GOVERNMENT DISRESPECT TO Dy. SPEAKER: ಕನಿಷ್ಟ ಶೋಕಾಚರಣೆ ಮರೆತ ಸರ್ಕಾರ: ಬೆಳಗಾವಿ ಪುತ್ರನಿಗೆ ಸರ್ಕಾರದಿಂದ ಅಗೌರವ: ಸ್ವಂತ ಜಿಲ್ಲೆಯಲ್ಲಿ ಆನಂದ್ ಮಾಮನಿಗೆ ಅಪಮಾನ

ಬೆಂಗಳೂರು/ಬೆಳಗಾವಿ: ಕಿತ್ತೂರು ಉತ್ಸವವನ್ನು ಮಾಡಬೇಕೆಂಬ ಒಂದೇ ಒಂದು ಉದ್ದೇಶದಿಂದ ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರಿಗೆ ರಾಜ್ಯ ಸರ್ಕಾರ ನೀಡಬೇಕಾಗಿರುವ ಗೌರವವನ್ನು ನೀಡಿಲ್ಲ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.
ರಾಜ್ಯ ಸರ್ಕಾರ ಮೂರು ದಿನ ಅವರ ಗೌರವಾರ್ಥವಾಗಿ ಶೋಕಾಚರಣೆ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಓರ್ವ ವಿಧಾನಸಭೆಯ ಉಪಾಧ್ಯಕ್ಷರು ನಿಧನಹೊಂದಿದಾಗ ಈ ರೀತಿ ಗೌರವ ನೀಡದ ಸರ್ಕಾರ ಸಾಮಾನ್ಯ ಜನರಿಗೆ ಇನ್ನಾವ ರೀತಿಯಲ್ಲಿ ಗೌರವ ನೀಡುತ್ತದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬಂದಿದೆ.
ದೀಪಾವಳಿ ಹಬ್ಬ ಬಂದಿರುವ ಹಿನ್ನೆಲೆಯಲ್ಲಿ ಶೋಕಾಚರಣೆ ಮಾಡುತ್ತಿಲ್ಲ ಎಂಬ ಸಮಜಾಯಿಸಿ ಉತ್ತರ ಸರ್ಕಾರದ್ದಾಗಿದೆ. ಆದರೆ, ಶೋಕಾಚರಣೆಗೂ ಹಬ್ಬಕ್ಕೂ ಸಂಬಂಧವಿಲ್ಲ.

ಶೋಕಾಚರಣೆ ಮಾಡಿದಾಗ ರಾಜ್ಯ ಸರ್ಕಾರದ ವತಿಯಿಂದ ನಡೆಯುತ್ತಿರುವ ವಿಜ್ರಂಭಣೆಯ ಕಾರ್ಯಕ್ರಮಗಳು ನಡೆಯುವ ಹಾಗಿಲ್ಲ. ಬದಲಾಗಿ ಇನ್ನಾವುದೇ ರೀತಿಯಲ್ಲಿ ಎಫೆಕ್ಟ್ ಇರಲಿಲ್ಲ.
ಆದರೂ ಕೂಡ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತಮ್ಮದೇ ಶಾಸಕನೋರ್ವ ಹಾಗೂ ಶಾಸನಸಭೆಯ ಉಪಾಧ್ಯಕ್ಷ ನಿಧನರಾದಾಗ ನೀಡಿರುವ ಗೌರವ ನೋಡಿದರೆ ಅವರಿಗೆ ಕಾರ್ಯಕ್ರಮಗಳೇ ಮುಖ್ಯ ಎಂಬಂತೆ ಭಾಸವಾಗಿದೆ.

ಕೇವಲ ಕಿತ್ತೂರು ಉತ್ಸವವನ್ನು ಮಾಡಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಶೋಕಾಚರಣೆ ಮಾಡಲಿಲ್ಲ ಎಂಬ ಮಾತುಗಳು ಕೇಳಿಬಂದಿದೆ.
ಅದೇ ರೀತಿಯಲ್ಲಿ ಸುಳ್ಯಾದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದಾಗ ಸರ್ಕಾರ ಒಂದು ವರ್ಷದ ಸಾಧನೆಯ ಜನಸ್ಪಂದನಾ ಕಾರ್ಯಕ್ರಮವನ್ನೇ ರದ್ದುಗೊಳಿಸಿತ್ತು.

