ಬೆಂಗಳೂರು : SC, ST ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ನೀಡಿದ್ದೇವೆ. ಮುಖ್ಯಮಂತ್ರಿಗಳು ಸಾಕಷ್ಟು ಸವಾಲು ಎದುರಿಸಿ ಧೈರ್ಯದಿಂದ ಈ ಕಾರ್ಯ ಮಾಡಿದ್ದಾರೆ. ಮುಂದೆ ಏನೇ ಸವಾಲು ಬಂದ್ರೂ ಎದುರಿಸುತ್ತೇವೆ.
ಬೊಮ್ಮಾಯಿ ಅವರ ಇಚ್ಚೆಯಂತೆ ದೀಪಾವಳಿಯ ಶುಭ ಸಂದರ್ಭದಲ್ಲಿ SC /ST ಸಮುದಾಯಕ್ಕೆ ಸರ್ಕಾರದ ಅಧಿಕೃತ ರಾಜ್ಯಪತ್ರ ನೀಡುತ್ತಿದ್ದೇನೆ. ಎಲ್ಲರ ಬಾಳಲ್ಲಿ ಬೆಳಕು ಮೂಡಲಿ. ಎಲ್ಲರೂ ಹೇಳಿದರು, ಇದು ಜೇನು ಗೂಡಿಗೆ ಕಲ್ಲೆಸೆಯುವ ಕಾರ್ಯ ಎಂದು. ಆದರೂ ಸಹ ಹೆಚ್ಚಳ ಮಾಡುವ ನಿರ್ಧಾರದಿಂದ ಮುಖ್ಯಮಂತ್ರಿಗಳು ಹಿಂದೆ ಸರಿದಿಲ್ಲ. ಬದ್ಧತೆಯಿಂದ ನಮ್ಮ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಹಲವಾರು ಜನ ಸ್ವಾಮೀಜಿಗಳು ಇಲ್ಲೇ ಇನ್ನೂ ಬಹಳ ಕಾಲ ಇರಲಿ ಎಂದು ಆಶಿಸಿದ್ದರು. ವಾಲ್ಮೀಕಿಯ ಸಮುದಾಯದ ಪೀಠಾಧ್ಯಕ್ಷರಿಗೆ ರಾಜ್ಯಪತ್ರ ಕೊಟ್ಟಿದ್ದೇವೆ. ಸಮುದಾಯ ಆನಂದದಿಂದ ವಿಶೇಷ ದೀಪಾವಳಿ ಆಚರಿಸಲಿ. ಇಂದು ವನವಾಸ ಮುಗಿಸಿ ಪ್ರಭು ಶ್ರೀರಾಮ ಮರಳಿ ಮನೆಗೆ ಬಂದ ದಿನ. ವಾಲ್ಮೀಕಿ ರಾಮಾಯಣ ಬರೆದ ದಿನ.

ಬೊಮ್ಮಾಯಿ ಅಲ್ಲದೆ ಬೇರೆ ಯಾರಾದರೂ ಆಗಿದ್ದರೆ ಇಷ್ಟು ರಿಸ್ಕ್ ತಗೋತಿರಲಿಲ್ಲ. ನ್ಯಾಯಯುತವಾಗಿ ಯಾರಿಗೆ ಏನು ಸಿಗಬೇಕು ಅದನ್ನು ನೀಡಲು ನಾವು ಬದ್ಧರಾಗಿದ್ದೇವೆ. ಸಮುದಾಯಕ್ಕಾಗಿ ಸ್ವಾಮೀಜಿಗಳು ಇಷ್ಟು ದಿನ ಕತ್ತಲಲ್ಲಿದ್ದರು. ಇಂದು ಬೆಳಕು ಮೂಡಿದೆ. ಮಠದಲ್ಲಿ ವಿಜ್ರಂಭಣೆಯಿಂದ ದೀಪಾವಳಿ ಆಚರಿಸಲಿ. ಜನರಿಗೆ ಒಳ್ಳೆಯದಾಗುತ್ತದೆ ಎಂದಾದರೆ ನಾವು ಎಂತಹ ಕಠಿಣ ಸಂದರ್ಭ ಎದುರಿಸಲು ಸಿದ್ಧ. ಮುಂದು ಸಹ ಎಲ್ಲರ ಸಹಕಾರ ಹೀಗೆಯೇ ಇರಲಿ, ಎಂದು ಅಶೋಕ ಹೇಳಿದರು.




