T20 CWC 2022: ಸೂಪರ್‌ 12 ಪ್ರವೇಶಿಸುವಲ್ಲಿ ವಿಂಡೀಸ್‌ ವಿಫಲ: ಕೋಚ್‌ ಸ್ಥಾನದಿಂದ ಕೆಳಗಿಳಿಯಲಿರುವ ಫಿಲ್ ಸಿಮನ್ಸ್

ವಿಶ್ವ ಕ್ರಿಕೆಟ್‌ನಲ್ಲಿ ದಶಕಗಳ ಕಾಲ ಅಧಿಪತ್ಯ ಸಾಧಿಸಿದ್ದ ವೆಸ್ಟ್‌ ಇಂಡೀಸ್‌, ಪ್ರಸಕ್ತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T20 ವಿಶ್ವಕಪ್‌ ಟೂರ್ನಿಯ ಸೂಪರ್‌-12 ಹಂತಕ್ಕೆ ಎಂಟ್ರಿ ಪಡೆಯಲು ವಿಫಲವಾಗಿದೆ. ಕೆರೆಬಿಯನ್ನರ ಈ ವೈಫಲ್ಯ ಹಲವು ಟೀಕೆ ಹಾಗೂ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ವೆಸ್ಟ್‌ ಇಂಡೀಸ್‌ ತಂಡದ ಮುಖ್ಯ ಕೋಚ್ ಫಿಲ್ ಸಿಮಾನ್ಸ್ ತಲೆದಂಡವಾಗಿದೆ.
ಈ ಬಾರಿಯ ಐಸಿಸಿ ಟಿ 20 ವಿಶ್ವಕಪ್‌ ಟೂರ್ನಿ ಆರಂಭದಲ್ಲೇ ಸಾಕಷ್ಟು ಅಚ್ಚರಿಗಳು ನಡೆಯುತ್ತಿವೆ. ಅದರಂತೆ ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದ ವೆಸ್ಟ್ಇಂಡೀಸ್, ಟಿ20 ವಿಶ್ವಕಪ್‌ನ ಸೂಪರ್‌ 12 ಹಂತಕ್ಕೇರುವ ಮುನ್ನವೇ ಟೂರ್ನಿಯಿಂದ ನಿರ್ಗಮಿಸಿದೆ. ವಿಂಡೀಸ್‌ ಆಟಗಾರರ ಈ ಪ್ರದರ್ಶನದ ಬಗ್ಗೆ ತಂಡದ ಹಲವು ಮಾಜಿ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ತಂಡದ ಮುಖ್ಯ ಕೋಚ್ ಫಿಲ್ ಸಿಮಾನ್ಸ್ ಕೋಚ್‌ ಹುದ್ದೆಗೆ ಕೆಳಗಿಳಿದಿದ್ದಾರೆ. ಫಿಲ್‌ ಸಿಮಾನ್ಸ್‌ ಸಾರಥ್ಯದಲ್ಲಿ ನ.30ರಿಂದ ಡಿ.12ರವರೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಕೊನೆಯ ಟೆಸ್ಟ್ ಸರಣಿ ಆಡಲಿದೆ ಎಂದು ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.

ಇನ್ನೂ ತಾವು ಕೋಚ್‌ ಹುದ್ದೆಯಿಂದ ಕೆಳಗಿಳಿಯುತ್ತಿರುವ ಬಗ್ಗೆ ತಿಳಿಸಿರುವ ಫಿಲ್‌ ಸಿಮಾನ್ಸ್‌, ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಉಂಟಾದ ಸೋಲು ಕೇವಲ ತಂಡಕ್ಕೆ ಮಾತ್ರವಲ್ಲ ದೇಶಕ್ಕೂ ನೋವಾಗಿದೆ. ತುಂಬ ನಿರಾಸೆಯಾಗಿದೆ. ನಾವು ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಇನ್ನು ನಮ್ಮ ಅನುಪಸ್ಥಿತಿಯಲ್ಲಿ ತಂಡ ಆಡಲಿದೆ. ನಾನು ಅಭಿಮಾನಿಗಳ ಕ್ಷಮೆಯನ್ನು ಕೇಳುತ್ತೇನೆ ಎಂದು ಸಿಮಾನ್ಸ್ ಹೇಳಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತು. ಆದರೆ ಸೂಪರ್‌-12 ಆರಂಭಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದ ವಿಂಡೀಸ್‌, ಬಿ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಮೊದಲ ಸುತ್ತಿನಲ್ಲೆ ನಿರ್ಗಮಿಸಿತ್ತು.

ಕ್ರಿಕೆಟ್‌ ಜಗತ್ತಿನಲ್ಲಿ ದಶಕಗಳ ಕಾಲ ಮಿಂಚಿರುವ ಹಾಗೂ ತಮ್ಮದೇ ಪ್ರಾಬಲ್ಯ ಸಾಧಿಸಿರುವ ವೆಸ್ಟ್‌ ಇಂಡೀಸ್‌, 2016ರಲ್ಲಿ ವಿಂಡೀಸ್ ಟಿ20 ವಿಶ್ವಕಪ್ ಗೆದ್ದಾಗ ಸಿಮನ್ಸ್ ತಂಡದ ಕೋಚ್ ಆಗಿದ್ದರು. ಇಂಗ್ಲೆಂಡ್ ವಿರುದ್ದ 1-0 ಐತಿಹಾಸಿಕ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

#Phil Simmons #west indies coach #resigns #cricket world cup #performence #super-12

More News