KANTARA FILM CONTROVERSY: ‘ವರಹಾ ರೂಪಂ’ ಹಾಡು ಕದ್ದ ಆರೋಪ: ‘ಕಾಂತಾರ’ ಸಿನಿಮಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ‘ಥೈಕ್ಕುಡಂ ಬ್ರಿಡ್ಜ್‌’ ತಂಡ

ಬೆಂಗಳೂರು : ದೇಶ ವಿದೇಶಗಳ ಚಿತ್ರರಂಗದಲ್ಲಿ ಬಾರಿ ಸದ್ದು ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಇದೀಗ ಚರ್ಚೆಯ ವಿಷಯವಾಗಿದೆ. ಕನ್ನಡದ ಸಿನಿಮಾ ಒಂದು ಇಷ್ಟರ ಮಟ್ಟಿಗೆ ಬೆಳವಣಿಗೆ ಕಂಡಿರುವುದು ಹೆಮ್ಮೆಯ ಸಂಗತಿ.
ಚಿತ್ರದ ಜೊತೆಗೆ ಇದರಲ್ಲಿನ ಹಾಡುಗಳು ಸಖತ್ ಪೇಮಸ್ ಆಗಿದ್ದು, ಪ್ರೇಕ್ಷಕರ ಮನಸೆಳೆದಿವೆ. ಚಿತ್ರದ‌ ಕುರಿತು ಪರ ಮತ್ತು ವಿರೋಧದ ಚರ್ಚೆಗಳು, ಟೀಕೆಗಳು, ಆರೋಪಗಳ ನಡುವೆಯೂ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಆದರೆ, ಈ ಚಿತ್ರದಲ್ಲಿ ಬರುವ ವರಾಹ ರೂಪಂ ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ.
ಮಲೆಯಾಳಂ ಭಾಷೆಯ ಮೂಲದ ನವರಸಂ ಹಾಡಿನ್ನು ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಕೃತಿಚೌರ್ಯ ಮಾಡಿದ್ದಾರೆ. ಇದು ಸರಿಯಲ್ಲ. ಹೀಗಾಗಿ, ಕೇಸ್ ಹಾಕಲು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​’ ತಂಡದವರು ನಿರ್ಧರಿಸಿದ್ದಾರೆ. ಆದರೆ, ನಿರ್ದೇಶಕ ಮತ್ತು ಸಿನಿಮಾ ನಿರ್ಮಾಣ ಮಾಡಿರುವ ಸಂಸ್ಥೆಯು ಹೇಗೆ ಪ್ರತಿಕ್ರಿಯೆ ನೀಡುವರು ಎಂಬ ಆಶ್ಚರ್ಯ ಕಾದಿದೆ.
ಕನ್ನಡದಲ್ಲಿ ಕಾಂತಾರ ಚಿತ್ರ ಬಿಡುಗಡೆಯಾದ ಆರಂಭದಲ್ಲಿ ಮಲಯಾಳಂ ಮೂಲದ ನವರಸಂ ಹಾಗೂ ವರಾಹ ರೂಪಂ ಹಾಡಿನ ನಡುವೆ ಇರುವ ಸಾಮ್ಯತೆ ಇದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಹಲವಾರು ಜನರು ಈ ಬಗ್ಗೆ ಟೀಕೆಯನ್ನು ಮಾಡಿದ್ದರು. ಆದರೆ, ಈ ಹಾಡು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ ಎಂದು ಅಜನೀಶ್​ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದ ತೈಕ್ಕುಡಂ ಬ್ರಿಡ್ಜ್ ತಂಡದವರು ಈಗ ಕೇಸ್​ ಹಾಕಲು ಮುಂದಾಗಿದ್ದಾರೆ.

5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಅಲ್ಬಮ್ ಹಾಡೊಂದನ್ನು ರಿಲೀಸ್ ಮಾಡಿತ್ತು. ಥೈಕ್ಕುಡಂ ಬ್ರಿಡ್ಜ್ ಅನ್ನೋ ತಂಡ ಈ ಸಾಂಗ್ ಅನ್ನು ಟ್ಯೂನ್ ಹಾಕಿ, ಕಂಪೋಸ್ ಮಾಡಿದೆ. ಮಾತೃಭೂಮಿ ಕಪ್ಪಾ ಟಿವಿಯಲ್ಲಿ ಈ ನವರಸಂ ಸಾಂಗ್ ಲಭ್ಯವಿದೆ. ಅಸಲಿಗೆ ಈ ನವರಸಂ ಸಾಂಗ್ ಹಾಗೂ ಕಾಂತಾರದ ವರಹ ರೂಪಂ ಸಾಂಗ್ ಎರಡಕ್ಕೂ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ ಸಂಗೀತ ಅಜನೀಶ್ ಬಿ ಲೋಕನಾಥ್ ಈ ಹಾಡನ್ನು ಕಾಪಿ ಮಾಡಿದ್ದಾರೆ ಅಂತ ನೆಟ್ಟಿಗರು ಆರೋಪ ಮಾಡಿದ್ದಾರೆ. ಇದೀಗ ಥೈಕ್ಕುಡಂ ಬ್ರಿಡ್ಜ್‌ ತಂಡವು ಕಾನೂನು ಕ್ರಮಕ್ಕೆ ಮುಂದಾಗಿದೆ.

ತೈಕ್ಕುಡಂ ಬ್ರಿಡ್ಜ್ ತಂಡವು ಕಾಂತಾರ ಸಿನಿಮಾ ತಂಡದ ಜೊತೆಗೆ ಯಾವುದೇ ಸಹಕಾರ ಅಥವಾ ಒಪ್ಪಂದ ಮಾಡಿಕೊಂಡಿಲ್ಲ. ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮ ಜರುಗಿಸಲು ಆಗ್ರಹಿಸುತ್ತೇವೆ ಎಂದು ತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಅದರ ಹಕ್ಕು ಸ್ವಾಮ್ಯ ಸಹ ನೀಡಿಲ್ಲ. ಇದನ್ನು ತಮ್ಮ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿಕೊಂಡಿದ್ದಾರೆ. ಹೀಗಾಗಿ, ಈ ಹಾಡಿನ ಕುರಿತು ತಗಾದೆ ಎದ್ದಿದ್ದು, ಸಂಗೀತ ಕಲಾವಿದರು ಮ್ಯೂಸಿಕ್ ಕಾಫಿ ರೈಟ್ ಉಳಿಸುವ ಕಡೆಗೆ ಸಲಹೆ ಮತ್ತು ಅಭಿಪ್ರಾಯ ಹಂಚಿಕೊಳ್ಳಬೇಕೆಂದು ತಂಡವು ಕೋರಿದೆ.

#kantara film song #thaikudu #thaikkudambridge team #Kantara #Navarasam #Varaha Roopam #copyright laws #legal action

More News