ರಾತ್ರೋ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿ ಕಾರ್ಯಕ್ರಮವನ್ನು ಮುಂದೂಡಿತ್ತು. ಆದರೆ, ವಿಧಾನಸಭೆಯ ಉಪಾಧ್ಯಕ್ಷರು ನಿಧರಾದರೇ ಕನಿಷ್ಠ ಸೌಜನ್ಯವನ್ನು ಮರೆತು ಶೋಕಾಚರಣೆ ಮಾಡಿಲ್ಲ. ಹಾಗೆಯೇ ಅವರಿಗೆ ನೀಡಬೇಕಾದ ಎಲ್ಲಾ ರೀತಿಯ ಗೌರವ ನೀಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಓರ್ವ ಕಾರ್ಯಕರ್ತನಿಗೆ ನೀಡಿಗ ಗೌರವ ಮುಖಂಡನಿಗೆ ಅದರಲ್ಲೂ ಮೂರು ಬಾರಿ ಗೆದ್ದಿರುವ ಜನನಾಯಕ, ವಿವಾದ ರಹಿತ ಮುಖಂಡನಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿರುವ ಗೌರವ ಇದಾಗಿದೆ ಎಂದು ಅನೇಕರು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲೂ ಕೂಡ ಕೇವಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಎಂದು ನಮೂದಿಸಿದೆ ಆದರೆ, ಶೋಕಾಚರಣೆ ವಿಷಯವನ್ನು ಪ್ರಸ್ತಾಪ ಮಾಡಿಲ್ಲ. ಉದ್ದೇಶಪೂರ್ವಕವಾಗಿಯೇ ಈ ರೀತಿ ರಾಜ್ಯ ಸರ್ಕಾರ ನಡೆದುಕೊಂಡಿದೆ ಎನ್ನುವುದು ವಾದವಾಗಿದೆ.
ಉಸ್ತುವಾರಿ ಸಚಿವ ಗೈರಿನಲ್ಲಿ ಆರಂಭವಾದ ಕಿತ್ತೂರು ಉತ್ಸವ
ವಿಧಾನ ಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ನಿಧನರಾದ ಹಿನ್ನೆಲೆಯಲ್ಲಿ ನಿನ್ನೆ ಆರಂಭವಾಗಬೇಕಾಗಿದ್ದ ಕಿತ್ತೂರು ಉತ್ಸವಕ್ಕೆ ಇಂದು ಚಾಲನೆ ದೊರೆತಿದೆ.

ಇಂದಿನಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ಕಿತ್ತೂರು ಉತ್ಸವ ನಡೆಯುತ್ತಿದೆ. ಆದರೆ, ವೀರಜ್ಯೋತಿ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆಗಮಿಸಬೇಕಿತ್ತು. ಅವರೂ ಬಾರದೇ ಕಳೆಗಟ್ಟಬೇಕಾಗಿದ್ದ ಕಾರ್ಯಕ್ರಮಕ್ಕೆ ಆರಂಭದಲ್ಲೇ ಅಪಸ್ವರ ಹಾಡಿದ್ದಾರೆ.
ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕಿತ್ತೂರು ಉತ್ಸವ ನಡೆಯುತ್ತಿದ್ದು, ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ವೀರಜ್ಯೋತಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ವೀರಜ್ಯೋತಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ ಚಾಲನೆ ನೀಡಿದರು.

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ಚಾಮೀಜಿ, ಡಿಸಿ ನಿತೇಶ್ ಪಾಟೀಲ್, ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸೇರಿ ಹಲವರು ವೀರಜ್ಯೋತಿಯನ್ನು ಸ್ವಾಗತಿಸಿದರು. ಬಳಿಕ ಕಿತ್ತೂರಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.
ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಂದಿ ಧ್ವಜ ಧ್ವಜಾರೋಹಣ ನೇರವೇರಿಸಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ವಿವಿಧ ಕಲಾತಂಡಗಳ ಅದ್ಧೂರಿ ಮೆರವಣಿಗೆಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಚಾಲನೆ ನೀಡಿದರು.

ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡಮದ್ದಳೆ, ಪೂಜಾ ಕುಣಿತ, ಕೋಳಿ ಕುಣಿತ, ಪುರವಂತರಿಂದ ವೀರಗಾಸೆ, ಪಟಾಕುಣಿತ, ಚಿಟ್ಟೆಮೇಳ, ಗೊಂಬೆ ಕುಣಿತ, ಝಾಂಜ್ ಪಥಕ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ಜಾನಪದ ಗೀತೆ ಹಾಡುತ್ತಾ ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕಿತ್ತೂರು ವಿಜಯೋತ್ಸವದ ಸವಿನೆನಪಿಗಾಗಿ ರಾಜ್ಯಾದ್ಯಂತ ಸಂಚರಿಸಿದ ವೀರಜ್ಯೋತಿಗೆ ಅಕ್ಟೋಬರ್ 2ರಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಅವರು ಚಾಲನೆ ನೀಡಿದ್ದರು.

More News