ಧನಂಜಯ್ ರಿಂದ ವೀರಗಾಸೆಗೆ ಅವಮಾನ ಆರೋಪ

ವೀರಗಾಸೆಗೆ ಅವಮಾನ ಮಾಡುತ್ತಿರುವವರ ಮೇಲೆ ಜಯರಾಜ್ ಹೊಡೆದನೇ ಹೊರತು, ಜಯರಾಜ್ ವೀರಗಾಸೆಗೆ ಅವಮಾನ ಮಾಡಿಲ್ಲ ಎಂದು ನಟ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.

ಅಕ್ಟೋಬರ್ 21 ರಂದು ತೆರೆ ಕಂಡ ಹೆಡ್ ಬುಷ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ.ಡಾನ್​ ಎಂ.ಪಿ. ಜಯರಾಜ್ ಪಾತ್ರವನ್ನು ಧನಂಜಯ್ ನಿಭಾಯಿಸುವ ಮೂಲಕ ಸಿನಿ ಪ್ರೀಯರಿಂದ ಸೈ ಅನಿಸಿಕೊಂಡಿದ್ದಾರೆ.‌. ಜೊತೆಗೆ ಒಂದಷ್ಟು ಟೀಕೆಗೂ ಕಾರಣವಾಗಿದೆ.

ಸಿನಿಮಾದ ದೃಶ್ಯವೊಂದರಲ್ಲಿ ವೀರಗಾಸೆಯವರೊಂದಿಗೆ ಫೈಟ್ ಸೀನ್ ತೋರಿಸಲಾಗಿದೆ.. ಆ ದೃಶ್ಯದಲ್ಲಿ ಡಾಲಿ ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾತನಾಡಿದ ನಟ ಧನಂಜಯ್, ವೀರಗಾಸೆ ನಾನು ಚಿಕ್ಕ ವಯಸ್ಸಿನಿಂದ ನೋಡುತ್ತಾ ಬರುತ್ತಿರುವ ಕಲೆ. ನನ್ನ ಸಿನಿಮಾ ರಿಲೀಸ್ ಸಂದರ್ಭದಲ್ಲಿ ವೀರಗಾಸೆ ಅವರನ್ನು ಕರೆಸಿದ್ದೆ. ನಮ್ಮೂರಿನ ಜಾತ್ರೆ, ದೇವಸ್ಥಾನದ ಕಾರ್ಯಕ್ರಮದಲ್ಲಿ ವೀರಗಾಸೆ ಇದ್ದೇ ಇರುತ್ತದೆ. ನನ್ನಿಂದ ಅದಕ್ಕೆ ಅವಮಾನ ಆಗುತ್ತದೆ ಎಂದಿದ್ದರೆ ನಾನು ಅಲ್ಲಿ ಅದನ್ನು ತರುತ್ತಲೇ ಇರಲಿಲ್ಲ. ಫೈಟ್ ಸಂದರ್ಭದಲ್ಲಿ ವೀರಗಾಸೆ ಹಾಕಿಕೊಂಡವರು ಹಿಂದೆ ಸರಿಯುತ್ತಾರೆ. ವೀರಗಾಸೆ ರೀತಿಯ ವೇಷ ಹಾಕಿದವರು ಮುಂದೆ ಬರುತ್ತಾರೆ. ವೀರಗಾಸೆ ವೇಳೆ ಚಪ್ಪಲಿ ಹಾಕುವಂತಿಲ್ಲ. ಆದರೆ, ಜಯರಾಜ್ ಮೇಲೆ ಹಲ್ಲೆ ಮಾಡಿದವರು ಶೂ ಧರಿಸಿರುತ್ತಾರೆ. ಆಗ ಅವನಿಗೆ ಇವರು ವೀರಗಾಸೆಯವರು ಅಲ್ಲ ಎಂಬುದು ಗೊತ್ತಾಗುತ್ತದೆ. ಆಗ ಅವರ ಮೇಲೆ ಜಯರಾಜ್ ಹಲ್ಲೆ ಮಾಡುತ್ತಾನೆ. ವೀರಗಾಸೆಗೆ ಅವಮಾನ ಮಾಡುತ್ತಿರುವವರ ಮೇಲೆ ಜಯರಾಜ್ ಹೊಡೆದನೇ ಹೊರತು, ಜಯರಾಜ್ ವೀರಗಾಸೆಗೆ ಅವಮಾನ ಮಾಡಿಲ್ಲ ಎಂದು ನಗರದ ಖಾಸಗಿ ಚಾನಲ್ ಒಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

More News