ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರ ಒಬ್ಬರು ಎಲಿಮಿನೇಟ್ ಆಗ್ತಾರೆ. ಈ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆಗೆ ಕ್ಯಾಪ್ಟನ್ ಆಗಿದ್ದ ಸಾನ್ಯ ಐಯ್ಯರ್ ನೇರವಾಗಿ ಆರ್ಯವರ್ಧನ್ ಗುರೂಜಿ ಅನ್ನು ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ನೊಂದುಕೊಂಡಿರುವ ಗುರೂಜಿ ದೊಡ್ಮನೆಯಲ್ಲಿ ನನಗೆ ಸೂಸೈಡ್ ಮಾಡಿಕೊಳ್ಳುವಷ್ಟು ಬೇಜಾರಾಗಿದೆ ಎಂದಿದ್ದಾರೆ.

ಬಿಗ್ ಬಾಸ್ ಮನೆಯ ಕೆಲವರನ್ನು ನನ್ಮಗಳು, ನನ್ಮಗ ಅಂತೆಲ್ಲಾ ಅಕ್ಕರೆಯಿಂದ ಸಂಬೋಧಿಸುತ್ತಿದ್ದರು ಗುರೂಜಿ. ಇದೀಗ ಮನೆಯಲ್ಲಿ ಆ ಮಕ್ಕಳೇ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದಿರುವ ಗುರೂಜಿ, ಯಾರನ್ನೂ ಅಭಿಮಾನದಿಂದ, ಪ್ರೀತಿಯಿಂದ ಕರೆಯುತ್ತಿದ್ದರೋ ಅಂಥವರು ಚೂರಿ ಹಾಕಿದಂತೆ ಭಾಸವಾಗುತ್ತಿದೆ. ಈ ಮನೆಯು ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುವಷ್ಟು ನೋವುಂಟು ಮಾಡಿದೆ ಎಂದಿದ್ದಾರೆ.
ಮನೆಯಲ್ಲಿ ಒಂದೇ ತಟ್ಟೆಯಲ್ಲಿ ತಿನ್ನುತ್ತಾ, ಹಾಡುತ್ತಾ, ಕುಣಿಯುತ್ತಿದ್ದವರು ನಾಮಿನೇಷನ್ ವಿಷಯದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರು ಭಿನ್ನವಾಗಿ ಯೋಚಿಸುತ್ತಾರೆ. ನಾನು ಬಚಾವಾದರೆ ಸಾಕೆನ್ನುವ ಮನಸ್ಥಿತಿ ಇರೋರಿದ್ದಾರೆ ಎಂದು ಗುರೂಜಿ ಅಸಮಾಧಾನ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ ಮತ್ತು ಆರ್ಯವರ್ಧನ್ ಗುರೂಜಿ ವಿಚಾರದಲ್ಲೂ ಅದೇ ಆಯಿತು. ನಾಮಿನೇಷನ್ ಪ್ರಕ್ರಿಯೆ ನಡೆದಾಗ, ನೇರವಾಗಿ ನಾನು ಆರ್ಯವರ್ಧನ್ ಗುರೂಜಿಯನ್ನು ನಾಮಿನೇಟ್ ಮಾಡುವೆ ಎಂದು ಸಾನ್ಯ ಹೇಳಿದರು. ನಿಜಕ್ಕೂ ಇದು ಶಾಕಿಂಗ್ ವಿಚಾರವಾಗಿತ್ತು ಗುರೂಜಿಗೆ.

ದೊಡ್ಮನೆಯಲ್ಲಿ ಈ ವಾರದ ಕ್ಯಾಪ್ಟನ್ ಆಗಿ ಸಾನ್ಯ ಐಯ್ಯರ್ ನೇಮಕವಾಗಿದ್ದರು. ಹೀಗಾಗಿ, ಈ ವಾರದ ಎಲಿಮಿನೇಷನ್ ಗೆ ಒಬ್ಬರನ್ನು ನಾಮಿನೇಟ್ ಮಾಡಲು ಅವಕಾಶ ಇತ್ತು. ಆ ಸಂದರ್ಭದಲ್ಲಿ ಸಾನ್ಯ ಗುರೂಜಿಯನ್ನು ಆಯ್ಕೆ ಮಾಡಿಕೊಂಡರು. ಇದು ಮನೆಯ ಇತರೆ ಸದಸ್ಯರಿಗೂ ಶಾಕ್ ನೀಡಿತು. ಇದರಿಂದ ಕೋಪಗೊಂಡ ಗುರೂಜಿ, ಸಾನ್ಯ ಮೇಲಿನ ಸೇಡನ್ನು ನಾನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಮುಂದೊಂದು ದಿನ ನನಗೆ ಅಧಿಕಾರ ಬಂದರೆ, ಸಾನ್ಯರನ್ನು ನಾಮಿನೇಟ್ ಮಾಡುತ್ತೇನೆ ಎಂದು ಸಾನ್ಯ ವಿರುದ್ಧ ಕಿಡಿಕಾರಿದರು ಆರ್ಯವರ್ಧನ್ ಗುರೂಜಿ.
#BIGG BOSS HOUSE #ARYAVERDHAN GURUJI #SANYA IYYER #SUICIDE #DISSAPPOINTED #ELEMINATOR #THIS WEEK




