ಬಾಲಿವುಡ್ ನಟಿ ಉರ್ಫಿ ಜಾವೇದ್ ಅರೆಬೆತ್ತಲಾಗಿ ಅಭಿಮಾನಿಗಳಿಗೆ ದೀಪಾವಳಿ ವಿಶ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ.ಟಾಪ್ ಲೆಸ್ ಆಗಿ ಹಣತೆಗಳ ಮುಂದೆ ಇರುವ ಉರ್ಫಿ, ಕಪ್ ಕೇಕ್ ತಿನ್ನುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅವರು ಹಾಕಿಕೊಂಡಿದ್ದಾರೆ.ಎರಡು ಕೆಂಪು ಹೃದಯದ ಎಜೋಜಿಗಳೊಂದಿಗೆ ‘ಎಲ್ಲರಿಗೂ ದೀಪಾವಳಿ’ ಎಂದು ವಿಶ್ ಮಾಡಿದ್ದಾರೆ.ದೀಪಾವಳಿ ಹಿಂದುಗಳಿಗೆ ವಿಶೇಷ ಹಬ್ಬ. ಆದರೆ, ಅದಕ್ಕೆ ಉರ್ಫಿ ಅಗೌರವ ತೋರಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ.