ರಷ್ಯಾ ಮತ್ತು ಉಕ್ರೇನ್ ನಡುವಿನ ಹಗೆತನ ದಿನದಂದ ದಿನಕ್ಕೆ ಬೆಳೆಯುತ್ತಲೇ ಇದೆ. ಹೀಗಾಗಿ, ಉಕ್ರೇನ್ ನಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು, ಉದ್ಯೋಗ ಸಂಬಂಧಿಸಿದಂತೆ ಹೋಗಿರುವ ಜನತೆ ಭಾರತದ ಕಡೆಗೆ ವಾಪಸ್ಸು ಬನ್ನಿ ಅಂತ ಸೂಚನೆ ನೀಡಲಾಗಿದೆ. ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್ ಬಿಟ್ಟು ಭಾರತಕ್ಕೆ ಹೋಗುವಂತೆ ಉಕ್ರೇನ್ ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿಯಿಂದ ಸೂಚನೆ ನೀಡಿದ್ದಾರೆ. ಒಂದು ವಾರದ ಹಿಂದೆ ಉಕ್ರೇನ್ ತೊರೆಯುವಂತೆ ಸಲಹೆ ನೀಡಿದ್ದ ಭಾರತೀಯ ರಾಯಭಾರ ಕಚೇರಿ ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದರಿಂದ ಎರಡನೇ ಬಾರಿ ಭಾರತೀಯರಿಗೆ ಸಂದೇಶ ರವಾನಿಸಲಾಗಿದೆ. ಯುದ್ದ ಪೀಡಿತ ಪ್ರದೇಶಗಳಿಂದ ಭಾರತೀಯರು ಹೇಗೆ ಸಾಧ್ಯವಾಗುತ್ತದೆ ಹಾಗೇ ಹೊರಟು ಬನ್ನಿ ಎಂದು ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಸಲಹೆ ನೀಡಲಾಗಿದೆ. ಅಕ್ಟೋಬರ್ 19ರಂದು ನೀಡಲಾದ ಹಿಂದಿನ ಸಲಹೆಯನ್ನು ಅನುಸರಿಸಿ ಕೆಲವು ಭಾರತೀಯರು ಈಗಾಗಲೇ ಉಕ್ರೇನ್ ತೊರೆದಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.ಅಕ್ಟೋಬರ್ 19ರಂದು ರಾಯಭಾರ ಕಚೇರಿ ನೀಡಿದ ಸಲಹೆಯ ಮುಂದುವರಿಕೆಯಾಗಿ, ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಈ ಹಿಂದೆ ನೀಡಿದ್ದ ಸೂಚನೆಯನ್ವಯ ಹಲವಾರು ದೇಶ ತೊರೆದಿದ್ದಾರೆ ಎನ್ನಲಾಗಿದೆ. ಇನ್ನೂ ಯಾರಾದರೂ ದೇಶದಿಂದ ನಿರ್ಗಮಿಸಲು ಉಕ್ರೇನಿಯನ್ ಗಡಿಗೆ ಪ್ರಯಾಣಿಸಲು ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸುವಂತೆ ರಾಯಭಾರ ಕಚೇರಿ ಹೇಳಿದೆ.






