು ಹೇಳಿದ್ದಾರೆ. ಕ್ಯಾಪ್ಟನ್ ಆದ್ರೆ ಎಲ್ಲರ ಮಾತು ಕೇಳಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ರೂಪೇಶ್ ರಾಜಣ್ಣ ಗರಂ ಆಗಲು ಕಾರಣವಾಯ್ತು




