MADAPPA’S DEEPAVALI: ಮಾದಪ್ಪನ‌ ದೀಪಾವಳಿ ತೇರು: ಭಕ್ತ ಸಾಗರದ ನಡುವೆ ಹಬ್ಬ ಆಚರಣೆ: ಡ್ರೋಣ್ ನಲ್ಲಿ ವೈಭವ ಸೆರೆ!

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ರಥೋತ್ಸವ ಇಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇಂದು ಬೆಳಗ್ಗೆ 9.15ಕ್ಕೆ ರಥಕ್ಕೆ ಚಾಲನೆ ಕೊಟ್ಟದ್ದೇ ತಡ ಉಘೇ ಮಾದಪ್ಪ, ಮಾಯಕಾರ ಮಾದಪ್ಪ ಎಂಬ ಲಕ್ಷಾಂತರ ಧ್ವನಿಗಳ ಜಯಘೋಷ ಮಾರ್ದನಿಸಿತು.‌ ಅಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉತ್ಸಾಹದಿಂದ ರಥ ಎಳೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು.

ರಥೋತ್ಸವ ದಿನವಾದ ಇಂದು ರಾಜ್ಯದ ಮೂಲೆ – ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸಿದ್ದು, ಕಳೆದ 4 ದಿನಗಳಿಂದ ಲಕ್ಷ- ಲಕ್ಷ ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ ಪಡೆದಿದ್ದಾರೆ. ಮಹದೇಶ್ವರನ ಪ್ರಸಾದವಾದ ಲಾಡು ಕಳೆದ 2 ದಿನದಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಲಾಡು ಮಾರಾಟವಾಗಿದೆ.‌

More News